ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಇನ್ನು ಶನಿವಾರ ಪೂರ್ತಿ ಶಾಲೆ ನಿರ್ಧಾರಕ್ಕೆ ಹೆತ್ತವರ ತೀವ್ರ ಅಸಮಾಧಾನ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಈ ಮಳೆಗಾಲದಲ್ಲಿ 13 ರಜೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜ್ ಗಳಿಗೆ ನೀಡಿದ್ದು, ಇದನ್ನು ಭರ್ತಿ ಮಾಡಲು ಶೈಕ್ಷಣಿಕ ಇಲಾಖೆ ಮುಂದಿನ 26 ಶನಿವಾರಗಳನ್ನು ದಿನವಿಡೀ ತರಗತಿ ನಡೆಸಲು ನಿರ್ಧರಿಸಿರುವ ಬಗ್ಗೆ ಸುದ್ದಿ ಬಂದಿದೆ. ಈ ಬಗ್ಗೆ ಮಕ್ಕಳ ಹೆತ್ತವರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯಿಂದ ತುಳುನಾಡು ಪ್ರತಿಷ್ಠಾನದ ಅಧ್ಯಕ್ಷ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಸನ್ಮಾನ.

ಮಂಗಳೂರು: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭವು ಕದ್ರಿ ಪಾರ್ಕ್ ಹತ್ತಿರದ ಲಯನ್ಸ್ ಅಶೋಕ್ ಭವನದಲ್ಲಿ ಇತ್ತೀಚೆಗೆ ಜರಗಿತು. ಪದಗ್ರಹಣ ಸಮಾರಂಭದ ಅಧಿಕಾರಿಯಾಗಿ ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ 317ಡಿ ಯ ನಿಕಟಪೂರ್ವ ಜಿಲ್ಲಾ ರಾಜಪಾಲರಾದ ಲಯನ್ ಡಾ. ಮೇಲ್ವಿನ್ ಡಿಸೋಜಾ ಅವರು 2024-25 ರ ಸಾಲಿನ ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ತತ್ವ ಸಿದ್ಧಾಂತದ ಬಗ್ಗೆ ಬೋಧಿಸಿದರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಅವರು ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ವೇಣಿ ಮರೋಳಿ. ಗುರುಪೀತ ಆಳ್ವ ವಲಯ ಅಧ್ಯಕ್ಷ ಚಂದ್ರಕಲ ರಾವ್ ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತವನ್ನು ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ವಿಮಲಾ ತುಳಸಿ ರಾಜ್ ಧನ್ಯವಾದಗೈದರು.ಸನ್ಮಾನ: ಈ ಸಂದರ್ಭದಲ್ಲಿ ತುಳುನಾಡು ಪ್ರತಿಷ್ಠಾಪನದ ಅಧ್ಯಕ್ಷ, ಪತ್ರಕರ್ತ ರಾಜೇಶ್ ಅಮೀನ್ ಮುಲ್ಕಿ ಅವರನ್ನು ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಸಮಾರಂಭ. ಮೇಜರ್ ಜನರಲ್ ಸತೀಶ್ ಭಂಡಾರಿ ಅವರಿಗೆ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್

ಮಂಗಳೂರು: ಭಾರತೀಯ ಸೇನೆ ಇಂದು ಸಶಕ್ತವಾಗಿದ್ದು ಯಾವುದೇ ಶತ್ರುರಾಷ್ಟ್ರವನ್ನು ಬಗ್ಗು ಬಡಿಯಲು ಸಮರ್ಥವಾಗಿದೆ. ಸೇನಾ ಸಾಧನಗಳ ತಯಾರಿಯ ಸಂಶೋಧನೆ , ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ದೇಶ ಶೇ.75ರಷ್ಟು ಸ್ವಾವಲಂಬಿಯಾಗಿದೆ ಎಂದು ಮೇಜರ್ ಜನರಲ್ ಸತೀಶ್ ಭಂಡಾರಿ ಹೇಳಿದರು.ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 28ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅವರು ‘ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸಹಜವಾಗಿಯೇ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆದರೆ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನುಭವ ಸದಾ ಸ್ಮರಣೀಯ ಎಂದರು.ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಉದ್ಯಮಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರನ್ನು ಪ್ರತಿಷ್ಠಾನದವತಿಯಿಂದ ಸನ್ಮಾನಿಸಲಾಯಿತು. ಬಂಟ ಸಮಾಜದ ಹಿರಿಯರ ಸಾಧನೆಯಿಂದ ಪ್ರೇರಿತನಾಗಿ ನಾನು ಕೂಡಾ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಬಯಸಿದ್ದೆ. ಹಾದಿ ಕಠಿಣವಾಗಿತ್ತು. ಆದರೆ ಇಂದು ಕನಸು ನನಸಾಗಿದೆ. ಕೇವಲ ಅದೃಷ್ಟವನ್ನು ನಂಬಿದರೆ ಸಾಲದು ಅದನ್ನು ಸಾಧನೆಯಾಗಿ ಪರಿವರ್ತಿಸಬೇಕು ಎಂದು ಸನ್ಮಾನ ಸ್ವೀಕರಿಸಿದ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.ಯಕ್ಷಗಾನ ರಂಗದಲ್ಲಿ 55 ವರ್ಷ ಮಿಕ್ಕಿ ಸೇವೆ ಸಲ್ಲಿಸಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ದಿ.ಡಿ.ಕೆ.ಚೌಟ ದತ್ತಿನಿಧಿಯಿಂದ 25 ಸಾವಿರ ರೂ.ನಗದು, ಫಲಕ ನೀಡಿ ಗೌರವಿಸಲಾಯಿತು. ಕೃಷಿ ಕ್ಷೇತ್ರದ ಸಾಧನೆಗಾಗಿ ಪುಷ್ಪ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ಮನೀಶ್ ಶೆಟ್ಟಿ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ರೋಶನ್ ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷರಾದ ಕುಶಲ್.ಎಸ್.ಹೆಗ್ಡೆ, ಕೆ.ಎಸ್.ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಚಿ ಸಿಎ ಸುದೇಶ್ ಕುಮಾರ್ ರೈ , ಪ್ರೊ.ಜಿ.ಆರ್.ರೈ, ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಭಾಸ್ಕರ .ರೈ.ಕುಕ್ಕುವಳ್ಳಿ, ಜ್ಯೋತಿ ಪ್ರಸಾದ್ ಹೆಗ್ಡೆ, ಜೈರಾಜ್.ಬಿ.ರೈ ಮತ್ತು ಆರ್ತಿ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಯೆನೆಪೊಯ ಇನ್‌ಸ್ಟಿಟ್ಯೂಟ್‌ನಲ್ಲಿ ಸೈಬರ್ ಕ್ರೈಮ್ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಜಾಗೃತಿ ಅಧಿವೇಶನ

ಮಂಗಳೂರು, ಆಗಸ್ಟ್ 9, 2024 – ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ನಲ್ಲಿ ವಿಧಿವಿಜ್ಞಾನ ವಿಭಾಗವು ಸೈಬರ್ ಕ್ರೈಮ್ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಒಳನೋಟವುಳ್ಳ ಜಾಗೃತಿ ಅಧಿವೇಶನವನ್ನು ನಡೆಸಿತು. ಇತ್ತೀಚೆಗೆ ಜಾರಿಗೆ ತಂದ ಭಾರತೀಯ ನ್ಯಾಯದ ಸಂಹಿತಾ, 2023; ಭಾರತೀಯ ಸಾಕ್ಷಿ ಅಧಿನಿಯಮ, 2023; ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ಮೇಲೆ ವಿಶೇಷ ಗಮನ ಹರಿಸಿತು. ಕಾರ್ಯಕ್ರಮದಲ್ಲಿ ಸೈಬರ್‌ಕ್ರೈಮ್‌ನ ಮೂಲಕ ಹೆಚ್ಚುತ್ತಿರುವ ಬೆದರಿಕೆ ಮತ್ತು ಕ್ರಿಮಿನಲ್ ಕಾನೂನುಗಳಲ್ಲಿನ ಇತ್ತೀಚಿನ ಬದಲಾವಣೆಗಳ ಮೇಲೆ ಕೇಂದ್ರೀಕರಿಸುವ ವಿಶೇಷ ಭಾಷಣಕಾರರು ಮತ್ತು ಅತಿಥಿಗಳ ಶ್ರೇಣಿಯನ್ನು ಒಳಗೊಂಡಿತ್ತು. ಸಂಸ್ಥೆಯ ವಿಧಿವಿಜ್ಞಾನ ವಿಭಾಗವು ಭಾರತೀಯ ನ್ಯಾಯಾ ಸಂಹಿಥೆ ಮಾರ್ಗಸೂಚಿಗಳ ಆಧಾರದ ಮೇಲೆ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಆಯ್ದ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಹೆಮ್ಮೆ ಪಡುತ್ತದೆ. ಈ ಪ್ರಗತಿಪರ ಪಠ್ಯಕ್ರಮವು ವಿಧಿವಿಜ್ಞಾನದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿ ಇರಿಸುತ್ತದೆ, ವಿದ್ಯಾರ್ಥಿಗಳು ಕ್ಷೇತ್ರದ ಇತ್ತೀಚಿನ ಮಾನದಂಡಗಳು ಮತ್ತು ಪ್ರಗತಿಗೆ ಹೊಂದಿಕೆಯಾಗುವ ತರಬೇತಿಯನ್ನು ಪಡೆಯುವುದನ್ನು ಖಾತ್ರಿಪಡಿಸುತ್ತದೆ.ಶ್ರೀ ಅನುಪಮ ಅಗರವಾಲ್, IPS, ಪೊಲೀಸ್ ಆಯುಕ್ತರು, ಮಂಗಳೂರು ಇವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಮುಖ್ಯ ಭಾಷಣದಲ್ಲಿ, ಶ್ರೀ ಅಗರವಾಲ ಅವರು ವಿಕಸನಗೊಳ್ಳುತ್ತಿರುವ ಸೈಬರ್ ಕ್ರೈಮ್ ಲ್ಯಾಂಡ್‌ಸ್ಕೇಪ್ ಮತ್ತು ಈ ಬೆದರಿಕೆಗಳನ್ನು ಎದುರಿಸಲು ಪರಿಚಯಿಸಲಾದ ಕಾನೂನು ಚೌಕಟ್ಟುಗಳ ಆಳವಾದ ವಿಶ್ಲೇಷಣೆಯನ್ನು ಒದಗಿಸಿದರು. ಸೈಬರ್ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಅಂತರ ವಲಯದ ಸಹಯೋಗದ ಮಹತ್ವವನ್ನು ಅವರು ಒತ್ತಿ ಹೇಳಿದರು. “ಸೈಬರ್ ಕ್ರೈಮ್ ಇನ್ನು ಮುಂದೆ ಸ್ಥಾಪಿತ ಸಮಸ್ಯೆಯಾಗಿಲ್ಲ; ಇದು ಜಾಗತಿಕವಾಗಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ವ್ಯಾಪಕ ಸವಾಲಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವುದು ಬಹಳ ಮುಖ್ಯ ಮತ್ತು ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮವಾಗಿದೆ. ಯಾವುದೇ ಸೈಬರ್ ಅಪರಾಧದ ಸಮಸ್ಯೆಗಳ ಸಂದರ್ಭದಲ್ಲಿ ಜನರು 1930 ಅನ್ನು ಸಂಪರ್ಕಿಸಬಹುದು” ಎಂದು ಅವರು ಹೇಳಿದರು.ಗೌರವ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡದ ಎಸಿಪಿ ಸಿಸಿಬಿ ಮಂಗಳೂರು ನಗರದ ಶ್ರೀಮತಿ ಗೀತಾ ಕುಲಕರ್ಣಿ ಅವರ ಉಪಸ್ಥಿತಿಯಿಂದ ಅಧಿವೇಶನವನ್ನು ಮತ್ತಷ್ಟು ಶ್ರೀಮಂತಗೊಳಿಸಲಾಯಿತು. ಶ್ರೀಮತಿ ಕುಲಕರ್ಣಿ ಅವರು ಮಂಗಳೂರಿನಲ್ಲಿ ಸೈಬರ್ ಕ್ರೈಮ್‌ನೊಂದಿಗೆ ವ್ಯವಹರಿಸುವಾಗ ತಮ್ಮ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು ಮತ್ತು ಅಂತಹ ಪ್ರಕರಣಗಳನ್ನು ಪರಿಹರಿಸುವಲ್ಲಿ ಕಾನೂನು ಜಾರಿ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿದರು. “ಸೈಬರ್ ಕ್ರೈಮ್ ಕಂಟ್ರೋಲ್ ಬ್ಯೂರೋ (ಸಿಸಿಬಿ) ಈಗ ಸೈಬರ್ ಅಪರಾಧ-ಸಂಬಂಧಿತ ಸಮಸ್ಯೆಗಳಿಗೆ ಸಹಾಯ ಮಾಡಲು ಗಡಿಯಾರದ ಸುತ್ತಲೂ ಲಭ್ಯವಿದೆ” ಎಂದು ಅವರು ಹೇಳಿದರು.ಡಾ.ಬಿ.ಎಚ್. ಶ್ರೀಪತಿ ರಾವ್, ಗೌರವಾನ್ವಿತ ಪ್ರೊ ಉಪಕುಲಪತಿಗಳಾದ ಯೆನೆಪೊಯ (ಡೀಮ್ಡ್ ಟು ಯುನಿವರ್ಸಿಟಿ) ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಡಾ. ರಾವ್ ಅವರು ತಮ್ಮ ಭಾಷಣದಲ್ಲಿ ಸೈಬರ್ ಭದ್ರತಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಪೂರ್ವಭಾವಿ ಪಾತ್ರವನ್ನು ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು. ಡಾ.ಅರುಣ್ ಎ.ಭಾಗವತ್, ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗದ ಡೀನ್ ಅವರು ಮುಖ್ಯ ಭಾಷಣ ಮಾಡಿ ವಿಭಾಗದ ಪ್ರಯತ್ನ ಮತ್ತು ಉಪಕ್ರಮಕ್ಕಾಗಿ ಅಭಿನಂದಿಸಿದರು. ಉಪಪ್ರಾಂಶುಪಾಲರಾದ ಡಾ.ಶರೀನಾ ಪಿ., ಡಾ.ಜೀವನ್ ರಾಜ್ ಮತ್ತು ಶ್ರೀ ನಾರಾಯಣ್ ಸುಕುಮಾರ ಎ. ಮತ್ತು ಡಾ ರಿಜೆಕ್ಟ್ ಪಾಲ್ M.P, ಮುಖ್ಯಸ್ಥ, ವಿಧಿವಿಜ್ಞಾನ ವಿಜ್ಞಾನ ವಿಭಾಗ ಅವರು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಈ ಸಂದರ್ಭದಲ್ಲಿ ಫೋರೆನ್ಸಿಕ್ ವಿಭಾಗದ ನಾಲ್ವರು ವಿದ್ಯಾರ್ಥಿಗಳಾದ ಅನೋವಾ ಸುನಿಲ್, ದೇವಪ್ರಿಯಾ ಬಿ ಎಸ್, ಭಾಗ್ಯ ಮಿತ್ರ, ಮತ್ತು ಶಾನಿ ಕೆಪಿ ಅವರನ್ನು ಇತ್ತೀಚೆಗೆ ಸಾರ್ವಜನಿಕ ಘಟನೆಯಲ್ಲಿ ಧೈರ್ಯಶಾಲಿ ಕಾರ್ಯಗಳಿಗಾಗಿ ಗೌರವಿಸಲಾಯಿತು. ಸಾರ್ವಜನಿಕ ಬಸ್‌ನಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು ತ್ವರಿತವಾಗಿ ಸಹಾಯ ಮಾಡುವ ಮೂಲಕ ಅವರ ಧೈರ್ಯಕ್ಕಾಗಿ ಅವರನ್ನು ಗುರುತಿಸಲಾಯಿತು ಮತ್ತು ಪ್ರಶಸ್ತಿ ನೀಡಲಾಯಿತು.ಸುಮಾರು 1500 ವಿದ್ಯಾರ್ಥಿಗಳು ಅಧಿವೇಶನದ ಪ್ರಯೋಜನ ಪಡೆದರು. ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್‌ನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವು ಜಾಗೃತಿ ಅಧಿವೇಶನವನ್ನು ತಡೆರಹಿತವಾಗಿ ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.ಸಂವಾದಾತ್ಮಕ ಪ್ರಶ್ನೋತ್ತರ ವಿಭಾಗದೊಂದಿಗೆ ಜಾಗೃತಿ ಅಧಿವೇಶನವು ಮುಕ್ತಾಯವಾಯಿತು, ಇದರಲ್ಲಿ ಭಾಗವಹಿಸುವವರು ತಜ್ಞರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸೈಬರ್ ಅಪರಾಧದ ಸಂಕೀರ್ಣತೆಗಳು ಮತ್ತು ಅದನ್ನು ನಿಗ್ರಹಿಸುವ ಉದ್ದೇಶದಿಂದ ಇತ್ತೀಚಿನ ಕಾನೂನು ಬೆಳವಣಿಗೆಗಳ ಕುರಿತು ಹೆಚ್ಚಿನ ಒಳನೋಟಗಳನ್ನು ಪಡೆಯಲು ಅವಕಾಶವನ್ನು ಹೊಂದಿದ್ದರು.ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸುವ ಮಟ್ಟಿನಲ್ಲಿಅಗತ್ಯವಾದ ಜ್ಞಾನ ಮತ್ತು ಸಾಧನಗಳೊಂದಿಗೆ ತನ್ನ ವಿದ್ಯಾರ್ಥಿಗಳು ಮತ್ತು ಸಮುದಾಯವನ್ನು ಬಲಪಡಿಸುವಲ್ಲಿ ಯೆನೆಪೊಯ ಇನ್‌ಸ್ಟಿಟ್ಯೂಟ್‌ನ ಪ್ರಯತ್ನವು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಇತರ ಅಧ್ಯಾಪಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಅಧಿವೇಶನವು ಉತ್ತಮ ಯಶಸ್ಸನ್ನು ಕಂಡಿತು. ಪಿನಾಕಿನಿ ಶೆಟ್ಟಿ, ಉಪನ್ಯಾಸಕಿ, ನಿರ್ವಹಣಾ ವಿಭಾಗ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭ.

ಮಂಗಳೂರು: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭವು ಕದ್ರಿ ಪಾರ್ಕ್ ಹತ್ತಿರದ ಲಯನ್ಸ್ ಅಶೋಕ್ ಭವನದಲ್ಲಿ ಇತ್ತೀಚೆಗೆ ಜರಗಿತು. ಪದಗ್ರಹಣ ಸಮಾರಂಭದ ಅಧಿಕಾರಿಯಾಗಿ ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ 317ಡಿ ಯ ನಿಕಟಪೂರ್ವ ಜಿಲ್ಲಾ ರಾಜಪಾಲರಾದ ಲಯನ್ ಡಾ. ಮೇಲ್ವಿನ್ ಡಿಸೋಜಾ ಅವರು 2024-25 ರ ಸಾಲಿನ ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ತತ್ವ ಸಿದ್ಧಾಂತದ ಬಗ್ಗೆ ಬೋಧಿಸಿದರು. ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯ ನೂತನ ಅಧ್ಯಕ್ಷ ಶಾಲಿನಿ ಪ್ರಶಾಂತ್ ಸುವರ್ಣ, ಕಾರ್ಯದರ್ಶಿ ವಿಮಲಾ ತುಳಸಿ ರಾಜ್,, ಕೋಶಾಧಿಕಾರಿ ದಿವ್ಯ ಎಚ್ ಪಿ ರೈ , ಲಿಯೋ ಕ್ಲಬ್ಬಿನ ಅಧ್ಯಕ್ಷ ಲಯನ್ಸ್ ಕ್ಲಬ್ ಮಂಗಳೂರು ಮಂಗಳೂರು ಮಿಡ್ ಟೌನ್ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಗಣೇಶ್ ಶೇಟ್, ಶಿವರಾಜ್ ಸಾಮಾನಿ , ನೂತನ ಪದಾಧಿಕಾರಿಗಳಾಗಿ ಚಂದ್ರಹಾಸ ಎನ್, ರಂಜಿತ್ ಶೆಟ್ಟಿ, ಉಷಾ ಶೆಟ್ಟಿ, ಅಂಜನ , ರಾಜೇಶ್, ಕಿಶೋರ್ ಆಚಾರ್ಯ, ರವಿಂದ್ರ, ಎಂ ,ಶೀಲಾ ಪಡೀಲ್, ಪ್ರಶಾಂತ ಸುವರ್ಣ, ಮುಂತಾದವರು ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ವೇಣಿ ಮರೋಳಿ. ಗುರುಪೀತ ಆಳ್ವ ವಲಯ ಅಧ್ಯಕ್ಷ ಚಂದ್ರಕಲ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತವನ್ನು ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ವಿಮಲಾ ತುಳಸಿ ರಾಜ್ ಧನ್ಯವಾದಗೈದರು.ಸನ್ಮಾನ: ಈ ಸಂದರ್ಭದಲ್ಲಿ ತುಳುನಾಡು ಪ್ರತಿಷ್ಠಾಪನದ ಅಧ್ಯಕ್ಷ, ಪತ್ರಕರ್ತ ರಾಜೇಶ್ ಅಮೀನ್ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

‘ಮನೋಹರ ಪ್ರಸಾದ್ ನೆನಪು’ ಕಾರ್ಯಕ್ರಮದಲ್ಲಿ ಡಾ. ಎಂ. ಮೋಹನ್ ಆಳ್ವ. ‘ಪತ್ರಕರ್ತರ ನಡುವಿನ ಸೂಪರ್ ಸ್ಟಾರ್ ಮನೋಹರ್ ಪ್ರಸಾದ್.’

ವಿದ್ಯಾಗಿರಿ(ಮೂಡುಬಿದಿರೆ): ‘ಪತ್ರಕರ್ತರ ನಡುವಿನ ಸೂಪರ್ ಸ್ಟಾರ್’ ಮನೋಹರ ಪ್ರಸಾದ್’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಣ್ಣಿಸಿದರು.ಇಲ್ಲಿನ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ನಡೆದ ‘ಮನೋಹರ ಪ್ರಸಾದ್ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅವರು ಪತ್ರಕರ್ತರಿಗಿಂತ ಹೆಚ್ಚಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಂತೆ ಜನಮಾನಸದಲ್ಲಿ ಬೆರೆತು ಹೋಗಿದ್ದರು. ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರ ಹೆಸರನ್ನು ವಿರಾಸತ್ ನಲ್ಲಿ ನಾವು ಈ ಬಾರಿ ಸ್ಮರಿಸಿಕೊಳ್ಳುತ್ತೇವೆ ಎಂದರು.ನಾನು ಮತ್ತು ಮನೋಹರ್ ಸಮಕಾಲೀನರು ಹಾಗೂ ಗ್ರಾಮೀಣ ಸ್ಪಂದನೆಯವರು. ನಮ್ಮದು ಹುಚ್ಚು ಮನಸ್ಸಿನ ಹತ್ತು ಮುಖಗಳು. ಮನೋಹರ್ ಶಿಕ್ಷಕ ಆಗಿರಬೇಕಿತ್ತು ಎಂದರು.ಅಪೂರ್ವ ಜ್ಞಾಪಕ ಶಕ್ತಿ. ಸಮಯಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದ ಅವರೊಂದು ವಿಶ್ವಕೋಶ. ಖ್ಯಾತ ನಟ ಮಮ್ಮುಟ್ಟಿ ಮಂಗಳೂರಿಗೆ ಬಂದಿದ್ದಾಗ ಅವರು ಸಂದರ್ಶನ ಮಾಡಿದ್ದರು. ಅದನ್ನು ನೋಡಿದ ಮಮ್ಮುಟ್ಟಿ ಶ್ಲಾಘಿಸಿದ್ದರು ಎಂದು ಆಳ್ವ ಅವರು ನಪಿಸಿಕೊಂಡರು.ನಿರೂಪಕನಾಗಿ ಭಾಷೆ ಮೇಲಿನ ಹಿಡಿತ ಹಾಗೂ ಸ್ವರ ಮಾಧುರ್ಯ ಗಮನ ಸೆಳೆಯುತ್ತಿತ್ತು. ನುಡಿಸಿರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅದನ್ನು ಕೇಳುವುದೇ ಸೊಗಸಾಗಿತ್ತು ಎಂದರು.ಸುಮಾರು 5 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 22 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 9 ಮಸ್ತಕಾಭಿಷೇಕ ನಿರೂಪಣೆ ಹಾಗೂ ಆಕಾಶವಾಣಿಯಲ್ಲಿ ಸುಮಾರು 91 ಕಾರ್ಯಕ್ರಮ ನೀಡಿದ್ದರು ಎಂದು ಸ್ಮರಿಸಿದರು.ಅವರ ಕುಗ್ರಾಮ ಗುರುತಿಸುವ ಬರಹವು ಶ್ರೇಷ್ಠವಾಗಿದೆ. ಕೌಟುಂಬಿಕವಾಗಿ ಒಡಹುಟ್ಟಿದವರನ್ನು ಕಳೆದುಕೊಂಡು ನೋವುಂಡರೂ, ಒಂಟಿಯಾಗಿ ಜೀವಿಸಿದರು. ಜನರಿಗೆ ಸ್ಪಂದಿಸಿದರು ಎಂದು ನೆನಪಿಸಿಕೊಂಡರು.ಅವರು ತಮ್ಮ ಕೊನೆದಿನಗಳಲ್ಲಿ ನವ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಮನೋಹರ ಪ್ರಸಾದ್ ಅವರ ನಿಧನದಿಂದ ಕರಾವಳಿ ಪತ್ರಿಕೋದ್ಯಮದಲ್ಲಿ ಒಂದು ಶ್ರೇಷ್ಠ ಅಧ್ಯಾಯ ಯುಗಾಂತ್ಯ ಕಂಡಿದೆ ಎಂದರು.ಮನೋಹರ ಅವರು ಬರಹ ಮಾತ್ರವಲ್ಲದೇ ವ್ಯಕ್ತಿತ್ವದ ಮೂಲಕ ಪತ್ರಿಕೋದ್ಯಮಕ್ಕೆ ಹಲವರನ್ನು ಸೆಳೆದವರು ಎಂದರು.ಮೂರು ತಲೆಮಾರಿನ ಸಾಧಕರನ್ನು ಕಂಡವರು. ಅವರ ಸ್ಮರಣಶಕ್ತಿ ಅದ್ಭುತ. ಅವರಿಗೆ ತಿಳಿಯುವ ಕುತೂಹಲ ಹಾಗೂ ವಿದ್ಯಾರ್ಥಿ ಮನಸ್ಸು ಹೊಂದಿದ್ದರು ಎಂದರು.ಅವರು ಅವಕಾಶ ಸದ್ಬಳಕೆ ಮಾಡುತ್ತಿದ್ದರು. ವೈವಿಧ್ಯಮಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಕಾರಣ ತುಳುನಾಡಿನ ರಾಯಭಾರಿಯೇ ಆಗಿದ್ದರು ಎಂದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಮನೋಹರ ಪ್ರಸಾದ್ ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕಾರ್ಯಕ್ರಮಗಳನ್ನು ನಮ್ಮ ಸಂಘ ಹಮ್ಮಿಕೊಳ್ಳಲಿದೆ ಎಂದರು.ಪತ್ರಕರ್ತರಿಗೆ ರಾಜ್ಯ ಮಟ್ಟದ ಕಾರ್ಯಾಗಾರ, ದತ್ತಿ ಪ್ರಶಸ್ತಿ, ಕ್ರಿಕೆಟ್ ಪಂದ್ಯಾಟ ನಡೆಸುವ ಯೋಜನೆ ಇದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಇಬ್ರಾಹಿಂ ಅಡ್ಕಸ್ಥಳ, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು, ಭಾಸಕರ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಇದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸಮಾಜಮುಖಿ ಕಾರ್ಯಗಳಿಗೆ ಸನ್ಮಾನ ಹುಡುಕಿಕೊಂಡು ಬರುತ್ತವೆ: ಡಿಸಿಪಿ ದಿನೇಶ್ ಕುಮಾರ್

ಸಮಾಜಕ್ಕೆ ಬೆಳಕು ಚೆಲ್ಲುವ ವಿಚಾರಗಳೊಂದಿಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲಹೆಗಳು ಪತ್ರಿಕೆಗಳಿಂದ ನಿರೀಕ್ಷಿಸಲಾಗುತ್ತಿದೆ. ಜನಸಾಮಾನ್ಯರಿಗೆ ಉಪಯುಕ್ತ ಹಾಗೂ ಸಮಾಜಕ್ಕೆ ಒಳಿತಾಗುವ ಕೆಲಸ ನಿರಂತರ ಮುಂದುವರೆಯಬೇಕು. ಬಸ್ ಸಿಬಂದಿಗಳ ಮಾನವೀಯ ಕಾರ್ಯಗಳು ಇತರರಿಗೂ ಮಾದರಿ ಎಂದು ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.ಪತ್ರಿಕಾಭವನದಲ್ಲಿ ಮಂಗಳವಾರದಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ವತಿಯಿಂದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಮಾನವೀಯತೆ ಮೆರೆದ ಬಸ್ ಸಿಬಂದಿಗಳಿಗೆ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು.ಮಂಗಳೂರು ನಗರದಲ್ಲಿ ಅನೇಕ ಸಮಸ್ಯೆಗಳಿವೆ. ರಸ್ತೆ ಅಗೆಯುವುದು, ಅಲ್ಲಲ್ಲಿ ಹೊಂಡ ಗುಂಡಿಗಳು, ವಾಹನ ದಟ್ಟನೆ ಇತ್ಯಾದಿ ಸಮಸ್ಯೆಯ ನಡುವೆಯೂ ಸಂಚಾರ ನಿಭಾಯಿಸಲು ಸಾರ್ವಜನಿಕರು ಸಹಕಾರ ನೀಡುತ್ತಿರುವುದು ಅಪೇಕ್ಷಿತ ಎಂದು ಹೇಳಿದರು.ಮಂಗಳೂರು ಆರ್‌ಟಿಒ ಶ್ರೀಧರ್ ಮಲ್ಲಾಡ್ ಮಾತನಾಡಿ, ಬಸ್ ಮಾಲಕರು ಸಾರಿಗೆ ಇಲಾಖೆಗೆ ಪ್ರತೀ ತಿಂಗಳು ಎರಡುವರೆ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದು, ನಗರದಲ್ಲಿ ಎರಡನೇ ಅತ್ಯಧಿಕ ತೆರಿಗೆ ಪಾವತಿದಾರರಾಗಿದ್ದಾರೆ. ಇಲಾಖೆಯೊಂದಿಗೆ ಪ್ರಾಮಾಣಿಕವಾಗಿ ವರ್ತಿಸುವ ಜತೆಗೆ ಬಸ್‌ಗಳಲ್ಲಿನ ಸಿಬಂದಿಗಳ ಮಾನವೀಯ ಕಾರ್ಯಗಳು ಸಮಾಜಕ್ಕೆ ಆದರ್ಶ ಎಂದರು.ಸಂಚಾರ ವಿಭಾಗದ ಎಸಿಪಿ ನಜ್ಮಾ ರೂಕ್ ಮಾತನಾಡಿ, ಮಂಗಳೂರಿನ ಖಾಸಗಿ ಬಸ್‌ನವರು ಡಿಜಿಟಲ್ ಇಂಡಿಯಾಕ್ಕೆ ಚಾಲನೆ ನೀಡುವ ಮೂಲಕ ರಾಜ್ಯದಲ್ಲೇ ಮೊದಲ ಪ್ರಯತ್ನ ಮಾಡಿದ್ದಾರೆ. ಅದರ ಜತೆಗೆ ಮಾದ್ಯಮದವರ ಆಗತ್ಯತೆಗೆ ಬಸ್ ಮಾಲಕರು ನೆರವಾಗಿದ್ದಾರೆ. ಬಸ್ ಪಾಸ್ ಪತ್ರಕರ್ತರಿಗೆ ಉಪಯುಕ್ತವಾಗಲಿದೆ ಎಂದರು.ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ವಿಶ್ವದಲ್ಲೇ ಮಾನವ ಹಕ್ಕು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ರಚನಾತ್ಮ ಕೆಲಸ ಮಾದ್ಯಮ ನಿರ್ವಹಿಸುತ್ತಿದೆ. ಜಿಲ್ಲೆಯ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳತ್ತ ಪತ್ರಕರ್ತರು ಬೆಳಕು ಚೆಲ್ಲಬೇಕಿದೆ. ಸಾರಿಗೆ ವ್ಯವಸ್ಥೆಯನ್ನು ಎಚ್ಚರಿಸುವ ಜತೆಗೆ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಅಭಿನಂದನೀಯ ಎಂದರು.ಸಮಾರಂಭದಲ್ಲಿ ಪತ್ರಕರ್ತರಿಗೆ ಖಾಸಗಿ ಬಸ್ ಮಾಲಕ ಸಂಘದ ವತಿಯಿಂದ ಪಾಸ್ ವಿತರಿಸಲಾಯಿತು.ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯ ವೃಂದದ ಯಕ್ಷ ಸಿದ್ಧಿ ಸಂಭ್ರಮ. ಸಿದ್ಧಿ ದಶಯಾನ ಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಮಕ್ಕಳ ನೂಪುರ ನಿನಾದ. ಆಗಸ್ಟ್ 10 ಮತ್ತು 11ಆಗಸ್ಟ್ 2024 ರಂದು ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನ ಉರ್ವಸ್ಟೋರ್ ನಲ್ಲಿ ನಡೆಯಲಿದೆ.

ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 15ವರ್ಷಗಳಿಂದ ತೊಡಗಿಸಿಕೊಂಡು,ನಾಟ್ಯ ಮಯೂರಿ, ಯಕ್ಷ ಸವ್ಯಸಾಚಿ ಬಿರುದುಗಳೊಂದಿಗೆ ಖ್ಯಾತರಾಗಿ, ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡು ಅವಿಭಜಿತ ದ.ಕ.ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರುಷಗಳಾದ ನಿಟ್ಟಿನಲ್ಲಿ ದಶಮಾನೋತ್ಸವದ ಅಂಗವಾಗಿ ವಿವಿಧೆಡೆಯ ಇವರ ಶಿಷ್ಯ ವೃಂದವನ್ನು ಒಗ್ಗೂಡಿಸಿ 300ಕ್ಕೂ ಅಧಿಕ ಶಿಷ್ಯವೃಂದದವರಿಂದ ಸಂಯೋಜಿಸಲಾದ ಹತ್ತು ಹಲವು ಯಕ್ಷಗಾನ ವಿವಿಧ ಪ್ರದರ್ಶನಗಳನ್ನು ಯಕ್ಷ ಸಿದ್ಧಿ ಸಂಭ್ರಮ , ಸಿದ್ಧಿ ದಶಯಾನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಆಗಸ್ಟ್ 10, ಶನಿವಾರ ಹಾಗೂ ಆ.11 ರವಿವಾರ ಬೆಳಗ್ಗೆಯಿಂದ ರಾತ್ರಿ ವರೆಗೆ ಮಂಗಳೂರು , ಉರ್ವಸ್ಟೋರ್, ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.ಆ.10ರಂದು ಬೆಳಗ್ಗೆ 9ರಿಂದ ಚೌಕಿ ಪೂಜೆ, ಪೂರ್ವ ರಂಗ, 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಯಕ್ಷಗಾನ ವಿದ್ವಾಂಸ ಶ್ರೀ ವಾಸುದೇವ ರಂಗಾ ಭಟ್ಟ ಅವರು ಉದ್ಘಾಟಿಸಲಿರುವರು. ಮಂಗಳೂರು ಮಹಾ ನಗರ ಪಾಲಿಕೆಯ ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಲಿರುವರು.ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್, ಕದ್ರಿ ಪೊಲೀಸ್ ಠಾಣಾ ಉಪ ಠಾಣಾಧಿಕಾರಿ ಸುಧಾಕರ ರಾವ್ ಪಾಟೀಲ್, ಪಡ್ರೆ ಶ್ರೀ ಧೂಮಾವತಿ ಚಾವಡಿ ಮನೆಯ ಗಡಿ ಪ್ರಧಾನ ಬಾಬು ಬಂಡ್ರಿಯಾಲ್, ಜಲ್ಲಿಗುಡ್ಡೆ ಅಂಬಾ ಭವಾನಿ ಭಜನಾ ಮಂದಿರದ ಗೌರವಾಧ್ಯಕ್ಷ ಹರಿಕೇಶವ ಜಾದವ್, ಹಿರಿಯ ವಕೀಲ ಸದಾಶಿವ ಐತಾಳ್‌ ಅತಿಥಿಗಳಾಗಿ ಭಾಗವಹಿಸುವರು.10.30ರಿಂದ ವಿದ್ಯಾರ್ಥಿಗಳಿಂದ ದೇವಸೇನಾನಿ, ಗಂಟೆ 12ರಿಂದ ಮಹಿಳೆಯರಿಂದ ಪಾವನ ಪಕ್ಷಿ ಯಕ್ಷಗಾನ ನಡೆಯಲಿದೆ. ಮಧ್ಯಾಹ್ನ ಭೋಜನ ವಿರಾಮ, 1.45ರಿಂದ ಯಕ್ಷಗಾನ ರೂಪಕ ದಾಶರಥಿ ದರ್ಶನ, 3.45ರಿಂದ ಧರ್ಮ ದಂಡನೆ ಯಕ್ಷಗಾನ ನಡೆಯಲಿದೆ. ಸಂಜೆ 5ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅಧ್ಯಕ್ಷತೆ ವಹಿಸುವರು. ಉದ್ಯಮಿಗಳಾದ ಎ.ಕೆ. ಜಯರಾಮ ಶೇಖ, ಪ್ರೇಮನಾಥ ಮಾರ್ಲ,, ಹಿರಿಯ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು,ಇರ್ವತ್ತೂರು ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ತಾನದ ಅಧ್ಯಕ್ಷ ಮೋಹನ ಶೆಟ್ಟಿ ನರ್ವಲ್ದಡ್ಡ, ಉರ್ವ, ಚಿಲಿಂಬಿ ಸಾಯಿ ಶಕ್ತಿ ಕಲಾಬಳಗದ ಸಂಚಾಲಕಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್, ಪಾತೂರು ಮೇಗಿನ ಮನೆ ಕಲ್ಲಾಡಿ ಧೂಮಾವತಿ ದೈವಸ್ಥಾನದ ಅಧ್ಯಕ್ಷ ಲ| ಚಂದ್ರಹಾಸ ರೈ, ಕಾಟಿಪಳ್ಳ ಬ್ರಹ್ಮ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಯಾಕರ ಪಿ.ಕುಳಾಯಿ, ಬಲಿಪಗುಳಿ ಉದ್ಯಮಿ ಡಾ.ರಮೇಶ್ ಚಂದ್ರ ಸಿ.ಜಿ., ಗುರುಪುರ ಡಾ.ಬಿ.ಆರ್ ಆಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಜಯಕರ ಶೆಟ್ಟಿ, ಎಂಆರ್‌ಪಿಎಲ್ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸುವರು. ಸಂಜೆ ಗಂಟೆ 6.30ರಿಂದ ಯಕ್ಷ ನವರಸ ವೈಭವ, 8ರಿಂದ ವಿನೂತನ ಪ್ರಯೋಗ ಹಿಮ್ಮಿಂಚು ಯಕ್ಷಗಾನ ನಡೆಯಲಿದೆ.ಆ.11ರಂದು ಬೆಳಗ್ಗೆ ಗಂಟೆ 9.30ರಿಂದ ಯಕ್ಷಗಾನ ಲೀಲಾಮಾನುಷ ವಿಗ್ರಹ, ಗಂಟೆ 12ರಿಂದ ನೃತ್ಯ ವಚನ ಚಿತ್ರ ಕಥನ ನಡೆಯಲಿದೆ. ಮಧ್ಯಾಹ್ನ ಭೋಜನ ವಿರಾಮ ಬಳಿಕ ದಶಾವತಾರ ಮತ್ತು ಪಾದ ಪ್ರತೀಕ್ಷಾ ಯಕ್ಷಗಾನ ಪ್ರದಶರನ ನಡೆಯಲಿದೆ. ಸಂಜೆ ಸಮಾರೋಪ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಲಿರುವರು.ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಲಿರುವರು. ಉದ್ಯಮಿ ಮಿಥುನ್ ರೈ, ರಾಮನಗರ ಪೊಲೀಸ್ ಉಪಾಧಿಕ್ಷಕ ದಿನಕರ ಶೆಟ್ಟಿ,ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ನಿರಂಜನ ಎನ್.ಚಿಪ್ಳೂಣ್ಕರ್, ಜಾಗತಿಕ ಬಂಟರ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಗುರುಪುರ ಬಂಟರ ಮಾತೃಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ಮಂಗಳೂರು ಟ್ರಾಫಿಕ್ ಟಾಣೆಯ ಸಂತೋಷ್ ಪಡೀಲು, ಉದ್ಯಮಿ ಎಂ.ಹರಿ ರಾವ್ ಕೈಕಂಬ, ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು, ಕಲಾ ಪೋಷಕಿ ಶಕುಂತಲಾ ಆರ್. ಭಟ್ ಸುರತ್ಕಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಈ ಸಂದರ್ಭದಲ್ಲಿ ಯಕ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷ ಸಿದ್ಧಿ ಪ್ರಶಸ್ತಿ, ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ಗಂಟೆ 6 ರಿಂದ ಯಕ್ಷಗಾನ ವೈವಿಧ್ಯ ನೀನೋ-ನಾನೋ,ಬಳಿಕ ತೆಂಕು ಬಡಗು ತಿಟ್ಟಿನ ಯಕ್ಷಗಾನ ನಾಗಶ್ರೀ ನಡೆಯಲಿದೆ.ಪತ್ರಿಕಾಗೋಷ್ಟಿಯಲ್ಲಿಯಲ್ಲಿ ಸದಾಶಿವ ಐತಾಳ್, ರಕ್ಷಿತ್ ಶೆಟ್ಟಿ ಪಡ್ರೆ, ರವಿಪ್ರಸಾದ್ ಶೆಟ್ಟಿ, ಶ್ರವಣ್ ಉಡುಪ ಕತ್ತಲ್ ಸಾರ್, ಉಮೇಶ್ ಆಚಾರ್ಯ,ಸತ್ಯಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆಗಸ್ಟ್ 6 ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ

ಮಂಗಳೂರು, ಆಗಸ್ಟ್ 4: ದಕ್ಷಿಣ ಕನ್ನಡ ಖಾಸಗಿ ಬಸ್ಸು ಮಾಲಕರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಭಾಗಿ ತ್ವದಲ್ಲಿ ಪತ್ರಕರ್ತರಿಗೆ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಆಗಸ್ಟ್ 6 ರಂದು ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ಭವನ ದಲ್ಲಿ ನಡೆಯಲಿದೆ.ಮಂಗಳೂರು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ದಿನೇಶ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಬಸ್ ಪಾಸ್ ವಿತರಣೆ ಮಾಡಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಆಝೀಜ್ ಪರ್ತಿಪ್ಪಾಡಿ, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮ್ ಫಾರೂಕಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್ ಗೌರವ ಉಪಸ್ಥಿತರಿರುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆ.10ರಂದು ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 28ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆ.10ರಂದು ನಗರದ ಮೋತಿ ಮಹಲ್ ಹೋಟೆಲ್‌ನಲ್ಲಿ ನಡೆಯಲಿದೆ. ಬೆಳಗ್ಗೆ 11ಕ್ಕೆ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮೇಜರ್ ಜನರಲ್ ಸತೀಶ್ ಭಂಡಾರಿ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್’ ಪ್ರದಾನ ಮಾಡಲಾಗುವುದು. ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ದಿ.ಡಾ.ಡಿ.ಕೆ.ಚೌಟ ದತ್ತಿನಿಧಿಪ್ರಶಸ್ತಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಪುಷ್ಪ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ಮನೀಶ್ ಶೆಟ್ಟಿ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ರೋಶನ್ ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ವಿತರಿಸಲಾಗುವುದೆಂದು ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಫೋಟೋ : ಸತೀಶ್ ಭಂಡಾರಿ

Scroll to Top