ಐಕಳ ಪಾಂಪೈ ಕಾಲೇಜಿನಲ್ಲಿ “ರೀಡಿಂಗ್ ಗಾಂಧಿ” ವಿಶೇಷ ಉಪನ್ಯಾಸ : ಗಾಂಧೀಜಿಯವರ ವ್ಯಕ್ತಿತ್ವವೇ ಆದರ್ಶ: ಎಂ.ಜಿ.ಹೆಗಡೆ

108.2K Views 31 Oct 2024

ಮೂಲ್ಕಿ: ಗಾಂಧಿಜೀಯವರ ಆದರ್ಶಗಳಾದ ಸತ್ಯ, ಅಹಿಂಸೆ, ಸತ್ಯಾಗ್ರಹ ನಡೆಸಿದ್ದ ಗಾಂಧಿಜೀಯವರನ್ನು “ಮಹಾತ್ಮ” ಎಂದು ಕರೆದದ್ದು ರವೀಂದ್ರನಾಥ ಟಾಗೋರ್ ಅವರು. ಗಾಂಧಿಜೀಯವರು ತಮ್ಮ ಉನ್ನತ ವ್ಯಕ್ತಿತ್ವದಿಂದಾಗಿ ಮಹಾತ್ಮರೆನಿಸಿಕೊಂಡವರು ಎಂದು ವಿಮರ್ಷಕ ಎಮ್.ಜಿ. ಹೆಗಡೆ ಹೇಳಿದರು.
ಅವರು ಕಿನ್ನಿಗೋಳಿ ಬಳಿಯ ಐಕಳ ಪಾಂಪೈ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಮತ್ತು ಭಾಷಾ ಸಂಘದ ಜಂಟಿ ಆಶ್ರಯದಲ್ಲಿ “ರೀಡಿಂಗ್ ಗಾಂಧೀಜಿ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.
ನಿವೃತ್ತ ಪ್ರಾಂಶುಪಾಲ ಉದಯಕುಮಾರ ಹಬ್ಬು ಮಾತನಾಡಿ, ಗಾಂಧಿಜೀಯವರ ಹೋರಾಟದ ಕಥೆಗಳೇ ರೋಚಕವಾಗಿದೆ. ಅದರನ್ನು ಇಂದಿಗೂ ವಿಶ್ವವೇ ಗೌರವಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು.
ಇಂಗ್ಲಿಷ್ ವಿಭಾಗದ ಡಾ. ವಿಕ್ಟರ್ ವಸಜ್, ವಿದ್ಯಾರ್ಥಿ ನಾಯಕರುಗಳು ಮತ್ತಿತರರು ಇದ್ದರು.

-0-

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top