Author name: editor

ಪ್ರಾದೇಶಿಕ ವಾರ್ತೆಗಳು

ಸೂರಿಂಜೆಯಲ್ಲಿ ದೀಪಾವಳಿಯ ಮೆರುಗು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆ

ಸುರತ್ಕಲ್: ಸೂರಿಂಜೆಯಲ್ಲಿನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಆಯೋಜನೆಯಲ್ಲಿ ದೀಪಾವಳಿ ಹಬ್ಬದ ಮೆರುಗನ್ನು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸೂರಿಂಜೆ, ಕಾಟಿಪಳ್ಳ, ಕೃಷ್ಣಾಪುರ, ಕಿನ್ನಿಗೋಳಿ, ಪಕ್ಷಿಕೆರೆ, ಚೇಳಾಯರು, ಶಿಬರೂರು, ಕೈಕಂಬ, ಕುತ್ತೆತ್ತೂರು ಪರಿಸರ ದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.ದಿನಾಂಕ 3.11.24 ರ ಸಾಯಂಕಾಲ 4 ಗಂಟೆಯಿಂದ 7 ಗಂಟೆವರೆಗೂ ತಾವು ತಯಾರಿಸಿದ ಗೂಡುದೀಪವನ್ನು ತಂದು ಮಂದಿರದ ಆಯೋಜಕರು ನಿಗದಿಪಡಿಸಿದ ಸ್ಥಳದಲ್ಲಿ ಅಳವಡಿಸುವುದು. ಗೂಡು ದೀಪವನ್ನು ತಮ್ಮ ತಮ್ಮ ಜಾಗದಲ್ಲಿ ತಯಾರಿಸಿ ತರಬಹುದಾಗಿದೆ.ಪರಿಸರಸ್ನೇಹಿ ಮತ್ತು ಸಾಂಪ್ರದಾಯಿಕ ಗೂಡುದೀಪಕ್ಕೆ ಆದ್ಯತೆ.ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಮತ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು.ಪ್ರೇಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಇತರೇ ವಿಜೇತರೆಂದು ಘೋಷಿಸಿ ಬಹುಮಾನ ವಿತರಿಸಲಾಗುವುದು.ಗೂಡುದೀಪ ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಊರು ದಿನಾಂಕ 30.10.2024 ರ ಒಳಗಾಗಿ ವಾಟ್ಸ್ ಅಪ್ ಮುಖಾಂತರ ಕಳುಹಿಸಬೇಕೆಂದು ವಿನಂತಿ.ಮೊಬೈಲ್ ಸಂಖ್ಯೆ : 8197574625.ಮೊದಲನೇ ಬಹುಮಾನ : ರೂ. 5000ಎರಡನೇ ಬಹುಮಾನ ರೂ. 3000ತೃತೀಯ ಬಹುಮಾನ ರೂ. 200010 ಸಮಾಧಾನಕರ ಬಹುಮಾನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕುತ್ಲುರು ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಊಟದ ಸ್ಟೀಲ್ ತಟ್ಟೆ ಹಾಗೂ ಕಪಾಟು ವಿತರಣೆ

ಮಂಗಳೂರು, ಅಕ್ಟೋಬರ್ 29,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿರುವ ಕುತ್ಲುರು ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಿಸಲಾಯಿತು.ಸಮೃದ್ದಿ ಎಂಟರ್ಪ್ರೈಸಸ್ ಮಾಲೀಕರಾದ ಕಾಲೀ0 ಅವರು ಶಾಲೆಗೆ ಕಪಾಟು ಹಸ್ತಾಂತರಿಸಿದರು.ಶಾಲಾ ವಿದ್ಯಾರ್ಥಿಗಳು ಹಣತೆಯೊಂದಿಗೆ ದೀಪಾವಳಿ ಆಚರಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕುತ್ಲುರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಈ ಗ್ರಾಮ ಹಾಗೂ ಶಾಲೆ ಬಹಳ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಮಾತನಾಡಿ ಗ್ರಾಮೀಣ ಪ್ರದೇಶದ ಈ ಶಾಲೆ ಎಲ್ಲಾ ಶಾಲೆಗಳಿಗೆ ಮಾದರಿ ಯಾಗಿದೆ. ಈ ಶಾಲಾ ಅಭಿವೃದ್ಧಿ ಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮ ದಲ್ಲಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ದೀಪಕ್. ಜಿ, ಪದಾಧಿಕಾರಿಗಳಾದ ಶ್ರೀನಿವಾಸ್ ಕುಲಾಲ್, ಲಕ್ಷ್ಮಣ ಕೋಟ್ಯಾನ್,ವಿನೀತ್ ಬಂಗೇರ, ಸುಜಾತಾ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಜ್ಯೋತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನಿಮಿತ್ ಜೈನ್,, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾ, ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.ಶ್ರಮತಿ ರೂಪ ಕುಮಾರಿ ವಂದಿಸಿದರು. ರಾಜಾಕಾಳಪ್ಪ ನವರು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಹೀಗೂಂಟೆ!

ಬೆಂಗಳೂರು :ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದಕ್ಕಾಗಿ ಕೋಟಿ ರೂಪಾಯಿ ಕೊಡಲು ಸಿದ್ದರಿರುವ ಹಲವು ಮಂದಿ ಇದ್ದಾರೆ. ಹೀಗಿರುವಾಗ ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗೆ, ಜನ ಸಾಮಾನ್ಯರಿಗೆ ಸಿಗಲು ಸಾಧ್ಯವೇ ಎನ್ನುವ ಆಕ್ರೋಶವನ್ನು ಬಂಟ ಉದ್ಯಮಿಯೊಬ್ಬರು ಹೊರ ಹಾಕಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ. ತಾಳಮದ್ದಳೆ ವಿಚಾರ ಪ್ರಚೋದಕ ಕಲಾ ಪ್ರಕಾರ: ಡಾ.ಎ.ಜೆ.ಶೆಟ್ಟಿ

ಮಂಗಳೂರು: ‘ಮನೋರಂಜನೆಯೊಂದಿಗೆ ವಿವಿಧ ಭಾರತೀಯ ಜ್ಞಾನಶಾಖೆಗಳನ್ನು ಪರಿಚಯಿಸುವ ಯಕ್ಷಗಾನ ತಾಳಮದ್ದಳೆ ಬಹಳ ವಿಚಾರ ಪ್ರಚೋದಕವಾದ ಕಲಾ ಪ್ರಕಾರ. ಪ್ರತಿ ವರ್ಷ ಸಪ್ತಾಹದ ರೂಪದಲ್ಲಿ ಇದನ್ನು ನವೆಂಬರ ತಿಂಗಳ ನುಡಿ ಹಬ್ಬವಾಗಿ ಆಚರಿಸುತ್ತಿರುವ ಯಕ್ಷಾಂಗಣದ ಕಾರ್ಯವನ್ನು ಕಲಾಭಿಮಾನಿಗಳು ಬೆಂಬಲಿಸಬೇಕು’ ಎಂದು ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹೇಳಿದ್ದಾರೆ.ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಹನ್ನೆರಡನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹೇಶ್ ಮೋಟರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಮತ್ತು ಉದ್ಯಮಿ, ಲೋಟಸ್ ಬಿಲ್ಡರ್ಸ್ ನ ಜಿತೇಂದ್ರ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.ಸಂಘಟನಾ ಪರ್ವ:ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಕದ್ರಿ ದೇವಾಲಯದ ರಾಜಾಂಗಣದಲ್ಲಿ 2024 ನವೆಂಬರ 11ರಿಂದ 17ರವರೆಗೆ ಜಿಲ್ಲೆಯ ವಿವಿಧ ಕಲಾಸಂಘಗಳ ಸಹಕಾರದಿಂದ ನಡೆಯುವ ಈ ಬಾರಿಯ ಸಪ್ತಾಹವನ್ನು ಸಂಘಟನಾ ಪರ್ವ ಎಂದು ಕರೆಯಲಾಗಿದೆ’ ಎಂದರು. ‘ಹವ್ಯಾಸಿ ಬಳಗ ಕದ್ರಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ, ಶ್ರೀ ವಾಣೀವಿಲಾಸ ಯಕ್ಷ ಬಳಗ ಕಟೀಲು, ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ, ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಕನ್ಯಾನ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಘಗಳು ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳ ಸೇರ್ಪಡೆಯೊಂದಿಗೆ ಏಳು ದಿನದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಕೈಜೋಡಿಸಿವೆ’ ಎಂದವರು ತಿಳಿಸಿದರು.ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್. ಶೆಟ್ಟಿ; ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಮತ್ತು ದೇವಸ್ಥಾನದ ನಿಕಟ ಪೂರ್ವ ಟ್ರಸ್ಟಿ ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಸುಧಾಕರ ರಾವ್ ಪೇಜಾವರ ವಂದಿಸಿದರು.

ಅಂತಾರಾಷ್ಟ್ರೀಯ ವಾರ್ತೆಗಳು

ಮಸ್ಕತ್ ನಲ್ಲಿ ತುಳುನಾಡನ್ನು ಮರು ಸೃಷ್ಟಿಸಿದ ಬಾಸ್

ಮಸ್ಕತ್: ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರಿಡೋತ್ಸವವು ಕಳೆದ ಶುಕ್ರವಾರ ಮಸ್ಕತ್ ನ “ಬರ್ಕ ಗುತ್ತಿ ” ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ,ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿ ಸಲಾಗಿತ್ತು.ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆಯಲ್ಲಿ “ಬರ್ಕ ಗುತ್ತು ಮನೆ ” , ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಭಾವಿ, ಸಿರಿ ತುಪ್ಪೆ -ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ “ಬಾರ ಕಲ” ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿ ಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದ ದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನ ದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆ ಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳು…. ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು. ಕೊಡೆತ್ತೂರಿನಿಂದ ತರಿಸಿದ್ದ ಭತ್ತ ದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತೊಳಸಿ ಕಟ್ಟೆ ಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ,ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.ಬೆಳಗ್ಗಿನ ಉಪಹಾರ ಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ… ಮತ್ತು ಗೂಡoಗಡಿಗಳಲ್ಲಿ ನಿರಂತರ ವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ,ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು.ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆ ಯ ವ್ಯವಸ್ಥೆ ಇತ್ತು.ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ತುದಿ ಬಾಳೆಎಲೆ ಯಲ್ಲಿ ಬಡಿಸಲಾಯಿತು.ಮಸ್ಕತ್ ನ ಬರ್ಕಗುತ್ತು ಕಂಬಳ:ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ,ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವ ಗಳನ್ನು ಪ್ರದರ್ಶನ ಮಾಡುವಾಗ ಸಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.

ಕ್ರೀಡಾಂಗಣ

ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನ್ಮೆಂಟ್ ನಲ್ಲಿ ಚಿನ್ನದ ಪದಕ ಪಡೆದ ಮಂಗಳೂರು ತಂಡ

ಧಾರವಾಡ :ಅಕ್ಟೋಬರ್ 26 ಮತ್ತು 27 ರಂದು ನವದೆಹಲಿಯ ಸ್ಟೇರ್ ಪೌಂಡೇಶನ್ ಇವರ ಆಶ್ರಯದಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಮಂಗಳೂರು ಗೋಲ್ ಇಂಡಿಯಾ ಎಕಾಡೆಮಿ ಹಾಗೂ ಗೊನ್ಜಾಗಾ ಪುಟ್ ಬಾಲ್ ಕ್ಲಬ್ ಮಂಗಳೂರು ಇವರ ನೇತೃತ್ವದಲ್ಲಿ ಕಳುಹಿಸಲಾದ 14 ವರ್ಷದ ಕೆಳಗಿನ ಹಾಗೂ 17 ವರ್ಷದ ಕೆಳಗಿನ ಮಕ್ಕಳ ತಂಡಗಳು ಕ್ರಮವಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಪಡೆದುಕೊಂಡರು. ಈ ತಂಡಗಳಿಗೆ ಹೆಡ್ ಕೋಚ್ ಎಲಿಸ್ಟಾರ್ ನಿಕೋಲಸ್ ರೊಡ್ರಿಗಸ್ ಹಾಗೂ 14 ವರ್ಷದ ಕೆಳಗಿನ ಕೋಚ್ ಆಗಿ ಗ್ಯಾರಿ ಜೋನ್ಸನ್, 17 ವರ್ಷದ ಕೆಳಗಿನ ಕೋಚ್ ಆಗಿ ಹಿತೇಶ್ ಕ್ಲಿಟಸ್ ಪಿರೇರಾ ಅವರು ಕಾರ್ಯ ನಿರ್ವಹಿಸಿದರು. 17 ವರ್ಷದ ಕೆಳಗಿನ ತಂಡದಲ್ಲಿ ಅಲಿಸ್ಟರ್ ಲೋಬೊ, ಮೊಹಮ್ಮದ್ ಹುಸೇನ್ ಶಾನಿದ್, ಮೊಹಮ್ಮದ್ ಶಫೀಕ್, ಡೆನ್ಜಿಲ್ ವ್ಯಾಲೆಂಟಿನ್ ರೊಡ್ರಿಗಸ್, ಸೆಮಿಂತಾಂಗ್ ಹಾಕಿಪ್, ನ್ಗಮಿನ್ಸಾಟ್ ಹಾಕಿಪ್, ಸ್ಟಾನಿಶ್ ಲ್ಹುನ್ಮಿಂಗೌ ಖೋಂಗ್‌ಸಾÊ, ಜಂಗೌಲಾಲ್ ಹಾಕಿಪ್, ಪಾಮಿಂತಾAಗ್ ಖೋಂಗ್‌ಸಾÊ, ಟಿ.ರಾಬರ್ಟ್ ಲೆಟ್ಖೋಜಾಂಗ್ ಹಾಕಿಪ್, ಸುಂತಿಯನ್ಲಾಲ್, ತಂಗೌಸಿಯA, ನ್ಗಮ್ಖೋಹಾವೋ ಗೈಟ್, ಪ್ರಥಮ ಆಚಾರ್ಯ, ಐಮನ್ ಅಬ್ದುಲ್ಲಾ, ಲಿರೋನ್ ನೀಲ್ಶೆನ್ ಮೆಂಡೋನ್ಸಾ, ಶಿಖಿನ್ ಎಲ್.ಸುವರ್ಣ ಕಾರ್ತಿಕ್ ವಿ ಶೆಟ್ಟಿ, ರೈಜ್ ಶೇಖ್, ಪ್ರಣಾಮ್ ಎಂ ಅತ್ತಾವರ14ವರ್ಷದ ಕೆಳಗಿನ ತಂಡದಲ್ಲಿ ವಾಸುದೇವ್ ಪಿ ಕುರುಪ್, ಶಾನ್ ಜೂಡ್ ಡಿಸೋಜಾ, ಅಮನ್ ತಾನಿಸ್, ಸತೀಶ್ ಕೋಟಿ, ವೇದಾಂಶ್ ಆರ್ ಕುಮಾರ್, ಆರನ್ ಪೌಲ್ ಮೆನೆಜಸ್, ಶಾಜಿಲ್ ಅಬ್ಬಾಸ್, ಆ್ಯಲ್‌ಸ್ಟನ್ ಸೊಲೊಮನ್ ಫೆರ್ನಾಂಡಿಸ್ , ಹರ್ಶುಲ್ ಆರ್ ಕುಂದರ್, ಐಸನ್ ಪ್ರಿನ್ಸ್ ಮಥಾಯಾಸ್, ಮೊಹಮ್ಮದ್ ಅನ್ಸಾಫ್, ಅನ್ಶಿದ್ ಅಬ್ದುಲ್ ಖಾದರ್ಮೊಹಮ್ಮದ್ ಹುಝೈಫ್ ರಜಾ, ಮೊಹಮ್ಮದ್ ಹಾಜಿಕ್, ಆಯುಷ್ ಕೆ ಶೆಟ್ಟಿ, ಶಾನ್ ಆಡ್ರಿಯನ್ ಮೊರಾಸ್, ಅಭಿರಾಮ್ ಸುಕುಮಾರನ್ ಮೊದಲಾದವರು ಭಾಗವಹಿಸಿದ್ದರು.

ಕ್ರೀಡಾಂಗಣ

ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಐಶಾನಿ ಸಂತೋಷ್ ಗೆ ರಜತ ಪದಕ

ಇತ್ತೀಚೆಗೆ ದಿನಾಂಕ 23.10.2024 ರಿಂದ 26.10.2024 ರ ವರೆಗೆ ಬೆಳಗಾಂ ನ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಿಬಿಎಸ್ಇ 1000ಮಿ. ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿ.ಸಿ.ರೋಡ್ ನ ಡಾ.ಸಂತೋಷ್ ಬಾಬು ಮತ್ತು ಡಾ.ಸೌಮ್ಯ ಎಸ್ .ಜಿ. ರವರ ಪುತ್ರಿ ಕು.ಐಶಾನಿ ಸಂತೋಷ್ ರಜತ ಪದಕ ವಿಜೇತರಾಗಿದ್ದಾರೆ.ಇವರು ನೀರ್ ಮಾರ್ಗ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈಕೆ ಬಿ.ಸಿ.ರೋಡ್ ಗುರುಕೃಪಾ ಪೆಟ್ರೋಲ್ ಪಂಪ್ ಮಾಲಕರಾದ ಸಂಜೀವ ಪೂಜಾರಿ ಮತ್ತು ಮಾಲತಿ ಸಂಜೀವ ಪೂಜಾರಿಯವರ ಮೊಮ್ಮಗಳು.

ಪ್ರಾದೇಶಿಕ ವಾರ್ತೆಗಳು

ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಮಾಧ್ಯಮ ರಂಗದ ನಿರಂತರ ಪ್ರಯತ್ನ ಇತರರಿಗೆ ಮಾದರಿ -ಮುಲ್ಲೈ ಮುಗಿಲನ್

ಮಂಗಳೂರು,ಅ. 28;ಗ್ರಾಮೀಣ ಭಾಗದ ಜನರ ಸಮಸ್ಯೆ ಗಳ ಬಗ್ಗೆ ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟ ಮಾಧ್ಯಮ ರಂಗದ ಪ್ರತಿನಿಧಿಗಳು ಗಮನ ಹರಿಸಿ,ನಿವಾರಣೆಗೆ ನಿರಂತರವಾಗಿ ಪ್ರಯತ್ನಿ ಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಇಂದು ನಗರದ ಪತ್ರಿಕಾ ಭವನದಲ್ಲಿದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಎಂಸಿಎಫ್ ಸಂಸ್ಥೆಯ ಸಿಎಸ್ ಆರ್ ನಿಧಿಯ ಮೂಲಕ ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಸಮವಸ್ತ್ರ ವಿತರಿಸಿ ಮಾತನಾಡುತ್ತಿದ್ದರು. ಮಾಧ್ಯಗಳು ಜನರ ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲುವುದರ ಜೊತೆ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತದ ಜೊತೆ ಅಲ್ಲಿನ ಸ್ಥತ ಜನರ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ .ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಗ್ರಾಮೀಣ ಭಾಗದಲ್ಲಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಮೂಲಕ ಅವರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ರುವುದು ಮತ್ತು ಆ ಸಮಸ್ಯೆ ಪರಿಹರಿಸಲು ಗ್ರಾಮದ ಜನರು ಜೊತೆ ಸೇರಿ ಮಾಡುತ್ತಿರುವ ಕೆಲಸ ತಾನು ಇತರ ಕಡೆ ನೋಡಿಲ್ಲ‌ ಇದು ಜಿಲ್ಲೆಯ ಅಭಿವೃದ್ಧಿ ಗೆ ಪೂರಕ ಎಂದರು.ಇದೇ ಸಂದರ್ಭದಲ್ಲಿ ಕುತ್ಲೂರು ಗ್ರಾಮದ ಸಾಹಸ ಪ್ರವಾ ಸೋದ್ಯಮ ಸಾಕ್ಷ್ಯ ಚಿತ್ರದ ಮೂಲಕ ಪ್ರಶಸ್ತಿ ಪಡೆದ ಕುತ್ಲೂರು ಗ್ರಾಮದ ಪ್ರತಿನಿಧಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸನ್ಮಾನಿಸಿದರು.ಸಮಾರಂಭದ ವೇದಿಕೆಯಲ್ಲಿ ಎಂಸಿಎಫ್ ನ ಚೀಫ್ ಪ್ರೊಡಕ್ಷನ್ ಆಫೀಸರ್ ಗಿರೀಶ್ ಎಂಸಿಎಫ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ,ಕುತ್ಲೂರು ಗ್ರಾಮಾಂತರ ಪ್ರದೇಶ ಸೇರಿದಂತೆ ಸಂಸ್ಥೆಯ ಸಿಎಸ್ ಆರ್ ನಿಧಿಯ ವತಿಯಿಂದ ಸುಮಾರು 350 ಮಕ್ಕಳಿಗೆ ಈ ಬಾರಿ ಸಮವಸ್ತ್ರ ನೀಡಲು ಸಂತೋಷ ಪಡುವುದಾಗಿ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಎಂಸಿಫ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಅವಿನಂದನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶ್ರವಣ್ ಕುಮಾರ್,ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿ, ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಗ್ರಾಮೋತ್ಸವ ಕೆರೆಕಾಡು ಗೂಡು ದೀಪ ಸ್ಪರ್ಧೆ 2024

ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ದಿನಾಂಕ 27.10.2024 ಭಾನುವಾರ ಸಂಜೆ 4 ಗಂಟೆಗೆ ನಡೆಯಿತು.ದೀಪ ಹಚ್ಚಿ ,ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಗೂಡು ದೀಪವನ್ನು ಏರಿಸುವ ಮೂಲಕ ಸುರೇಶ್ ರಾವ್ ಶ್ರೀನಿಧಿ ಪುನರೂರು ಇವರು ನೆರವೇರಿಸಿದರು, ದೀಪಾವಳಿ ಹಬ್ಬದ ಪರಿಕಲ್ಪನೆ ಇದರ ಬಗ್ಗೆ ವಿಸ್ತೃತವಾಗಿ ನಮಗೆ ತಿಳಿಸಿದವರು ಜಿತೇಂದ್ರ ಮಂಗಳೂರು ವಿಭಾಗ ಗ್ರಾಮ ವಿಕಾಸದ ಸಂಯೋಜಕರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವವರು ಸುಧಾಕರ್ ರಾವ್ ಎಸ್ಕೋ ಡಿ.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇಮ ಶಂಕರ್ ಗೋಳಿಜಾರ ರಾಘವೇಂದ್ರರಾವ್ ಅನಂತಪದ್ಮನಾಭ ಉಪಸ್ಥಿತಿ ಇದ್ದರು,ತೀರ್ಪುಗಾರರಾಗಿ ಶಂಕರ್ ಮಾಸ್ಟರ್ ಗೋಳಿಜಾರ, ಶಶಿ ಆಚಾರ್ಯ ಅಂಗರಗುಡ್ಡೆ ಇವರು ಸಹಕರಿಸಿದರು. ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು .ಮಾಧವ ಕೆರೆಕಾಡು ಪ್ರಾಸ್ತಾವನೆಐಶ್ವರ್ಯ ಪವನ್ ಸ್ವಾಗತಿಸಿದರುಗಾಯತ್ರಿ ರಾಜೇಶ್ ವಂದಿಸಿದರುಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರುಪ್ರಾರ್ಥನೆ ಬಾಲಗೋಕುಲದ ಮಕ್ಕಳಿಂದ.ವ್ಯಕ್ತಿಯ ಗೀತೆ:- ಸುರೇಂದ್ರ ಕೆರೆಕಾಡು .ಯತೀಶ್ ವಿಜೇತರನ್ನು ಘೋಷಿಸಿದರು.ಸಾಂಪ್ರದಾಯಿಕ ವಿಭಾಗ ಪ್ರಥಮ :- ಸಂಜೀವ ಪೂಜಾರಿದ್ವಿತೀಯ :-ಹರಿಶ್ಚಂದ್ರ ಕೌಶಿಕ್ ಶೆಟ್ಟಿಗಾರ್ತೃತೀಯ :- ಸೌರಭ. N. ಭಟ್ಆಧುನಿಕ ವಿಭಾಗಪ್ರಥಮ:- ಚಿನ್ಮಯ್ ಶೆಟ್ಟಿಗಾರ್ದ್ವಿತೀಯ :-, ವಿಶ್ವಾಸ್, y, ಆಚಾರ್ಯತೃತೀಯ: ನಮನ್ ಕೆರೆಕಾಡುವಿಜೇತರಿಗೆ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹ ನಗದು ನೀಡಿ ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ನೂತನ ಮಹಿಳಾ ಘಟಕ ಉದ್ಘಾಟನೆ

ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ನೂತನ ಮಹಿಳಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ನೂತನ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಸೂಕ್ತ ಕಾರ್ಯ ಯೋಜನೆ ರೂಪಿಸಿ, ಮಹಿಳೆಯರಿಗೆ ಉಪಯುಕ್ತವಾದ ಪುಟ್ಟ ಪುಟ್ಟ ಕಾರ್ಯಕ್ರಮಗಳ ಮೂಲಕ ಮಹಿಳಾ ಘಟಕ ಮುನ್ನಡೆಯಲಿ ಎಂದರು. ನೂತನ ಮಹಿಳಾ ಘಟಕಕ್ಕೆ ಮಾತೃ ಸಂಘದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಘಟಕದ ಗೌರವ ಸಲಹೆಗಾರರಾದ ಡಾ. ಆಶಾ ಜ್ಯೋತಿ ರೈ ಅವರು ಮಾತನಾಡಿ, ಪರಸ್ಪರ ಸಹಕಾರದಿಂದ ಯಶಸ್ಸು ಸಾಧ್ಯ. ನೂತನ ಮಹಿಳಾ ಘಟಕಕ್ಕೆ ಶುಭವಾಗಲಿ ಎಂದು ಹಾರೈಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸಬಿತಾ ಆರ್.ಶೆಟ್ಟಿ ಅವರು ನೂತನ ಮಹಿಳಾ ಘಟಕಕ್ಕೆ ಸರ್ವ ಮಹಿಳೆಯರ ಸಹಕಾರ ದೊರೆಯಲಿ ಎಂದರು.ವೀಣಾ ಟಿ. ಶೆಟ್ಟಿ ಅವರು ಬಂಟರ ಉಡುಗೆ-ತೊಡುಗೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಸ್ತೂರಿ ಶೆಟ್ಟಿ ಅವರು ಪ್ರೇಕ್ಷಕ ಮಹಿಳೆಯರಿಗೆ ಆಯೋಜಿಸಿದ ಅತ್ಯುತ್ತಮ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ನಿರ್ವಹಿಸಿದರು.ಮಾತೃ ಸಂಘದ ಖಜಾಂಚಿ ಸಿಎ ರಾಮ ಮೋಹನ್ ರೈ, ತಾಲೂಕು ಸಮಿತಿಯ ಉಪ ಸಂಚಾಲಕ ರತ್ನಾಕರ ಶೆಟ್ಟಿ ಎಕ್ಕಾರು, ಮಹಿಳಾ ಘಟಕದ ಉಪಾಧ್ಯಕ್ಷೆ ಸುಲತಾ ಜೆ.ಶೆಟ್ಟಿ, ಕಾರ್ಯದರ್ಶಿ ವೃಂದಾ ಹೆಗ್ಡೆ, ಜತೆ ಕಾರ್ಯದರ್ಶಿ ಮಾನಸ ರೈ, ಕೋಶಾಧಿಕಾರಿ ಭಾರತಿ ಶೆಟ್ಟಿ, ವಿಜಯಲಕ್ಷ್ಮಿ ರೈ ಮತ್ತಿತರರು ಉಪಸ್ಥಿತರಿದ್ದರು.ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವೃಂದಾ ಎಸ್.ಹೆಗ್ಡೆ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಕಾರ್ಯಕ್ರಮ ನಿರೂಪಿಸಿದರು.

Scroll to Top