ಅಂತಾರಾಷ್ಟ್ರೀಯ ಖ್ಯಾತಿ ಹೆಸರಾಂತ ಮತ್ತು ಯಶಸ್ವೀ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರಿಂದ ತರಬೇತಿ ಪಡೆದ Mp mla’s news. ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.

40.8K Views 12h ago

ಮಂಗಳೂರು : ವೈದ್ಯಕೀಯ ಜಗತ್ತಿಗೆ ಸಾಧ್ಯವಾಗದ, ಸವಾಲೆನಿಸುವಂಥ ಅದೆಷ್ಟು ಪ್ರಕರಣಗಳನ್ನೂ ಯೋಗ ಪ್ರಾಣ ವಿದ್ಯಾ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಾಗುತ್ತಿದ್ದು,ಇದರ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಮನಗಂಡು ಭವಿಷ್ಯದಲ್ಲಿ ಟ್ರಸ್ಟ್ ಮೂಲಕ ವಿಸ್ತಾರ ಸಮಾಜಸೇವೆಯ ದೃಷ್ಟಿಕೋನವಿರಿಸಿರುವ Mp mla’s news ಪತ್ರಿಕೆ ಮತ್ತು mpmlasnewstv 24*7 news portal ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಅಂತಾರಾಷ್ಟ್ರೀಯ ಖ್ಯಾತಿಯ ಜನಪ್ರಿಯ ಮತ್ತು ಅನುಭವಿ , ಹಿರಿಯ ಹಾಗೂ ಯಶಸ್ವಿ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರಿಂದ ಯೋಗ ಪ್ರಾಣ ವಿದ್ಯಾ ಚಿಕಿತ್ಸೆ ಬಗ್ಗೆ ತರಬೇತಿ ಪಡೆದರು.

ಮಂಗಳೂರಿನಲ್ಲಿ ಯೋಗ ಪ್ರಾಣ ವಿದ್ಯಾ ಫೌಂಡೇಶನ್ ಟ್ರಸ್ಟ್(R) ನಡೆಸಿದ ಯೋಗ ಪ್ರಾಣ ವಿದ್ಯಾ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ತರಬೇತುದಾರರಾದ ಮೋಹನ್ ದಾಸ್ ಬಾಳಿಗಾ ಅವರು ತರಬೇತಿ ನಡೆಸುತ್ತಿದ್ದು, ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ತರಬೇತಿ ಪಡೆದರು. ಈ ಬಗ್ಗೆ ಯೋಗ ಪ್ರಾಣ ವಿದ್ಯಾ ಚಿಕಿತ್ಸಕ ಕೆ.ಮೋಹನ್ ದಾಸ್ ಬಾಳಿಗಾ ಅವರು ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಸರ್ಟಿಫಿಕೇಟ್ ನೀಡಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಎಂಬಿಎ ಸ್ನಾತಕೋತ್ತರ ಪದವಿ ಮತ್ತು ಪಿಜಿ ಡಿಪ್ಲೋಮಾ, ಜನರಲ್ ಮ್ಯಾನೇಜ್ ಮೆಂಟ್ ನಲ್ಲಿ ಗರಿಷ್ಠ ಅಂಕಗಳೊಂದಿಗೆ ಪಿಜಿ ಡಿಪ್ಲೋಮಾ , ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಇಂಡಿಯನ್ ಕೌನ್ಸಿಲ್ ಫಾರ್ ಎಜುಕೇಶನ್ ಮಿಷನ್ ನಿಂದ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ.ಆಯೇಷಾ ಖಾನo ಅಧ್ಯಕ್ಷರಾಗಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ಇದರ ವತಿಯಿಂದ ಮುಡಿಪು ಇನ್ಫೋಸಿಸ್ ನಲ್ಲಿ ಇನ್ಫೋಸಿಸ್ ಸಂಸ್ಥೆಯ ಜಂಟಿ ಸಹಕಾರದೊಂದಿಗೆ ನಡೆಸಿದ ಕೃತಕ ಬುದ್ಧಿಮತ್ತೆ AI ಶಿಬಿರದಲ್ಲಿ ತರಬೇತಿ, ಎರಡು ಬಾರಿ ಯೂನಿಸೆಫ್ ನಿಂದ ಮಕ್ಕಳ ಹಕ್ಕುಗಳು, ಕಾನೂನು ಮತ್ತು ರಕ್ಷಣೆ ಬಗ್ಗೆ ತರಬೇತಿ, ಕರ್ನಾಟಕ ಪತ್ರಿಕಾ ಅಕಾಡೆಮಿಯಿಂದ ಪತ್ರಿಕೋದ್ಯಮದ ಬಗ್ಗೆ ತರಬೇತಿ, ನೀನಾಸಂ ಹೆಗ್ಗೋಡು ಸಾಂಸ್ಕೃತಿಕ ಶಿಬಿರದಲ್ಲಿ ರಂಗ ಶಿಕ್ಷಣ, ನಟನೆ, ನಾಟಕ ರಚನೆ, ನಿರ್ದೇಶನದ ಬಗ್ಗೆ ತರಬೇತಿ ಪಡೆದಿರುವ ಡಾ.ಅಶೋಕ್ ಶೆಟ್ಟಿ ಬಿ.ಎನ್ ಅವರು 1997 ರಲ್ಲಿ ಸ್ಥಾಪನೆಗೊಂಡ ಕೃತ್ತಿಕಾಬ್ರಹ್ಮ ಕಲಾವಿದರು ಮಂಗಳೂರು ತಂಡದ ವ್ಯವಸ್ಥಾಪಕರಾಗಿ 10 ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.ಅವುಗಳ ಪೈಕಿ, ಅಮ್ಮ, ಒಂಜಪ್ಪೆ ಜೋಕ್ಲು ಜನಪ್ರಿಯ ನಾಟಕಗಳು.ಅಮ್ಮ ನಾಟಕಕ್ಕೆ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಮೆಚ್ಚುಗೆ ಪ್ರಶಸ್ತಿ ಬಂದಿದೆ.ಡಾ. ಅಶೋಕ್ ಶೆಟ್ಟಿ. ಬಿ. ಎನ್ ಅವರು ಕೃತ್ತಿಕಾಬ್ರಹ್ಮ ಕಾವ್ಯನಾಮದಿಂದ ನಿರ್ಭಿತ ಪತ್ರಿಕೋದ್ಯಮ, ರಂಗಭೂಮಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿದ್ದಾರೆ. ಸವ್ಯಸಾಚಿ ಪುನರೂರು (ಕನ್ನಡ ), punarooru -75,(English),ಸಂಸತ್ತಿನಲ್ಲಿ ಕಟೀಲ್ ಕೇಳಿದ ಪ್ರಶ್ನೆಗಳು ಕೃತಿಗಳನ್ನು ರಚಿಸಿದ್ದಾರೆ.ಈ ಹಿಂದೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರುವ IFSMN (R), New Delhi ನ 2004ರಲ್ಲಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು ಕಳೆದ 2 ಅವಧಿಗಳಲ್ಲಿ ಸತತವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೌಹಾರ್ದ ಸಂಗಮದ ಸಂಘಟಕರಾಗಿ ಮಂಗಳೂರು ಟೌನ್ ಹಾಲ್ ನಲ್ಲಿ 12 ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದು ಒಟ್ಟಿನಲ್ಲಿ 13 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ 300 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿರುವ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ. ಮಂಗಳೂರು ಪ್ರೆಸ್ ಕ್ಲಬ್ ನಿಂದ ಗೌರವ ಸನ್ಮಾನ ದುಬೈ ಬಿಲ್ಲವರ ಬಳಗ, ಚಾವಡಿ ಶಿಕ್ಷಣ ಸಮಿತಿ ಕಳ್ಳಿಗೆ ಗ್ರಾಮ,ನೇತಾಜಿ ಯುವಕ ಮಂಡಲ ಕುಪ್ಪಿಲ, ಲಾಠಿ ಚಾರ್ಜ್ ಪತ್ರಿಕೆ,ಮಂಗಳೂರು ಮಲ್ಲ ಪತ್ರಿಕೆ,ಸುಮಸೌರಭ ಪತ್ರಿಕೆ, ಜಾಗತಿಕ ಬಂಟರ ಸಂಘ ಮೊದಲಾದ ಸಮಾಜ ಸೇವಾ ಸಂಘ – ಸಂಸ್ಥೆ, ಮಾಧ್ಯಮ ಸಂಸ್ಥೆಗಳಿಂದ ಸನ್ಮಾನ, ಜೋಡುಮಾರ್ಗ ಜೂನಿಯರ್ ಚೇಂಬರ್ ನಿಂದ ಉತ್ತಮ ವರದಿಗಾರ ಪ್ರಶಸ್ತಿ, ಮ್ಯಾಕ್ಸ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ನಿಂದ ಸೇವಾರತ್ನ ಪ್ರಶಸ್ತಿ ದೊರಕಿವೆ. ಡೈಲಿ 10 ನ್ಯೂಸ್ ಟಿವಿ ಚಾನೆಲ್ ನಲ್ಲಿ ಸುದ್ದಿ ಸಂಪಾದಕರಾಗಿದ್ದ ಇವರು ವಿಜಯಕರ್ನಾಟಕ, ಕೆನರಾಟೈಮ್ಸ್, ಕನ್ನಡ ಜನಾಂತರಂಗ, ಕರಾವಳಿ ಅಲೆ, ಮಂಗಳೂರು ಮಿತ್ರ,ಹೊಸ ಸಂಜೆ, ಕೃತ್ತಿಕಾ ಬ್ರಹ್ಮ, ಅಗ್ನಿ, ಪೊಲೀಸ್ ನ್ಯೂಸ್,ಪೊಲೀಸ್ ವರ್ಲ್ಡ್, ಕ್ರೈಂ ವಾರ್ತೆ, ನಮ್ಮ ಭೂಮಿ ಸೇರಿದಂತೆ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ದುಡಿದು ಪ್ರಸ್ತುತ Mp mla’s news ಮತ್ತು mpmlasnewstv 247ನ ಸಂಪಾದಕರಾಗಿದ್ದಾರೆ. mpmlasnewstv 247 news portal ದೇಶ ವಿದೇಶಗಳಲ್ಲಿ 0.15 ಮಿಲಿಯನ್ ಫಾಲ್ಲೋರ್ಸ್ ಗಳನ್ನು ಹೊಂದಿದೆ.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

Scroll to Top