ಕ್ರೀಡಾಂಗಣ

ಕ್ರೀಡಾಂಗಣ

State-Level Table Tennis: Sharada Vidyalaya’s Isha Anvi from Bantwal Kallige Devendrabettu Bags Second place.

BANTWAL: Isha Anvi, a Class 9 student of Sharada Vidyalaya, Mangaluru, has secured the second place in the Under-17 girls category at the State-level table tennis tournament.The tournament was organised as part of the Vidya Bharati Prantiya Krida Koota 2026-27 at Ramamurthy Nagar, Bengaluru.Isha, a resident of Kallige in Bantwal taluk, is the daughter of Shubha Banjan, former director of Kumbara Gudi Industrial Cooperative Society, and Dr. Anand Banjan, engineer and writer from Mangaluru.She had earlier secured first place at the district-level tournament in 2023-24 and had represented the district at the State-level meet held in Bidar.The management and staff of Sharada Vidyalaya have congratulated her on the achievement.

ಕ್ರೀಡಾಂಗಣ

ಭಾರತ ಕ್ರಿಕೆಟ್ ತಂಡದ ಮುಂದುವರಿದ ಬ್ಯಾಟಿಂಗ್ ವೈಫಲ್ಯದಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಲ್ಲಿ ಮತ್ತೆ ಸೋಲುಂಡ ಇಂಡಿಯಾ.

ಸ್ಪೋರ್ಟ್ಸ್ ರಿಪೋರ್ಟ್: ಡಾ. ಅಶೋಕ್ ಶೆಟ್ಟಿ. ಬಿ. ಎನ್.ಮೇಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ 4 ನೇ ಟೆಸ್ಟ್ ಪಂದ್ಯದಲ್ಲಿ 340 ರನ್ ಚೆಸ್ ಮಾಡಲಾಗದೆ ರೋಹಿತ್, ಕೊಹ್ಲಿ, ಕೆ. ಎಲ್. ರಾಹುಲ್ ಸೇರಿದಂತೆ ಭಾರತದ ಬ್ಯಾಟ್ಸಮನ್ ಗಳ ಬ್ಯಾಟಿಂಗ್ ವೈಫಲ್ಯದಿಂದ ಭಾರತ ಕ್ರಿಕೆಟ್ ತಂಡ ಸೋತು ತೀವ್ರ ಮುಖಭಂಗ ಅನುಭವಿಸಿದೆ. ಬೌಲಿಂಗ್ ನಲ್ಲಿ ಸೂಪರ್ ದೂಪರ್ ಆಗಿರುವ ಭಾರತ ಬ್ಯಾಟಿಂಗ್ ನಲ್ಲಿ ತೀರಾ ನಿರಾಸೆ ಹುಟ್ಟಿಸುತ್ತಿದೆ. ಕೊಹ್ಲಿ, ರೋಹಿತ್ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗುವುದು ಒಳಿತು ಎನ್ನುವ ಅಭಿಪ್ರಾಯಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ

ಕ್ರೀಡಾಂಗಣ

ಪ್ರತಿಷ್ಠಿತ ಗೋರಿ ಯಂಗ್ ಬಾಯ್ಸ್ ಪಾಂಡೇಶ್ವರ ತಂಡದ ನಾಯಕ ನಾಗಿ ರಿಯಾಝ್ ಗೋರಿ ಆಯ್ಕೆ

ಮಂಗಳೂರಿನ ಅಂಡರ್ ಆರ್ಮ್ ಕ್ರಿಕೆಟ್ ನ ಪ್ರತಿಷ್ಠಿತ ತಂಡವಾದ 35 ವರ್ಷ ಇತಿಹಾಸ ಇರುವಂತಹ ದಿವಂಗತ ಸುರೇಶ್ ಬಿ.ಎನ್.ರವರ ಗೋರಿ ಯಂಗ್ ಬಾಯ್ಸ್ ಪಾಂಡೇಶ್ವರ ತಂಡದ 2024-25 ರ ಸಾಲಿನ ನಾಯಕನಾಗಿ ಅಂಡರ್ ಆರ್ಮ್ ಕ್ರಿಕೆಟ್‌ ಇತಿಹಾಸದಲ್ಲಿ ಸರಣಿ ಶ್ರೇಷ್ಠ ನಾಗಿ ಎರಡು ಬಾರಿ ದ್ವಿಚಕ್ರ(ಬೈಕ್) ವಾಹನವನ್ನು ತನ್ನದಾಗಿಸಿದ ಏಕೈಕ ಆಟಗಾರ ರಿಯಾಝ್ ಗೋರಿ ಹಾಗೂ ಉಪನಾಯಕನಾಗಿ ಪಯಾಝ್ ಅಡ್ಡೂರ್ ಆಯ್ಕೆ ಯಾಗಿದ್ದಾರೆ. ನಗರದ ಹೋಟೆಲ್ ತಾಜ್ ಮಹಲ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆ ಹಾಗೂ ಸಮವಸ್ತ್ರ ಬಿಡುಗಡೆ ಸಮಾರಂಭದಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ತಂಡದ ಮಾಲಕರು, ವ್ಯವಸ್ಥಾಪಕರು, ಹಿರಿಯ ಆಟಗಾರರು ಹಾಗೂ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು.

ಕ್ರೀಡಾಂಗಣ

ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನ್ಮೆಂಟ್ ನಲ್ಲಿ ಚಿನ್ನದ ಪದಕ ಪಡೆದ ಮಂಗಳೂರು ತಂಡ

ಧಾರವಾಡ :ಅಕ್ಟೋಬರ್ 26 ಮತ್ತು 27 ರಂದು ನವದೆಹಲಿಯ ಸ್ಟೇರ್ ಪೌಂಡೇಶನ್ ಇವರ ಆಶ್ರಯದಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಮಂಗಳೂರು ಗೋಲ್ ಇಂಡಿಯಾ ಎಕಾಡೆಮಿ ಹಾಗೂ ಗೊನ್ಜಾಗಾ ಪುಟ್ ಬಾಲ್ ಕ್ಲಬ್ ಮಂಗಳೂರು ಇವರ ನೇತೃತ್ವದಲ್ಲಿ ಕಳುಹಿಸಲಾದ 14 ವರ್ಷದ ಕೆಳಗಿನ ಹಾಗೂ 17 ವರ್ಷದ ಕೆಳಗಿನ ಮಕ್ಕಳ ತಂಡಗಳು ಕ್ರಮವಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಪಡೆದುಕೊಂಡರು. ಈ ತಂಡಗಳಿಗೆ ಹೆಡ್ ಕೋಚ್ ಎಲಿಸ್ಟಾರ್ ನಿಕೋಲಸ್ ರೊಡ್ರಿಗಸ್ ಹಾಗೂ 14 ವರ್ಷದ ಕೆಳಗಿನ ಕೋಚ್ ಆಗಿ ಗ್ಯಾರಿ ಜೋನ್ಸನ್, 17 ವರ್ಷದ ಕೆಳಗಿನ ಕೋಚ್ ಆಗಿ ಹಿತೇಶ್ ಕ್ಲಿಟಸ್ ಪಿರೇರಾ ಅವರು ಕಾರ್ಯ ನಿರ್ವಹಿಸಿದರು. 17 ವರ್ಷದ ಕೆಳಗಿನ ತಂಡದಲ್ಲಿ ಅಲಿಸ್ಟರ್ ಲೋಬೊ, ಮೊಹಮ್ಮದ್ ಹುಸೇನ್ ಶಾನಿದ್, ಮೊಹಮ್ಮದ್ ಶಫೀಕ್, ಡೆನ್ಜಿಲ್ ವ್ಯಾಲೆಂಟಿನ್ ರೊಡ್ರಿಗಸ್, ಸೆಮಿಂತಾಂಗ್ ಹಾಕಿಪ್, ನ್ಗಮಿನ್ಸಾಟ್ ಹಾಕಿಪ್, ಸ್ಟಾನಿಶ್ ಲ್ಹುನ್ಮಿಂಗೌ ಖೋಂಗ್‌ಸಾÊ, ಜಂಗೌಲಾಲ್ ಹಾಕಿಪ್, ಪಾಮಿಂತಾAಗ್ ಖೋಂಗ್‌ಸಾÊ, ಟಿ.ರಾಬರ್ಟ್ ಲೆಟ್ಖೋಜಾಂಗ್ ಹಾಕಿಪ್, ಸುಂತಿಯನ್ಲಾಲ್, ತಂಗೌಸಿಯA, ನ್ಗಮ್ಖೋಹಾವೋ ಗೈಟ್, ಪ್ರಥಮ ಆಚಾರ್ಯ, ಐಮನ್ ಅಬ್ದುಲ್ಲಾ, ಲಿರೋನ್ ನೀಲ್ಶೆನ್ ಮೆಂಡೋನ್ಸಾ, ಶಿಖಿನ್ ಎಲ್.ಸುವರ್ಣ ಕಾರ್ತಿಕ್ ವಿ ಶೆಟ್ಟಿ, ರೈಜ್ ಶೇಖ್, ಪ್ರಣಾಮ್ ಎಂ ಅತ್ತಾವರ14ವರ್ಷದ ಕೆಳಗಿನ ತಂಡದಲ್ಲಿ ವಾಸುದೇವ್ ಪಿ ಕುರುಪ್, ಶಾನ್ ಜೂಡ್ ಡಿಸೋಜಾ, ಅಮನ್ ತಾನಿಸ್, ಸತೀಶ್ ಕೋಟಿ, ವೇದಾಂಶ್ ಆರ್ ಕುಮಾರ್, ಆರನ್ ಪೌಲ್ ಮೆನೆಜಸ್, ಶಾಜಿಲ್ ಅಬ್ಬಾಸ್, ಆ್ಯಲ್‌ಸ್ಟನ್ ಸೊಲೊಮನ್ ಫೆರ್ನಾಂಡಿಸ್ , ಹರ್ಶುಲ್ ಆರ್ ಕುಂದರ್, ಐಸನ್ ಪ್ರಿನ್ಸ್ ಮಥಾಯಾಸ್, ಮೊಹಮ್ಮದ್ ಅನ್ಸಾಫ್, ಅನ್ಶಿದ್ ಅಬ್ದುಲ್ ಖಾದರ್ಮೊಹಮ್ಮದ್ ಹುಝೈಫ್ ರಜಾ, ಮೊಹಮ್ಮದ್ ಹಾಜಿಕ್, ಆಯುಷ್ ಕೆ ಶೆಟ್ಟಿ, ಶಾನ್ ಆಡ್ರಿಯನ್ ಮೊರಾಸ್, ಅಭಿರಾಮ್ ಸುಕುಮಾರನ್ ಮೊದಲಾದವರು ಭಾಗವಹಿಸಿದ್ದರು.

ಕ್ರೀಡಾಂಗಣ

ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಐಶಾನಿ ಸಂತೋಷ್ ಗೆ ರಜತ ಪದಕ

ಇತ್ತೀಚೆಗೆ ದಿನಾಂಕ 23.10.2024 ರಿಂದ 26.10.2024 ರ ವರೆಗೆ ಬೆಳಗಾಂ ನ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಿಬಿಎಸ್ಇ 1000ಮಿ. ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿ.ಸಿ.ರೋಡ್ ನ ಡಾ.ಸಂತೋಷ್ ಬಾಬು ಮತ್ತು ಡಾ.ಸೌಮ್ಯ ಎಸ್ .ಜಿ. ರವರ ಪುತ್ರಿ ಕು.ಐಶಾನಿ ಸಂತೋಷ್ ರಜತ ಪದಕ ವಿಜೇತರಾಗಿದ್ದಾರೆ.ಇವರು ನೀರ್ ಮಾರ್ಗ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈಕೆ ಬಿ.ಸಿ.ರೋಡ್ ಗುರುಕೃಪಾ ಪೆಟ್ರೋಲ್ ಪಂಪ್ ಮಾಲಕರಾದ ಸಂಜೀವ ಪೂಜಾರಿ ಮತ್ತು ಮಾಲತಿ ಸಂಜೀವ ಪೂಜಾರಿಯವರ ಮೊಮ್ಮಗಳು.

ಕ್ರೀಡಾಂಗಣ

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನಲ್ಲಿ ಕಳಪೆ ಬ್ಯಾಟಿಂಗ್ ನಿಂದ ಸರಣೆ ಕಳೆದುಕೊಂಡ ಭಾರತ. ಕೊಹ್ಲಿ, ರೋಹಿತ್ ನಿವೃತ್ತಿಯಾಗಲು ಇದು ಸಕಾಲ.

ಣೆ :ನ್ಯೂಜಿಲ್ಯಾಂಡ್ ನ ಸ್ಯಾಂಟ್ನರ್ ಬೌಲಿಂಗ್ ಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದ 3 ಟೆಸ್ಟ್ ಪಂದ್ಯಗಳ ಪೈಕಿ, ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಸರಣೆ ಕಳೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ, ರೋಹಿತ್ ನಿವೃತ್ತಿಯಾಗಲು ಇದು ಸಕಾಲ ಎನ್ನುತ್ತಿದ್ದಾರೆ.

ಕ್ರೀಡಾಂಗಣ

ಸ್ಪಿನ್ ದಾಳಿಯನ್ನು ನಿಭಾಯಿಸಲಾಗದೆ ಶ್ರೀಲಂಕಾ ವಿರುದ್ದ 27 ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಸರಣೆ ಕಳೆದುಕೊಂಡ ಭಾರತ.

ಸ್ಪೋರ್ಟ್ಸ್ ರಿಪೋರ್ಟ್: ಡಾ.ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಭಾರತ ಕ್ರಿಕೆಟ್ ತಂಡ 3 ಪಂದ್ಯ ಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೈಗೆ ಸಮಾಧಾನ ಪಟ್ಟು ನಂತರದ ಎರಡು ಪಂದ್ಯಗಳನ್ನು ಸೋತಿದೆ. ಮೂರನೇ ಪಂದ್ಯದಲ್ಲಿ 110 ರನ್ ಗಳ ಭಾರೀ ಅಂತರದಲ್ಲಿ ಪರಾಜಯ ಅನುಭವಿಸಿ ತೀವ್ರ ಮುಖಭಂಗಗೊಳಗಾಗಿದೆ. ಈ ಸರಣೆಯಲ್ಲಿ ಬುಮ್ರಾರನ್ನು ಕೈ ಬಿಟ್ಟದ್ದು, ಅಗ್ರ ಸರಣೆಯ ಬ್ಯಾಟರ್ ಗಳ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಗಿದೆ. ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್, ದುಬೆ, ಪಂತ್ ಲೆಕ್ಕ ಭರ್ತಿಗಷ್ಟೇ ಆಡಿದರು. ಇವರ ಬ್ಯಾಟ್ ನಿಂದ ರನ್ ಬರಲೇ ಇಲ್ಲ. ಬಲಿಷ್ಠ ಭಾರತ ದುರ್ಬಲ ಶ್ರೀಲಂಕಾದ ವಿರುದ್ದ ಸೋತದ್ದು ನೂತನ ಕೋಚ್ ಗೌತಮ್ ಗಂಭೀರ್ ಗೆ ಸವಲಾಗಿ ಪರಿಣಮಿಸಿದೆ. ಇನ್ನು ಮುಂದಾದರೂ ಈ ಸೋಲಿನಿಂದ ಭಾರತ ಕ್ರಿಕೆಟ್ ತಂಡ ಪಾಠ ಕಲಿತು ಬಲಿಷ್ಠ ತಂಡವನ್ನು ರೂಪಿಸಲೆಂದು ಅಭಿಮಾನಿಗಳು ಆಶಯ ವ್ಯಕ್ತ ಪಡಿಸಿದ್ದಾರೆ

ಕ್ರೀಡಾಂಗಣ

ಯಶಸ್ವಿ ಜೈಸ್ಟಾಲ್ ವಿಶ್ವದಾಖಲೆಯ ಚೊಚ್ಚಲ ದ್ವಿಶತಕ

ವಿಶಾಖಪಟ್ಟಣ :ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಯುವ ಆರಂಭಿಕ ಬ್ಯಾಟ್ಸಮನ್ ಯಶಸ್ವಿ ಜೈಸ್ಟಾಲ್ ಅವರು 209 ರನ್ನುಗಳನ್ನು ಬಾರಿಸಿ ಅಂಡರ್ಸನ್ ಎಸೆತಕ್ಕೆ ಔಟಾಗಿದ್ದಾರೆ. ಇದು ಅವರ ಚೊಚ್ಚಲ ಹಾಗೂ ವಿಶ್ವ ದಾಖಲೆಯ ದ್ವಿಶತಕವಾಗಿದೆ

Scroll to Top