ಬಂಟ್ವಾಳ:* ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಿದ್ಯಾಭಾರತಿ ಆಶ್ರಯದಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟ 2026-27ರ 17ರ ವಯೋಮಿತಿಯ ಬಾಲಕಿಯರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಇಶಾ ಅನ್ವಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಕಳ್ಳಿಗೆ ನಿವಾಸಿಗಳಾದ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ನಿರ್ದೇಶಕಿ ಶುಭಾ ಬಂಜನ್ ಮತ್ತು ಖ್ಯಾತ ಇಂಜಿನಿಯರ್ ಹಾಗೂ ಸಾಹಿತಿ ಡಾ.ಆನಂದ್ ಬಂಜನ್ ದಂಪತಿಯ ಪುತ್ರಿಯಾಗಿರುವ ಇಶಾ ಅನ್ವಿ, 2023-24ನೇ ಸಾಲಿನ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಬೀದರ್‌ನಲ್ಲಿ ನಡೆದ ರಾಜ್ಯಮಟ್ಟದ ಟೂರ್ನಮೆಂಟ್‌ನಲ್ಲಿಯೂ ಭಾಗವಹಿಸಿದ್ದರು.
ಇಶಾ ಅವರ ಈ ಸಾಧನೆಗೆ ಶಾರದಾ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದೆ.












































































































































































