ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ‘ವೈಸಿಎಸ್ ಯುವ ದಬಾಜೊ’: ಕುಲಶೇಖರ ಘಟಕ ಪ್ರಥಮ, ಆಂಜೆಲೊರ್ ಘಟಕ ದ್ವಿತೀಯ

99.3K Views 2 Nov 2024

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ಯಂಗ್ ಕ್ಯಾಥೋಲಿಕ್‌ ಸ್ಟೂಡೆಂಟ್ಸ್ ಸಂಚಾಲನದ ವಿದ್ಯಾರ್ಥಿಗಳಿಗೆ ವೈಸಿಎಸ್ ಯುವ ದಬಾಜೊ 2024 ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗ್ಗೆ 9 ಗಂಟೆಗೆ ಸಿಟಿ ವಲಯದ ಪ್ರಧಾನ ಗುರುಗಳಾದ ವಂದನೀಯ ಜೇಮ್ಸ್ ಡಿಸೋಜ ಅವರು ನೆರವೇರಿಸಿದರು. ವೇದಿಕೆಯಲ್ಲಿ ಧರ್ಮ ಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫೆಡ್ರಿಕ್ ಲೋಬೊ, ವಸತಿ ಯಾಜಕರಾದ ವಂದನೀಯ ಸ್ಟ್ತಾನಿ ಫೆರ್ನಾಂಡಿಸ್, ಸೇವಾದರ್ಶಿ ಬ್ರ. ಜೀವನ್ ಲೋಬೊ, ವೈಸಿಎಸ್ ವಲಯ ನಿರ್ದೇಶಕರಾದ ವಂದನೀಯ ವಿಜಯ ಮೊಂತೆರೊ, ಧರ್ಮಕ್ಷೇತ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ, ವಲಯ ಸಚೇತಕಿ ರೆನಿಟಾ ಮಿನೇಜಸ್, ಘಟಕ ಸಚೇತಕ ರೋಶನ್ ಪತ್ರಾವೊ, ಧರ್ಮಪ್ರಾಂತ್ಯದ ವೈಸಿಎಸ್ ಅಧ್ಯಕ್ಷ ಡಿಯೋನ್ ಸಲ್ದಾನಾ, ವಲಯ ವೈಸಿಎಸ್ ಅಧ್ಯಕ್ಷ ಡ್ಯಾರೆಲ್ ಮೊಂತೇರೊ, ಘಟಕಾಧ್ಯಕ್ಷ ಲಿಯೋನ್ ಡಿಸೋಜ ಅವರು ಉಪಸ್ಥಿತರಿದ್ದರು.
ವೈಯಕ್ತಿಕ ಗಾಯನ, ಪಂಗಡ ಗಾಯನ ಹಾಗೂ ವೆರೈಟಿ ವಿಭಾಗಗಳಲ್ಲಿ 9 ಘಟಕಗಳ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈಸಿಎಸ್ ಕುಲಶೇಖರ ಘಟಕ ಪ್ರಥಮ ಸಮಗ್ರ ಪ್ರಶಸ್ತಿ, ಆಂಜೆಲೊರ್ ವೈಸಿಎಸ್ ಘಟಕ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top