ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ರೋಶನ್ ನೆಲ್ಲಿಗುಡ್ಡೆ ನಿರ್ದೇಶನದ ಕೊಂಕಣಿ ಫಿಲ್ಮ್‌ನ “ಸೈತಾನಚೊ ಖೆಳ್” ಶೀರ್ಷಿಕೆ ಬಿಡುಗಡೆ. ‘ಯುವ ಸಮಾಜಕ್ಕೆ ಜಾಗೃತಿ ಮೂಡಿಸುವ ಸಿನಿಮಾ ಯಶಸ್ವಿಯಾಗಲಿ’ : ವ.ಫಾ.ಓಸ್ವಾಲ್ಡ್ ಮೊಂತೆರೋ

ಮಂಗಳೂರು : ಯುವ ಸಮುದಾಯವು ಹಾದಿ ತಪ್ಪುತ್ತಿದ್ದು ಅವರನ್ನು ತಿದ್ದುವ ಕೆಲಸ ಸಮಾಜದ ಎಲ್ಲಾ ವರ್ಗದ ಜನರ ಕರ್ತವ್ಯವಾಗಿದೆ. ಯುವ ಸಮಾಜಕ್ಕೆ ಜಾಗೃತಿ ಮೂಡಿಸುವ ಸಿನಿಮಾವು ಯಶಸ್ಸಾಗಲಿ, ಎಲ್ಲಾ ಸಮುದಾಯದ ಜನರೂ ಸಹ ಇಂತಹ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದು ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು ವ. ಫಾ.ಓಸ್ವಾಲ್ಡ್ ಮೊಂತೆರೋ ಹೇಳಿದರು.ಅವರು ಪತ್ರಕರ್ತರಾಗಿ, ಕಿರುತೆರೆಯ ನಿರ್ಮಾಣ, ನಿರ್ದೇಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೋಶನ್ ನೆಲ್ಲಿಗುಡ್ಡೆಯವರ ಚೊಚ್ಚಲ ನಿರ್ದೇಶನದ ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ನಿರ್ಮಾಣದ ಕೊಂಕಣಿ ಫಿಲ್ಮ್‌ನ “ಸೈತಾನಚೊ ಖೆಳ್” ಟೈಟಲ್‌ನ್ನು ಕಿನ್ನಿಗೋಳಿ ಮೂರುಕಾವೇರಿಯ ಬಳಿಯ ನೆಲ್ಲಿಗುಡ್ಡೆ ರೋಡ್ರಿಗಸ್ ಕಾಂಪೌಂಡ್‌ನ ಆವರಣದಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಕಿನ್ನಿಗೋಳಿ ಸಂಜೀವಿನಿ ಸೇವಾ ಸಂಸ್ಥೆಯ ಆಗ್ನೆಸ್ ಫ್ರಾಂಕ್ ಬಿ.ಎಸ್., ಹಾಗೂ ನೆಲ್ಲಿಗುಡ್ಡೆ ಸೈಂಟ್ ಲಾರೆನ್ಸ್ ವಾರ್ಡಿನ ಅಧ್ಯಕ್ಷೆ ಎವುಜಿನ್ ಸಲ್ಡಾನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮಂಗಳೂರು ಉತ್ತರ ವಲಯದ ಕ್ಯಾಥೋಲಿಕ್ ಸಭಾದ ಅಧ್ಯಕ್ಷೆ ಮೆಲ್ರಿಡಾ ಜೇನ್ ರೋಡ್ರಿಗಸ್, ಕಿರೆಂ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿಕೋಸ್ತ, ಮಂಗಳೂರು ಕರ್ನಾಟಕ ಬ್ಯಾಂಕ್‌ನ ಓಸ್ವಾಲ್ಡ್ ಜೋಸೆಫ್ ಡಿಸೋಜಾ, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಪತ್ರಕರ್ತ ಕಲಾವಿದ ನರೇಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.ಚಿತ್ರ ನಿರ್ಮಾಪಕ ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಸಿನಿಮಾ ನಿರ್ಮಾಣದ ಬಗ್ಗೆ ವಿವರಿಸಿದರು. ನಿರ್ದೇಶಕ ರೋಶನ್ ನೆಲ್ಲಿಗುಡ್ಡೆ ಅವರು ಸಿನಿಮಾದ ಉದ್ದೇಶ ಹಾಗೂ ಕಥಾ ಸಾರಾಂಶವನ್ನು ತಿಳಿಸಿದರು.ರೀನಾ ಡಿಸೋಜಾ ನೆಲ್ಲಿಗುಡ್ಡೆ ಸ್ವಾಗತಿಸಿದರು, ಜಾನೆಟ್ ಕುಟಿನ್ಹೋ ಕಜಗುರಿ ವಂದಿಸಿದರು, ಸಾನಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.“ಸೈತಾನಚೊ ಖೆಳ್” ಕೊಂಕಣಿ ಸಿನಿಮಾ :ಹಾದಿ ತಪ್ಪುತ್ತಿರುವ ಇಂದಿನ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸುವ ಕಥಾನಕವೇ “ಸೈತಾನಚೊ ಖೆಳ್” ಸಿನಿಮಾದ ವಿಶೇಷತೆಯಾಗಿದೆ. ಈ ಸಿನಿಮಾ ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ತಮ್ಮ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಹರೀಶ್ ಪಿ. ಕೋಟ್ಯಾನ್, ಸಂಗೀತ ಡೊಲ್ವಿನ್ ಕೊಳಲ್ ಗಿರಿ, ಸಾಹಿತ್ಯ ವಿಲ್ಸನ್ ಕಟೀಲು, ಸ್ಕ್ರೀನ್ ಪ್ಲೇ ನೋರ್ಬಟ್ ಜಾನ್ ಮಂಗಳೂರು. ಸಂಕಲನ ದೇವಿಪ್ರಕಾಶ್ ಮಂಗಳೂರು, ಕಾರ್ಯಕಾರಿ ನಿರ್ಮಾಪಕರಾಗಿ ವಿನ್ಸೆಂಟ್ ಮಂಗಳೂರು, ನಿರ್ಮಾಣ ನಿರ್ವಹಣೆಯಲ್ಲಿ ವಿಲ್ಸನ್ ರೋಡ್ರಿಗಸ್ ಹಾಗೂ ಪಿಆರ್‌ಒ ಆಗಿ ನರೇಂದ್ರ ಕೆರೆಕಾಡು ಹಾಗೂ ಪ್ರಚಾರ ಕಾರ್ಯವನ್ನು ರಾಕೇಶ್ ಎಕ್ಕಾರು ಅವರ ಚಿಗುರು ಸಂಸ್ಥೆ ನಿರ್ವಹಿಸಲಿದೆ. ಸ್ಥಳೀಯ ಗ್ರಾಮೀಣ ಕಲಾವಿದರು ಹಾಗೂ ಹೊಸ ಮುಖಗಳು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಕಥೆ ಹಾಗೂ ನಿರ್ದೇಶನದ ಜವಬ್ದಾರಿ ಹೊತ್ತಿರುವ ರೋಶನ್ ನೆಲ್ಲಿಗುಡ್ಡೆ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನವಂಬರ್ 10 ರಂದು ಸುರತ್ಕಲ್ ನಲ್ಲಿ ರಂಗ ಚಾವಡಿ ವರ್ಷದ ಹಬ್ಬ ಕಾರ್ಯಕ್ರಮ. ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

ಸುರತ್ಕಲ್ : ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ರಂಗಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ನವಂಬರ್ 10 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ನಡೆಯಲಿದ್ದು, ರಂಗ ಚಾವಡಿ ಪ್ರಶಸ್ತಿ 2024 ಪ್ರದಾನ ಸಮಾರಂಭ ನಡೆಯಲಿದೆ.ರಂಗ ಸವ್ಯಸಾಚಿ ಲಯನ್ ಕಿಶೋರ್ ಡಿ ಶೆಟ್ಟಿ ಅವರನ್ನು 2024 ನೇ ಸಾಲಿನ ರಂಗಚಾವಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಸಮಾರಂಭವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈಯ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚಲನ ಚಿತ್ರ ನಿರ್ಮಾಪಕ ಡಾ ಸಂಜೀವ ದಂಡೆಕೇರಿ, ಶ್ರೀ ಡೆವಲಪರ್ಸ್ ಕಟೀಲು ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು, ಚಲನ ಚಿತ್ರ ನಿರ್ಮಾಪಕ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಥಾಣೆ ಬಂಟ್ಸ್ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ನಿರ್ದೇಶಕ, ಉದ್ಯಮಿ ಜಗಧೀಶ್ ಶೆಟ್ಟಿ ಪೆರ್ಮುದೆ, ಚಲನ‌ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಎಂ ಲೋಕಯ್ಯ ಶೆಟ್ಟಿ, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಪೇರ್ ಅಸೋಸಿಯೇಶನ್ (ರಿ ಅಧ್ಯಕ್ಷ ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಲಕುಮಿ ತಂಡದ ವ್ಯವಸ್ಥಾಪಕ, ರಂಗಸವ್ಯಸಾಚಿ ನಿರ್ದೇಶಕ, ಸಂಘಟಕ ಕಿಶೋರ್ ಡಿ ಶೆಟ್ಟಿ ಅವರನ್ನು ರಂಗಚಾವಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.ಬಳಿಕ ಕಲಾವಿದರಿಂದ ಗಾನ ಲಹರಿ ಮತ್ತು ಶ್ರೀ ಲಲಿತೆ ನಾಟಕ ತಂಡದಿಂದ “ಶನಿ ಮಹಾತ್ಮೆ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಚಾವಡಿಯ ಪ್ರಕಟನೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಕ್ಯಾಥೋಲಿಕ್ ಕ್ರಿಶ್ಚಿಯನ್ ಪರವಾಗಿ ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ದೀಪಾವಳಿ ಶುಭಾಶಯ.

ಮಂಗಳೂರು: ಇಲ್ಲಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಮಂಗಳಾದೇವಿ ರಾಮಕೃಷ್ಣ ಆಶ್ರಮಕ್ಕೆ ತೆರಳಿ ದೀಪಾವಳಿ ಶುಭಾಶಯ ಕೋರಲಾಯಿತು. ಮಠದ ಸ್ವಾಮೀಜಿ ಶ್ರೀ ಜಿತಕಾಮಾನಂದಜಿ ಅವರನ್ನು ಭೇಟಿ ಮಾಡಿದ ಮಂಗಳೂರು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾ. ಜೆ.ಬಿ. ಕ್ರಾಸ್ತಾ, ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಆಲ್ವೀನ್ ಡಿಸೋಜಾ ಅವರು ಶುಭಾಶಯ ತಿಳಿಸಿದರು.ಈ ಸಂದರ್ಭ ಪ್ರಮುಖರಾದ ಮಿಥುನ್ ಸಿಕ್ವೇರಾ, ಬಸವರಾಜ್, ಉದ್ಯಮಿ ಹಾಗೂ ಸಮಾಜ ಸೇವಕ ದಿಲ್ ರಾಜ್ ಆಳ್ವ, ಆಶ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಂಜನ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ‘ವೈಸಿಎಸ್ ಯುವ ದಬಾಜೊ’: ಕುಲಶೇಖರ ಘಟಕ ಪ್ರಥಮ, ಆಂಜೆಲೊರ್ ಘಟಕ ದ್ವಿತೀಯ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ಯಂಗ್ ಕ್ಯಾಥೋಲಿಕ್‌ ಸ್ಟೂಡೆಂಟ್ಸ್ ಸಂಚಾಲನದ ವಿದ್ಯಾರ್ಥಿಗಳಿಗೆ ವೈಸಿಎಸ್ ಯುವ ದಬಾಜೊ 2024 ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗ್ಗೆ 9 ಗಂಟೆಗೆ ಸಿಟಿ ವಲಯದ ಪ್ರಧಾನ ಗುರುಗಳಾದ ವಂದನೀಯ ಜೇಮ್ಸ್ ಡಿಸೋಜ ಅವರು ನೆರವೇರಿಸಿದರು. ವೇದಿಕೆಯಲ್ಲಿ ಧರ್ಮ ಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫೆಡ್ರಿಕ್ ಲೋಬೊ, ವಸತಿ ಯಾಜಕರಾದ ವಂದನೀಯ ಸ್ಟ್ತಾನಿ ಫೆರ್ನಾಂಡಿಸ್, ಸೇವಾದರ್ಶಿ ಬ್ರ. ಜೀವನ್ ಲೋಬೊ, ವೈಸಿಎಸ್ ವಲಯ ನಿರ್ದೇಶಕರಾದ ವಂದನೀಯ ವಿಜಯ ಮೊಂತೆರೊ, ಧರ್ಮಕ್ಷೇತ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ, ವಲಯ ಸಚೇತಕಿ ರೆನಿಟಾ ಮಿನೇಜಸ್, ಘಟಕ ಸಚೇತಕ ರೋಶನ್ ಪತ್ರಾವೊ, ಧರ್ಮಪ್ರಾಂತ್ಯದ ವೈಸಿಎಸ್ ಅಧ್ಯಕ್ಷ ಡಿಯೋನ್ ಸಲ್ದಾನಾ, ವಲಯ ವೈಸಿಎಸ್ ಅಧ್ಯಕ್ಷ ಡ್ಯಾರೆಲ್ ಮೊಂತೇರೊ, ಘಟಕಾಧ್ಯಕ್ಷ ಲಿಯೋನ್ ಡಿಸೋಜ ಅವರು ಉಪಸ್ಥಿತರಿದ್ದರು.ವೈಯಕ್ತಿಕ ಗಾಯನ, ಪಂಗಡ ಗಾಯನ ಹಾಗೂ ವೆರೈಟಿ ವಿಭಾಗಗಳಲ್ಲಿ 9 ಘಟಕಗಳ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈಸಿಎಸ್ ಕುಲಶೇಖರ ಘಟಕ ಪ್ರಥಮ ಸಮಗ್ರ ಪ್ರಶಸ್ತಿ, ಆಂಜೆಲೊರ್ ವೈಸಿಎಸ್ ಘಟಕ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು.

ಪ್ರಾದೇಶಿಕ ವಾರ್ತೆಗಳು

ನಾಲ್ವರು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ

ಮಂಗಳೂರು: ಇಂದು ನೆಹರು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪುಷ್ಪರಾಜ್ ಬಿ.ಎನ್. (ವಾರ್ತಾ ಭಾರತಿ), ರಾಜೇಶ್ ರಾವ್ (ನಮ್ಮ ಕುಡ್ಲ), ಸುಖಪಾಲ್ ಪೊಳಲಿ (ಪಬ್ಲಿಕ್ ಟಿ.ವಿ.), ಮತ್ತು ಐ.ಬಿ. ಸಂದೀಪ್ ಕುಮಾರ್ (ಹೊಸದಿಗಂತ) ಇವರು ಇಂದು ಜಿಲ್ಲಾ ಪ್ರಶಸ್ತಿ ಪಡೆದ ಪತ್ರಕರ್ತರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ MPMLA’s ನ್ಯೂಸ್ ಶುಭ ಹಾರೈಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಕೊನೆಗೂ ನಾಲ್ವರು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ ನೀಡಿದ ಜಿಲ್ಲಾಡಳಿತ.

ಮಂಗಳೂರು: ಅಕ್ಟೋಬರ್ 31ರಂದು ಜಿಲ್ಲಾ ಪ್ರಶಸ್ತಿಯ ಪಟ್ಟಿ ಬಿಡುಗಡೆಯಲ್ಲಿ ಒಬ್ಬ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ ಘೋಷಿಸಲಾಗಿತ್ತು.ಆದರೆ, ಪತ್ರಕರ್ತ ಸಂಘದಿಂದ ನಾಲ್ವರು ಪತ್ರಕರ್ತರನ್ನು ಶಿಫಾರಸ್ಸು ಮಾಡಲಾಗಿತ್ತು. ಜಿಲ್ಲಾಡಳಿತದ ಈ ಕ್ರಮ ವ್ಯಾಪಕ ಅಸಮಾಧಾನಗಳಿಗೆ ಕಾರಣವಾದಾಗ ಈ ಬಗ್ಗೆ MPMLA’s ನ್ಯೂಸ್ ಬೆಳಕು ಚೆಲ್ಲಿ ಜಿಲ್ಲಾಧಿಕಾರಿಯವರು ತಕ್ಷಣ ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡಿತು. ಅದೇ ರೀತಿ ಪತ್ರಕರ್ತ ಸಂಘದಿಂದಲೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಕೂಡಲೇ ಎಚ್ಚೆತ್ತುಗೊಂಡ ಜಿಲ್ಲಾಡಳಿತ ಕೊನೆಗೂ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಿತು.

ಪ್ರಾದೇಶಿಕ ವಾರ್ತೆಗಳು

ಈ ಸಲದ ಜಿಲ್ಲಾ ಪ್ರಶಸ್ತಿಯಲ್ಲಿ ಪತ್ರಕರ್ತರಿಗೆ ಅನ್ಯಾಯ

ಬ್ರೇಕಿಂಗ್ ನ್ಯೂಸ್, ಮಂಗಳೂರು: ಈ ಸಲದ ಜಿಲ್ಲಾ ಪ್ರಶಸ್ತಿಯಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವು ಮಂದಿ ಪತ್ರಕರ್ತರಿಂದ ವ್ಯಾಪಕ ಖಂಡನೆಗಳು ವ್ಯಾಪ್ತವಾಗುತ್ತಿವೆ. ನಾಲ್ಕು ಮಂದಿ ಪತ್ರಕರ್ತರ ಹೆಸರನ್ನು ಸಂಘ ಶಿಫಾರಸ್ಸು ಮಾಡಿದ್ದರೂ ಒಬ್ಬರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿ ಮೂವರನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತವು ದೃಶ್ಯ ಮಾಧ್ಯಮದವರು ನಾಳೆ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುತ್ತೇವೆಂದಾಗ ಎಚ್ಛೆತ್ತುಕೊಂಡು ಇನ್ನೊಬ್ಬ ಟಿ. ವಿ. ವರದಿಗಾರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದರೂ ಇನ್ನಿಬ್ಬರನ್ನು ನಿರ್ಲಕ್ಷಿಸಲಾಗಿದೆ. ಜಿಲ್ಲಾಡಳಿತದ ಕತ್ತರಿ ಪ್ರಯೋಗ ಖಂಡನೀಯ. ಇದನ್ನು Mpmla’s news ತೀವ್ರವಾಗಿ ಖಂಡಿಸುತ್ತದೆ. ಇಷ್ಟೆಲ್ಲ ನಡೆಯುವಾಗ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದರು? ಕತ್ತರಿ ಪ್ರಯೋಗದ ಸೂತ್ರಧಾರಿ ದಿನೇಶ್ ಗುಂಡೂರಾವ್ ಅವರೇ ಇರಬಹುದೇ? ಡಿ. ಸಿ. ಯವರೇ ಪತ್ರಕರ್ತರಿಗೆ ಅನ್ಯಾಯವನ್ನು ತಕ್ಷಣ ಸರಿಪಡಿಸಿ.

ಪ್ರಾದೇಶಿಕ ವಾರ್ತೆಗಳು

“ಪಿಲಿಪಂಜ” ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

ಮಂಗಳೂರು: ಎಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಪಿಲಿಪಂಜ ಸಿನಿಮಾದ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ನಿತ್ಯಾನಂದ ಸೇವಾಶ್ರಮ ಬಂದರು, ಮಂಗಳೂರು ಇಲ್ಲಿ ನಡೆಯಿತು..ಹಿರಿಯ ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಶಿರ್ಷಿಕೆ ಬಿಡುಗಡೆ ಮಾಡುತ್ತಾ, “ಪಿಲಿಪಂಜ” ಒಂದು ವಿಭಿನ್ನ ಹಾಗೂ ಕುತೂಹಲ ಮೂಡಿಸುವ ಟೈಟಲ್..ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ..ಒಂದೊಳ್ಳೆ ಕಥೆಯೊಂದಿಗೆ ಚಿತ್ರ ತಂಡ ನಮ್ಮ ಮುಂದೆ ಬರುತ್ತಿದೆ, ತುಳುನಾಡಿನಜನತೆ ಈ ಚಿತ್ರವನ್ನು ಗೆಲ್ಲಿಸಿ ಕೊಡ ಬೇಕು. ಗುರು ನಿತ್ಯಾನಂದರ ಆಶೀರ್ವಾದ ಚಿತ್ರ ತಂಡದ ಮೇಲಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಯಾನ ಪ್ರೊಡಕ್ಷನ್ ಹೌಸ್ ನ ಪ್ರತೀಕ್ ಪೂಜಾರಿ, ಚಿತ್ರದ ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಷರ್ ರಮೇಶ್ ರೈ ಕುಕ್ಕುವಳ್ಳಿ, ಮುಂಬಯಿಯ ರಂಗ ನಿರ್ದೇಶಕ, ಭ್ರಾಮರಿ ಸುದ್ದಿವಾಹಿನಿಯ ರೂವಾರಿ ಬಾಬಾ ಪ್ರಸಾದ್ ಅರಸ, ಪ್ರಕಾಶ್ ಶೆಟ್ಟಿ ಧರ್ಮನಗರ, ರಾಜೇಶ್ ಕಣ್ಣೂರು, ರಕ್ಷಣ್ ಮಾಡೂರು, ಅಕ್ಷತ್ ವಿಟ್ಲ, ಸುರೇಶ್ ಬಲ್ಮಠ,ಅಭಿಷೇಕ್ ಕುಲಾಲ್, ಚಿತ್ರದ ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು..ನವೆಂರ್ 7ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರೂಪಾಶ್ರೀ ವರ್ಕಾಡಿ, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ , ದಿಶಾ ರಾಣಿ ಮುಂತಾದವರು ನಟಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಕೃಷ್ಣಾಪುರ ಫ್ಯಾರಡೈಸ್ ಮೈದಾನದಲ್ಲಿ ಮತ್ತು ಮಂಗಳೂರಿನ ಪದವು ಹೈಸ್ಕೂಲ್ ನ ಕಾಂಚನ ಗಂಗಾ ಮೈದಾನದಲ್ಲಿ ಪಟಾಕಿ ಉತ್ಸವ.

ಸುರತ್ಕಲ್: ಶಿವಕಾಶಿಯಿಂದ ನೇರ ಮಾರಾಟದ ಪಟಾಕಿ ಮಳಿಗೆ ಕೃಷ್ಣಾಪುರದ ಫ್ಯಾರಡೈಸ್ ಮೈದಾನದಲ್ಲಿದ್ದು ವಿಶಾಲ್ ಮತ್ತು ವಾಸುದೇವ ಸ್ಟಾಲ್‌ನಲ್ಲಿದೆ ಹಾಗೂ ಮಂಗಳೂರಿನ ಪದವು ಹೈಸ್ಕೂಲ್ ಮೈದಾನದ ಕಾಂಚನ ಗಂಗಾ ಟ್ರೇಡಿಂಗ್‌ನಲ್ಲಿ ಪಟಾಕಿ ಮಾರಾಟಕ್ಕಿದೆ. ಈ ಸಲದ ದೀಪಾವಳಿ ಹಬ್ಬವನ್ನು ಹಸಿರು ಪಟಾಕಿಯೊಂದಿಗೆ ಆಚರಿಸೋಣ. ನಾವು ಬೆಳೆಯೋಣ. ಪರಿಸರ ಸಂರಕ್ಷಿಸೋಣ. ಮಂಗಳೂರಿನಲ್ಲಿ ಎಂದೆಂದೂ ಕೇಳರಿಯದ ಕೆಲವು ಸಂಸ್ಥೆಗಳ ಸಹಯೋಗದೊಂದಿಗೆ ಪಟಾಕಿ ಮೇಳವನ್ನು ಅಕ್ಟೋಬರ್ 29ರಿಂದ ನವೆಂಬರ್ 2 ಮತ್ತು ನವೆಂಬರ್ 12ರಿಂದ ನವೆಂಬರ್ 13ರವರೆಗೆ ಹಮ್ಮಿಕೊಳ್ಳಲಾಗಿದೆ. ಕಡಿಮೆ ಬೆಲೆ ಉತ್ತಮ ಗುಣಮಟ್ಟದ ಪಟಾಕಿಗಳು ಮೇಲೆ ತಿಳಿಸಿದ ಜಾಗದಲ್ಲಿ ಲಭ್ಯವಿದೆ. ಕಡಿಮೆ ಹಣಕೊಟ್ಟು ಹೆಚ್ಚು ಆನಂದಿಸಿ. ಪ್ರತೀ 1,000ದ ಖರೀದಿಗೆ 1 ಕೂಪನ್ ಉಚಿತ. 2 ಮಳಿಗೆಗಳಲ್ಲಿ ಪ್ರತ್ಯೇಕ ಡ್ರಾ ಮತ್ತು ಪ್ರತ್ಯೇಕ 50+50 ಬಹುಮಾನ ಒಟ್ಟು 100 ಬಹುಮಾನಗಳು. ಇದರ ಡ್ರಾ. ಎರಡೂ ಮೈದಾನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನವೆಂಬರ್ 13ರ ರಾತ್ರಿ 8 ಗಂಟೆಗೆ ನಡೆಯಲಿದೆ. ಫಲಿತಾಂಶವನ್ನು ನವೆಂಬರ್ 19ರ ವಿಜಯಕರ್ನಾಟಕದಲ್ಲಿ ಪ್ರಕಟಿಸಲಾಗುವುದು. ಪಟಾಕಿ ಉತ್ಸವದ ಹೆಚ್ಚಿನ ಮಾಹಿತಿಗಾಗಿ 8792594085, 9113268480, 7406630999, 8971546444 ಈ ನಂಬರಿಗೆ ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ಐಕಳ ಪಾಂಪೈ ಕಾಲೇಜಿನಲ್ಲಿ “ರೀಡಿಂಗ್ ಗಾಂಧಿ” ವಿಶೇಷ ಉಪನ್ಯಾಸ : ಗಾಂಧೀಜಿಯವರ ವ್ಯಕ್ತಿತ್ವವೇ ಆದರ್ಶ: ಎಂ.ಜಿ.ಹೆಗಡೆ

ಮೂಲ್ಕಿ: ಗಾಂಧಿಜೀಯವರ ಆದರ್ಶಗಳಾದ ಸತ್ಯ, ಅಹಿಂಸೆ, ಸತ್ಯಾಗ್ರಹ ನಡೆಸಿದ್ದ ಗಾಂಧಿಜೀಯವರನ್ನು “ಮಹಾತ್ಮ” ಎಂದು ಕರೆದದ್ದು ರವೀಂದ್ರನಾಥ ಟಾಗೋರ್ ಅವರು. ಗಾಂಧಿಜೀಯವರು ತಮ್ಮ ಉನ್ನತ ವ್ಯಕ್ತಿತ್ವದಿಂದಾಗಿ ಮಹಾತ್ಮರೆನಿಸಿಕೊಂಡವರು ಎಂದು ವಿಮರ್ಷಕ ಎಮ್.ಜಿ. ಹೆಗಡೆ ಹೇಳಿದರು.ಅವರು ಕಿನ್ನಿಗೋಳಿ ಬಳಿಯ ಐಕಳ ಪಾಂಪೈ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಮತ್ತು ಭಾಷಾ ಸಂಘದ ಜಂಟಿ ಆಶ್ರಯದಲ್ಲಿ “ರೀಡಿಂಗ್ ಗಾಂಧೀಜಿ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.ನಿವೃತ್ತ ಪ್ರಾಂಶುಪಾಲ ಉದಯಕುಮಾರ ಹಬ್ಬು ಮಾತನಾಡಿ, ಗಾಂಧಿಜೀಯವರ ಹೋರಾಟದ ಕಥೆಗಳೇ ರೋಚಕವಾಗಿದೆ. ಅದರನ್ನು ಇಂದಿಗೂ ವಿಶ್ವವೇ ಗೌರವಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು.ಇಂಗ್ಲಿಷ್ ವಿಭಾಗದ ಡಾ. ವಿಕ್ಟರ್ ವಸಜ್, ವಿದ್ಯಾರ್ಥಿ ನಾಯಕರುಗಳು ಮತ್ತಿತರರು ಇದ್ದರು. -0-

Scroll to Top