ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನಾಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಚರ್ಚ್ ವ್ಯಾಪ್ತಿಯ 10 ವಾರ್ಡ್ ಗಳ 82 ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಬಲಿ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ. ರಿಚಾರ್ಡ್ ಕ್ವಾಡ್ರಸ್ ಅವರು ಹಿರಿಯ ನಾಗರಿಕರು ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು. ಚರ್ಚಿನ ಪ್ರದಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರು ಹಿರಿಯ ನಾಗರಿಕರಿಗೆ ಹಿತ ವಚನ ನೀಡಿದರು.ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ, ಸ್ವಾಗತಿಸಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಪರವಾಗಿ ಚಾರ್ಲ್ಸ್ ಡಿಮೆಲ್ಲೊ ತಮ್ಮ ಅನಿಸಿಕೆ ಹೇಳಿದರು. ಪ್ಲಾವಿಯಾ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಸಿರಿಲ್ ಫೆರ್ನಾಂಡಿಸ್ ಮತ್ತು ತಂಡದವರು ಕಿರು ನಾಟಕ ಪ್ರದರ್ಶಿಸಿದರು. ಚಾರ್ಲ್ಸ್ ಫೆರ್ನಾಂಡಿಸ್ ನಗೆ ಹನಿ ಪ್ರದರ್ಶನ ನೀಡಿದರು.ಕ್ಲಿಫರ್ಡ್ ಅವರು ವಂದಿಸಿದರು

ಪ್ರಾದೇಶಿಕ ವಾರ್ತೆಗಳು

ನ.17; ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಶ್ರೀರಾಮನಾಮ ಜಪ ಮಹಾ ಅಭಿಯಾನ, ನ.3 – 21: ಮಂಗಳೂರಿನಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಮೊಕ್ಕಾಂ

ಮಂಗಳೂರು, ಅ.29;ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಪರಮಪೂಜ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿಯವರು ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದ ಶಾಖಾ ಮಠದಲ್ಲಿ ನ.3 ರಿಂದ ನ.21ರವರೆಗೆ ಮೊಕ್ಕಾಂ ಹೂಡಲಿದ್ದಾರೆ.ಈ ಹಿನ್ನೆಲೆಯಲ್ಲಿ ನ.17ರಂದು ಒಂದೇ ದಿನದಲ್ಲಿ 55ಲಕ್ಷ ಜಪ ಸಂಖ್ಯೆಯ ಗುರಿ ಹೊಂದಿರುವ ಶ್ರೀ ರಾಮನಾಮ ಜಪ ಮಹಾ ಅಭಿಯಾನ ಮಂಗಲರಾಮಃ ಕೇಂದ್ರದಲ್ಲಿ ನಡೆಯಲಿದೆ. ಎಪ್ರಿಲ್ 17 ರಂದು ಆರಂಭಿಸಲಾದ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ , ಮಂಗಲರಾಮಃ ಕೇಂದ್ರದಲ್ಲಿ ಈಗಾಗಲೇ10.50 ಕೋಟಿ ಶ್ರೀ ರಾಮನಾಮ ಜಪ ನಡೆದಿದೆ. ನ 18,2025 ರೊಳಗೆ 25ಕೋಟಿ ಶ್ರೀ ರಾಮನಾಮ ಜಪ ತಲುಪುವ ಉದ್ದೇಶ ಹೊಂದಲಾಗಿದೆ.ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಎರಡನೇ ಬಾರಿಯ ಈ ಐತಿಹಾಸಿಕ ಮೊಕ್ಕಾಂ ನ ಸಂದರ್ಭದಲ್ಲಿ ಸಮಾಜದ ಭಕ್ತ ಬಾಂಧವರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಶ್ರೀರಾಮ ವೀರ ವಿಠಲ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಹಾಗೂ ಪರಮಪೂಜ್ಯ ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

‘ಅಂಗನವಾಡಿ ಕೇಂದ್ರದಿಂದ ಶಿಕ್ಷಣಕ್ಕೆ ಅಡಿಪಾಯ’ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಎಳೆಯ ಮಕ್ಕಳನ್ನು ಪೋಷಿಸಿ ಅಕ್ಷರಜ್ಞಾನ ನೀಡುವ ಅಂಗನವಾಡಿ ಕೇಂದ್ರಗಳು ಶಿಕ್ಷಣಕ್ಕೆ ಅಡಿಪಾಯವಿದ್ದಂತೆ. ಕಲಿಕೆ ಇಲ್ಲಿಂದಲೇ ಆರಂಭವಾಗುವುದರಿಂದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಸೇವೆ ಮಹತ್ತರವಾದುದು ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಬಿಜೈ ಕಾಪಿಕಾಡ್‌ನ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದ ಪುಟಾಣಿಗಳ ಜತೆ ಹಣತೆಯೊಂದಿಗೆ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಮರ್ಪಕ ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲು ರೆಡ್‌ಕ್ರಾಸ್ ಸಂಸ್ಥೆ ಬದ್ಧವಾಗಿದೆ ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಕೇಶವ ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ನಂದಾ ಸುರೇಶ್, ಸಹಾಯಕಿ ಲಕ್ಷ್ಮಿ, ಆಶಾ ಕಾರ್ಯಕರ್ತೆ ಪ್ರಭಾ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಟೇಕ್ವಾಂಡೋ: ಸಂಹಿತಾಗೆ ಎರಡು ಕಂಚಿನ ಪದಕ

ಮಂಗಳೂರು: ಬ್ಯಾಂಕಾಕ್‌ನಲ್ಲಿ ನಡೆದ ಟೇಕ್ವಾಂಡೋ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಎರಡು ಕಂಚಿನ ಪದಕ ಗಳಿಸಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಪೂಮ್ಸೆ ಮತ್ತು ಕ್ಯೂರೋಗಿ ವಿಭಾಗದಲ್ಲಿ ಪದಕ ಗಳಿಸಿದರು.೨೦೨೧ರಲ್ಲಿ ನೇಪಾಳದಲ್ಲಿ ನಡೆದ ಜೂನಿಯರ್‌ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ, ೨೦೨೨ರಂದು ಮಲೇಷ್ಯಾದಲ್ಲಿ ಬೆಳ್ಳಿ ಪದಕ, ೨೦೨೩ರಲ್ಲಿ ಮಲೇಷ್ಯಾದಲ್ಲಿ ಚಿನ್ನದ ಮತ್ತು ಕಂಚಿನ ಪದಕ ಗಳಿಸಿದ್ದರು.ಈ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ನಿಟ್ಟೆ ಎನ್‌ಎಂಎಎಐಟಿ ಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸಂಹಿತಾ, ಕದ್ರಿಯ ವಾಸುದೇವ ಭಟ್‌ ಮತ್ತು ದೀಪಾ ಕೆ.ಎಸ್.‌ ದಂಪತಿ ಪುತ್ರಿ. ಗುರುರಾಜ್‌ ಇಟಗಿ ಮತ್ತು ನಿಖಿಲ್‌ ಶೆಟ್ಟಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಪ್ರಾದೇಶಿಕ ವಾರ್ತೆಗಳು

ಐಎಂಎ ಮಂಗಳೂರು ಇವರ ಆಶ್ರಯದಲ್ಲಿ ಪ್ರಥಮ ಭಾರಿಗೆ ಕನ್ನಡ ಪುಸ್ತಕ ಬಿಡುಗಡೆ, ರಾಜ್ಯೋತ್ಸವ. ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸಗಳು.

ಮಂಗಳೂರು: ನವೆಂಬರ್ 1 ರಂದು ಬೆಳಿಗ್ಗೆ 1೦:3೦ಕ್ಕೆ ಸರಿಯಾಗಿ ನಾಡಿನ ಹಿರಿಯ ವೈದ್ಯ ಡಾ ಶಾಂತಾರಾಮ ಶೆಟ್ಟಿಯವರ ಅಮೃತ ಹಸ್ತಗಳಿಂದ ನಾಡ ಧ್ವಜಾರೋಹಣ ಜರುಗಲಿದ್ದು, ಡಾ. ಶಾಂತಾರಾಮ ಶೆಟ್ಟಿ ಯವರು ಬರೆದ ಕನ್ನಡ ಪುಸ್ತಕಗಳನ್ನ ಮಾಜಿ ರಾಜ್ಯ ಕಸಾಪ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಲಿದ್ದಾರೆವೈದ್ಯಕೀಯ. ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರಕ್ಕಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಜನಜಾಗೃತಿ ಮೂಡಿಸಿದ ರಾಜ್ಯ ಮಟ್ಟದ ಐಎಂಎ ಯ ವೈದ್ಯ ರೋರ್ವರಿಗೆ ಈ ವರ್ಷದಿಂದ ಐಎಂಎ ಮಂಗಳೂರು ವತಿಯಿಂದ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿಯನ್ನು ನಾಡೋಜ ಜೀ ಶಂಕರ್ ಪ್ರದಾನ ಮಾಡಲಿದ್ದು,ನಿಟ್ಟೆ ವಿವಿಯ ವಿಶ್ರಾಂತ ವೈಸ್ ಚಾನ್ಸಲರ್ ಡಾ ಸತೀಶ್ ಭಂಡಾರಿಯವರು ಶುಭಾಶಯ ನುಡಿ ಸಲ್ಲಿಸಲಿದ್ದು, ಬಹುಭಾಷಾ ನಟ ಸುಮನ್ ತಲ್ವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ದಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀನಾಥ್ ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅವರುಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ವೈದ್ಯೋ ನಾರಾಯಣ ಹರಿ ಇದೆಲ್ಲಾ ಯೆಸ್ಟು ಸರಿ. ಎಂಬ ಕನ್ನಡ ಉಪನ್ಯಾಸವನ್ನ ಹಿರಿಯ ವೈದ್ಯ ಸಾಹಿತಿ, ಸಮಾಜವಿಜ್ಞಾನಿ, ಸಂಘಟಕ ಡಾ ಎಂ ಅಣ್ಣಯ್ಯ ಕುಲಾಲ್ ನಡೆಸಿಕೊಡಲಿದ್ದಾರೆ. ಜೊತೆಗೆ ರಕ್ತ ಸಂಬಂಧಿತ ಕಾಯಿಲೆಗಳ ತಜ್ಞ ವೈದ್ಯರಾದ ಕೆ ಎಂ ಸಿ ಯ ಡಾ ಪ್ರಶಾಂತ್ ಬಿ ಯವರು ಹಿರಿಯರಲ್ಲಿ ರಕ್ತ ಹೀನತೆ ಯೆಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಐಎಂಎ ಮಂಗಳೂರು ಇದರ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಜಿ ಗಳಾದ ಡಾ ರಂಜಾನ್, ಡಾ ಆವಿನ್ ಆಳ್ವ ಹಾಗೂ ಡಾ ಪ್ರಶಾಂತ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಈ ಸಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇಲ್ಲ. ಬದಲಾಗಿ, ಜಿಲ್ಲಾ ಪ್ರಶಸ್ತಿ ಕೊಡಲಾಗುವುದು-ಜಿ. ಸಂತೋಷ್ ಕುಮಾರ್, ಅಪರ ಜಿಲ್ಲಾಧಿಕಾರಿ.

ವರದಿ: ಡಾ. ಅಶೋಕ್ ಶೆಟ್ಟಿ.ಬಿ. ಎನ್. ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರವು ಕೊಡುತ್ತಿದ್ದರಿಂದ ಜಿಲ್ಲಾ ಮಟ್ಟದಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಎನ್ನುವ ಬದಲು ಜಿಲ್ಲಾ ಪ್ರಶಸ್ತಿಯೆಂದು ಕೊಡಲಾಗುವುದೆಂದು ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಹೇಳಿದ್ದಾರೆ. ನಾಳೆ ಸಂಜೆಯೊಳಗೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಹೆಸರು ಬಿಡುಗಡೆಯಾಗಲಿದೆ.

ಪ್ರಾದೇಶಿಕ ವಾರ್ತೆಗಳು

ಸೂರಿಂಜೆಯಲ್ಲಿ ದೀಪಾವಳಿಯ ಮೆರುಗು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆ

ಸುರತ್ಕಲ್: ಸೂರಿಂಜೆಯಲ್ಲಿನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಆಯೋಜನೆಯಲ್ಲಿ ದೀಪಾವಳಿ ಹಬ್ಬದ ಮೆರುಗನ್ನು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸೂರಿಂಜೆ, ಕಾಟಿಪಳ್ಳ, ಕೃಷ್ಣಾಪುರ, ಕಿನ್ನಿಗೋಳಿ, ಪಕ್ಷಿಕೆರೆ, ಚೇಳಾಯರು, ಶಿಬರೂರು, ಕೈಕಂಬ, ಕುತ್ತೆತ್ತೂರು ಪರಿಸರ ದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.ದಿನಾಂಕ 3.11.24 ರ ಸಾಯಂಕಾಲ 4 ಗಂಟೆಯಿಂದ 7 ಗಂಟೆವರೆಗೂ ತಾವು ತಯಾರಿಸಿದ ಗೂಡುದೀಪವನ್ನು ತಂದು ಮಂದಿರದ ಆಯೋಜಕರು ನಿಗದಿಪಡಿಸಿದ ಸ್ಥಳದಲ್ಲಿ ಅಳವಡಿಸುವುದು. ಗೂಡು ದೀಪವನ್ನು ತಮ್ಮ ತಮ್ಮ ಜಾಗದಲ್ಲಿ ತಯಾರಿಸಿ ತರಬಹುದಾಗಿದೆ.ಪರಿಸರಸ್ನೇಹಿ ಮತ್ತು ಸಾಂಪ್ರದಾಯಿಕ ಗೂಡುದೀಪಕ್ಕೆ ಆದ್ಯತೆ.ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಮತ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು.ಪ್ರೇಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಇತರೇ ವಿಜೇತರೆಂದು ಘೋಷಿಸಿ ಬಹುಮಾನ ವಿತರಿಸಲಾಗುವುದು.ಗೂಡುದೀಪ ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಊರು ದಿನಾಂಕ 30.10.2024 ರ ಒಳಗಾಗಿ ವಾಟ್ಸ್ ಅಪ್ ಮುಖಾಂತರ ಕಳುಹಿಸಬೇಕೆಂದು ವಿನಂತಿ.ಮೊಬೈಲ್ ಸಂಖ್ಯೆ : 8197574625.ಮೊದಲನೇ ಬಹುಮಾನ : ರೂ. 5000ಎರಡನೇ ಬಹುಮಾನ ರೂ. 3000ತೃತೀಯ ಬಹುಮಾನ ರೂ. 200010 ಸಮಾಧಾನಕರ ಬಹುಮಾನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕುತ್ಲುರು ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಊಟದ ಸ್ಟೀಲ್ ತಟ್ಟೆ ಹಾಗೂ ಕಪಾಟು ವಿತರಣೆ

ಮಂಗಳೂರು, ಅಕ್ಟೋಬರ್ 29,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿರುವ ಕುತ್ಲುರು ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಿಸಲಾಯಿತು.ಸಮೃದ್ದಿ ಎಂಟರ್ಪ್ರೈಸಸ್ ಮಾಲೀಕರಾದ ಕಾಲೀ0 ಅವರು ಶಾಲೆಗೆ ಕಪಾಟು ಹಸ್ತಾಂತರಿಸಿದರು.ಶಾಲಾ ವಿದ್ಯಾರ್ಥಿಗಳು ಹಣತೆಯೊಂದಿಗೆ ದೀಪಾವಳಿ ಆಚರಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕುತ್ಲುರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಈ ಗ್ರಾಮ ಹಾಗೂ ಶಾಲೆ ಬಹಳ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಮಾತನಾಡಿ ಗ್ರಾಮೀಣ ಪ್ರದೇಶದ ಈ ಶಾಲೆ ಎಲ್ಲಾ ಶಾಲೆಗಳಿಗೆ ಮಾದರಿ ಯಾಗಿದೆ. ಈ ಶಾಲಾ ಅಭಿವೃದ್ಧಿ ಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮ ದಲ್ಲಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ದೀಪಕ್. ಜಿ, ಪದಾಧಿಕಾರಿಗಳಾದ ಶ್ರೀನಿವಾಸ್ ಕುಲಾಲ್, ಲಕ್ಷ್ಮಣ ಕೋಟ್ಯಾನ್,ವಿನೀತ್ ಬಂಗೇರ, ಸುಜಾತಾ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಜ್ಯೋತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನಿಮಿತ್ ಜೈನ್,, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾ, ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.ಶ್ರಮತಿ ರೂಪ ಕುಮಾರಿ ವಂದಿಸಿದರು. ರಾಜಾಕಾಳಪ್ಪ ನವರು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಹೀಗೂಂಟೆ!

ಬೆಂಗಳೂರು :ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದಕ್ಕಾಗಿ ಕೋಟಿ ರೂಪಾಯಿ ಕೊಡಲು ಸಿದ್ದರಿರುವ ಹಲವು ಮಂದಿ ಇದ್ದಾರೆ. ಹೀಗಿರುವಾಗ ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗೆ, ಜನ ಸಾಮಾನ್ಯರಿಗೆ ಸಿಗಲು ಸಾಧ್ಯವೇ ಎನ್ನುವ ಆಕ್ರೋಶವನ್ನು ಬಂಟ ಉದ್ಯಮಿಯೊಬ್ಬರು ಹೊರ ಹಾಕಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ. ತಾಳಮದ್ದಳೆ ವಿಚಾರ ಪ್ರಚೋದಕ ಕಲಾ ಪ್ರಕಾರ: ಡಾ.ಎ.ಜೆ.ಶೆಟ್ಟಿ

ಮಂಗಳೂರು: ‘ಮನೋರಂಜನೆಯೊಂದಿಗೆ ವಿವಿಧ ಭಾರತೀಯ ಜ್ಞಾನಶಾಖೆಗಳನ್ನು ಪರಿಚಯಿಸುವ ಯಕ್ಷಗಾನ ತಾಳಮದ್ದಳೆ ಬಹಳ ವಿಚಾರ ಪ್ರಚೋದಕವಾದ ಕಲಾ ಪ್ರಕಾರ. ಪ್ರತಿ ವರ್ಷ ಸಪ್ತಾಹದ ರೂಪದಲ್ಲಿ ಇದನ್ನು ನವೆಂಬರ ತಿಂಗಳ ನುಡಿ ಹಬ್ಬವಾಗಿ ಆಚರಿಸುತ್ತಿರುವ ಯಕ್ಷಾಂಗಣದ ಕಾರ್ಯವನ್ನು ಕಲಾಭಿಮಾನಿಗಳು ಬೆಂಬಲಿಸಬೇಕು’ ಎಂದು ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹೇಳಿದ್ದಾರೆ.ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಹನ್ನೆರಡನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹೇಶ್ ಮೋಟರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಮತ್ತು ಉದ್ಯಮಿ, ಲೋಟಸ್ ಬಿಲ್ಡರ್ಸ್ ನ ಜಿತೇಂದ್ರ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.ಸಂಘಟನಾ ಪರ್ವ:ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಕದ್ರಿ ದೇವಾಲಯದ ರಾಜಾಂಗಣದಲ್ಲಿ 2024 ನವೆಂಬರ 11ರಿಂದ 17ರವರೆಗೆ ಜಿಲ್ಲೆಯ ವಿವಿಧ ಕಲಾಸಂಘಗಳ ಸಹಕಾರದಿಂದ ನಡೆಯುವ ಈ ಬಾರಿಯ ಸಪ್ತಾಹವನ್ನು ಸಂಘಟನಾ ಪರ್ವ ಎಂದು ಕರೆಯಲಾಗಿದೆ’ ಎಂದರು. ‘ಹವ್ಯಾಸಿ ಬಳಗ ಕದ್ರಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ, ಶ್ರೀ ವಾಣೀವಿಲಾಸ ಯಕ್ಷ ಬಳಗ ಕಟೀಲು, ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ, ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಕನ್ಯಾನ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಘಗಳು ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳ ಸೇರ್ಪಡೆಯೊಂದಿಗೆ ಏಳು ದಿನದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಕೈಜೋಡಿಸಿವೆ’ ಎಂದವರು ತಿಳಿಸಿದರು.ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್. ಶೆಟ್ಟಿ; ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಮತ್ತು ದೇವಸ್ಥಾನದ ನಿಕಟ ಪೂರ್ವ ಟ್ರಸ್ಟಿ ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಸುಧಾಕರ ರಾವ್ ಪೇಜಾವರ ವಂದಿಸಿದರು.

Scroll to Top