ಜೈಲು ಜಾಮರ್ ನಾಟಕ: ಕಾಮತ್-ಶೇಣವ ವಿರುದ್ಧ ಕಾಂಗ್ರೆಸ್ ಬಾಂಬ್!

108.8K Views 4w ago

ಮಂಗಳೂರು: ಕೊಡಿಯಾಲಬೈಲ್ ಜೈಲಿನ ಜಾಮರ್ ವಿಚಾರ ಈಗ ಮಂಗಳೂರಿನಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಜಾಮರ್ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್ ನೇರ ಆರೋಪ ಮಾಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
“ಜಾಮರ್ ನಿರ್ವಹಣೆ ಮಾಡುವುದು ರಾಜ್ಯ ಸರ್ಕಾರ ಅಲ್ಲ, ಕೇಂದ್ರದ TCIL ಸಂಸ್ಥೆ. ಸತ್ಯ ಗೊತ್ತಿದ್ದೂ ಮುಚ್ಚಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಇಚ್ಛಾಶಕ್ತಿ ಇದ್ದಿದ್ದರೆ ದೆಹಲಿಯಲ್ಲಿ ತಮ್ಮದೇ ಸಂಸದ ಬ್ರಿಜೇಶ್ ಚೌಟ ಮೂಲಕ ಸಮಸ್ಯೆ ಬಗೆಹರಿಸಬಹುದಿತ್ತು” ಎಂದು ಗುಡುಗಿದರು.
ಅಲ್ಲದೆ, ಈ ಬಗ್ಗೆ ಈಗಾಗಲೇ ಹೈಕೋರ್ಟ್ ನಲ್ಲಿ PIL ದಾಖಲಾಗಿದ್ದು, TCIL ಸಂಸ್ಥೆಯೇ ‘ಜಾಮರ್ ಸರಿ ಮಾಡಿದ್ದೇವೆ’ ಎಂದು ಕೋರ್ಟ್ ಗೆ ವರದಿ ಕೊಟ್ಟಿದೆ. ಸಮಸ್ಯೆ ಇದ್ದರೆ ಕೋರ್ಟ್ ನಲ್ಲೇ ಪ್ರಶ್ನಿಸಬೇಕಿತ್ತು. ಸಂಪುಟ ಸಭೆಗೆ ಮುತ್ತಿಗೆ ಹಾಕುತ್ತೇವೆ ಎನ್ನುವುದು ಕೇವಲ ರಾಜಕೀಯ ಸ್ಟಂಟ್ ಎಂದು ಕಿಡಿಕಾರಿದರು.
ವಕೀಲರ ಸಂಘದ ಅಧ್ಯಕ್ಷರಾಗಿ ಶೇಣವ ಅವರು ಜಾಮರ್ ಬಿಟ್ಟು, ಹೈಕೋರ್ಟ್ ಪೀಠ, ವಕೀಲರ ಭವನ, ಕೋರ್ಟ್ ಗಳ ಮೂಲಸೌಕರ್ಯದ ಬಗ್ಗೆ ಸರ್ಕಾರದ ಬಳಿ ಮಾತನಾಡಬೇಕಿತ್ತು ಎಂದು ಅವರು ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಂದಿನಿ, ಶಾಹಿದ್ ಬಡ್ಡೂರು, ಉಷಾ ಎಸ್., ಅರುಣಾ ಬಿ.ಪಿ., ಸುದರ್ಶನ್ ಮುಳಿಯ, ವಿನೋದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು

Read More News

Scroll to Top