ಮೂಲ್ಕಿ : ಮಕ್ಕಳ ಮೇಳವೆಂದೆ ಕಳೆದ 19 ವರ್ಷದಿಂದ ಪ್ರಸಿದ್ಧಿಯಾಗಿರುವ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡವು ಇದೀಗ ಯುವ ಕಲಾವಿದರೊಂದಿಗೆ ಸದೃಢವಾಗಿದ್ದು, ಇತ್ತೀಚೆಗಷ್ಟೇ ತನ್ನ ,11ನೇ ವರ್ಷದ ಮುಂಬೈ ಪ್ರವಾಸವನ್ನು ಉಶಸ್ವಿಯಾಗಿ ನಿರ್ವಹಿಸಿದೆ.
ಇದೀಗ ಅಕ್ಟೋಬರ್ 18ರಂದು ಪ್ರಪ್ರಥಮ ಬಾರಿಗೆ ಕೊಚ್ಚಿಗೆ ಪ್ರಯಾಣ ಬೆಳೆಸಲಿದೆ.
ಸಾಂಸ್ಕೃತಿಕ ಕಲಾ ಉಪಾಸಕ ಕೊಳುವೈಲು ಎಸ್.ಎಸ್. ಸತೀಶ್ ಭಟ್ ಇವರ ಮಾರ್ಗದರ್ಶನದಲ್ಲಿ ಮೇಳದ ಸಂಚಾಲಕ ಜಯಂತ್ ಅಮೀನ್ ಇವರ ನೇತೃತ್ವದಲ್ಲಿ ಚೆನ್ನೈನ, ಕೊಚ್ಚಿಯ ತ್ರಿಪುಣಿಪುರದಲ್ಲಿ ಸಂಜೆ 6ಕ್ಕೆ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಎಸ್ ಶ್ರೀನಿವಾಸನ್ ಇವರ ಸೇವಾರ್ಥವಾಗಿ ಶ್ರೀನಿವಾಸ ಕಲ್ಯಾಣ ಪ್ರಸಂಗ ನಡೆಯಲಿದ್ದು ಸುಮಾರು 22 ಕಲಾವಿದರು ಹಾಗೂ ಮೇಳದ ವೇಷಭೂಷಣದ ನಿರ್ವಹಣೆಯ ಕಲಾಕಾರರು ಭಾಗವಹಿಸಲಿದ್ದು ಭಾಗವತರಾಗಿ ಕಾವ್ಯಶ್ರೀ ಅಜೇರು ಇವರು ಭಾಗವಹಿಸಲಿದ್ದಾರೆ ಎಂದು ಮೇಳದ ಸಂಚಾಲಕ ಜಯಂತ್ ಅಮೀನ್ ಕೆರೆಕಾಡು ಇವರು ತಿಳಿಸಿದ್ದಾರೆ.














































































































































































