ಪರಿಚಯ ಲೇಖನ :ಡಾ. ಅಶೋಕ್ ಶೆಟ್ಟಿ. ಬಿ. ಎನ್.
ಬೆಂಗಳೂರು: ಕಾರ್ಕಳ ತಾಲೂಕಿನ ಮುನಿಯಾಲುವಿನ ಹೆಮ್ಮೆ ಯ ಸುಪುತ್ರ ಜಿ.ಎಸ್. ಗಂಗಾಧರ ಆಚಾರ್ಯ ಅವರು ಇಂದು ದೇಶದ ಪ್ರತಿಷ್ಠಿತ ಮೂಲಸೌಕರ್ಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಅಲಂಕರಿಸಿ ಮಾದರಿಯಾಗಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಶಾಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (VIL) ಸಂಸ್ಥೆಯಲ್ಲಿ ಸೀನಿಯರ್ ಮ್ಯಾನೇಜರ್ (ಮೆಕ್ಯಾನಿಕಲ್) – ಆಪರೇಷನ್ & ಮೆಂಟೆನೆನ್ಸ್,- ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಳ್ಳಿಯ ಸರಳ ಬದುಕಿನಿಂದ ಬಂದು, ತಮ್ಮ ಪರಿಶ್ರಮ, ತಾಂತ್ರಿಕ ಜ್ಞಾನದಿಂದ ಇಂದು ಭಾರತದಾದ್ಯಂತ ನಡೆಯುವ ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ರಾಜೆಕ್ಟ್ಗಳಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ವಾಯು ಸೇನಾ ನೆಲೆ, ಸೇನಾ ಶಸ್ತ್ರಾಗಾರ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮಿಲಿಟರಿ ಕಟ್ಟಡ ಇತ್ಯಾದಿ ಕೇಂದ್ರ ಸರಕಾರದ ಪ್ರಾಜೆಕ್ಟ್ಗಳಲ್ಲಿ ಜವಾಬ್ದಾರಿಯ ಹುದ್ದೆಯಲ್ಲಿ ಸೇವೆ ಗಯ್ಯುತ್ತಿದ್ದಾರೆ, ಕಾರ್ಕಳ ಭಾಗದ ಯುವಜನತೆಗೆ ಇವರು ಮಾದರಿ ವ್ಯಕ್ತಿ. ಗ್ರಾಮದ ಸಂಸ್ಕೃತಿ, ವಿನಯತೆಯನ್ನು ಕಾರ್ಪೊರೇಟ್ ಕ್ಷೇತ್ರದಲ್ಲೂ ಉಳಿಸಿಕೊಂಡಿರುವ ಹೆಮ್ಮೆಯ ತುಳುನಾಡ ಕನ್ನಡಿಗ. ಇವರು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೋಬೈಲ್ ಇಂಜಿನಿಯರಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಶೋಕ ನಗರದ ಬಿಸಿಯಂ ಹಾಸ್ಟೆಲ್ ನಲ್ಲಿದ್ದರು. ಇವರ ಸಾಧನೆ ಬಗ್ಗೆ Mp MLA’s News ಅಭಿನಂದನೆ ಸಲ್ಲಿಸಿದ್ದು, ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಇವರ ಕಾಲೇಜ್ ದಿನದ ಸಹಪಾಠಿಯಾಗಿದ್ದು, ಗಂಗಾಧರ್ ಅವರು ಬಾಲ್ಯದಿಂದಲೂ ನಾಯಕತ್ವದ ಗುಣ ಹೊಂದಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಟ.ಛಲ, ಧ್ಯೇಯ,ದೃಢ ಸಂಕಲ್ಪ ಉಳ್ಳವರಾಗಿದ್ದರು. ಅವರಲ್ಲಿ ನಿಸ್ವಾರ್ಥತೆ, ಅನ್ಯಾಯ ಪ್ರತಿಭಟಿಸುವ ಗುಣ, ನಿರ್ಮಲ ಮನಸ್ಸು, ನಿರ್ಧಾರದಲ್ಲಿ ಸ್ಪಷ್ಟತೆ, ಆಧ್ಯಾತ್ಮಿಕ ಜ್ಞಾನ, ಸಹನೆ, ರಾಷ್ಟ್ರೀಯತೆ, ಏಕತೆ, ಪರೋಪಕಾರಿ ಮನಸ್ಸು ಇದ್ದವು. ಅದೇ ಇವತ್ತು ಇಷ್ಟೊಂದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತ್ತೆಂದೂ ಸಂಪಾದಕರು ಗಂಗಾಧರ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ. ಅಲ್ ದಿ ಬೆಸ್ಟ್ ಗಂಗಾಧರ್ ಸರ್, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಶಕ್ತಿ ದೇವರು ನಿಮಗೆ ಅನುಗ್ರಹಿಸಲಿ ಎಂದು Mp MLA’s News ಶುಭ ಹಾರೈಸುತ್ತದೆ
FROM MUNIYALU TO CORPORATE PINNACLE: THE INSPIRING JOURNEY OF
G.S. GANGADHAR ACHARYA
Mangaluru / Bengaluru:*
Mr. G.S. Gangadhar Acharya, a proud son of Muniyalu village in Karkala Taluk, has brought laurels to coastal Karnataka by securing a top leadership position in the infrastructure sector.
Mr. Acharya is currently serving as Senior Manager (Mechanical) – Operation & Maintenance- Pan India Projects, at Vishal Infrastructure Limited (VIL), Basavanagudi, Bengaluru – one of nation’s leading infrastructure development companies , executing multi-crore projects like International Airports , Domestic Airports , Airforce Runways, Military Engineering Projects, DRDO Projects, Smart City Railway Stations , National Highways and Special purpose building projects across India.
From a humble village background, through sheer hard work, technical expertise and dedication, he now shoulders the responsibility of managing critical operations nationwide.
Mr. Acharya completed his Automobile Engineering at Karnataka Polytechnic, Mangaluru (KPT)* and stayed at BCM govt. Hostel, Ashok Nagar, during his college days.
Later on in his professional life he studied MBA in Human Resources, in Sikkim Manipal University at Wisdom Institute, Dubai UAE.
He is a true Role Model for the youth of Muniyalu and Karkala, who has retained the culture and humility of his village even in the corporate world.
Dr. Ashok Shetty B.N., Editor of MP MLA’s News and his former classmate, lauded his achievement and said, “Gangadhar had leadership qualities since childhood to college days. He had the strong determination and ambition in life. His spiritual knowledge, selflessness, dedication, helping nature, nature of tolerance, patriotism, integrity helped him to achieve something in life. His fight against injustice, philanthropic mindset and hard work have taken him to this top position today.”
MP MLA’s News congratulates Mr. Acharya and wishes him more success in the future.













































































































































































