ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿಜೀವೋತ್ತಮ ಮಠದ ಮೂಲಕ ‘ರಾಮ ನಾಮ ತಾರಕ ಮಂತ್ರ ಜಪ ಅಭಿಯಾನ’ : 550 ಕೋಟಿ ಮಂತ್ರ ಜಪದ ಗುರಿ

108.7K Views 22 May 2024

ಮಂಗಳೂರು, ಮೇ.22; ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿಜೀವೋತ್ತಮ ಮಠದ 550 ವರ್ಷದ ಪರ್ವ ಕಾಲದ ಸಂಭ್ರಮದ ಅಂಗವಾಗಿ ಅಕ್ಟೋಬರ್ 18,2025 ರೊಳಗೆ 550ಕೋಟಿ ರಾಮ ನಾಮ ತಾರಕ ಮಂತ್ರ ಜಪಿಸುವ ಗುರಿ ಹೊಂದಲಾಗಿದೆ.ಇದುವರೆಗೆ 34 ದಿನಗಳಲ್ಲಿ 80 ಲಕ್ಷ ರಾಮ ತಾರಕ ಮಂತ್ರ ಜಪ ಮಾಡಲಾಗಿದೆ.ಈ ಜಪವು ಪರಮ ಪೂಜ್ಯ ಗುರುವರ್ಯ ಶ್ರೀ ವಿದ್ಯಾಧೀಶ ವಡೇರ ಸಂಕಲ್ಪದಂತೆ 17ನೇ ಏಪ್ರಿಲ್ 2024 ರ ರಾಮ ನವಮಿಯಂದು ಕರ್ನಾಟಕ, ಮುಂಬಯಿ ಸೇರಿದಂತೆ ಸಂಸ್ಥಾನದ ಎಲ್ಲಾ ಮಠಗಳ ಶಾಖೆಗಳಲ್ಲಿ ಆರಂಭಗೊಂಡಿದೆ. ಈ ಜಪ 18 ಅಕ್ಟೋಬರ್ 2025 ರವರೆಗೆ ಮುಂದು ವರಿಯುತ್ತದೆ. ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಈ ಅಭಿಯಾನದ ಅಂಗವಾಗಿ ಮಂಗಳೂರು ರಥ ಬೀದಿಯ ಶ್ರೀಗೋಕರ್ಣ ಪರ್ಥಗಾಳಿ ಜೀವೋತ್ತಮ ಶಾಖಾ ಮಠದಲ್ಲಿ ಶ್ರೀರಾಮ ನವಮಿಯಂದು ಆರಂಭಗೊಂಡು ಮೂರು ನಾಲ್ಕು ಪಾಳಿಗಳಲ್ಲಿ ನಡೆಯುತ್ತದೆ. ಮೇ 19 ರಂದು 1580 ಜಪಕರು ಒಟ್ಟು 20.83 ಲಕ್ಷ ರಾಮನಾಮ ತಾರಕ ಮಂತ್ರ ಜಪ ಮಾಡಿ ದರು ಈ ಅಭಿಯಾನದಲ್ಲಿ ಕಾಸರಗೋಡು, ಕಾಂಞಗಾಡ್,ಪುತ್ತೂರು,ಉಳ್ಳಾಲ,ಸುರತ್ಕಲ್, ಗುರುಪುರ ಸೇರಿದಂತೆ ವೈದಿಕರು ಭಾಗವ ಹಿಸುವ ಮೂಲಕ ಉತ್ತಮ ಪ್ರತಿಕ್ರೀಯೆ ದೊರೆತಿದೆ.ಪ್ರತಿದಿನ ಸರಾಸರಿ 2.4 ಲಕ್ಷ ಜಪವನ್ನು ಮಾಡಲಾ ಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಯಿದೆ.ಒಂದೂವರೆ ಸಂವತ್ಸ ರದವರೆಗೆ ನಡೆಯುವ ಈ ಅಭಿಯಾನದಲ್ಲಿ ಸಮಾಜ ಬಾಂಧವರು ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವಂತೆ ಅಭಿಯಾನದ ಸಂಘಟಕರ ಪ್ರಕಟಣೆ ತಿಳಿಸಿದೆ.

Read More News

Scroll to Top