ಕಳೆದುಕೊಂಡ 10 ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮೆಕ್ಯಾನಿಕ್

118.8K Views 5 Oct 2024

ಮಹಿಳೆಯೊಬ್ಬರು ಕಳೆದುಕೊಂಡ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 15 ಪವನ್ ಚಿನ್ನಾಭರಣದ ಬ್ಯಾಗ್ ಸಿಕ್ಕ ಮೆಕ್ಯಾನಿಕ್ ಒಬ್ಬರು ಅದನ್ನು ಆ ಮಹಿಳೆಗೆ ಹಿಂದಿರುಗಿಸಿದಾಗ, ಆ ಪ್ರಾಮಾಣಿಕತೆ ಮೆರೆದ ವ್ಯಕ್ತಿಯನ್ನು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬಂಟ್ವಾಳದ ವಲಯದ ವತಿಯಿಂದ ಸನ್ಮಾನಿಸಲಾಯಿತು.
ಬಂಟ್ವಾಳ : ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಮಹಿಳೆಯೊಬ್ಬರು 15 ಪವನು ಚಿನ್ನಾಭರಣ ಇರುವ ಬ್ಯಾಗನ್ನು ಕಳೆದು ಕೊಂಡಿದ್ದು, ಇದು ಭಂಡಾರಿ ಬೆಟ್ಟು ನಿವಾಸಿ ಮೈಕಾನಿಕ್ ಗಣೇಶ್ ಆಚಾರ್ಯ ಇವರಿಗೆ ಸಿಕ್ಕಿದ್ದು, ಈ 10 ಲಕ್ಷಕ್ಕಿಂತಲೂ ಮಿಗಿಲಾದ ಮೌಲ್ಯದ ಬ್ಯಾಗನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದು ಇತರರಿಗೂ ಮಾದರಿಯಾಗಿರುತ್ತಾರೆ, ಇವರ ಪ್ರಾಮಾಣಿಕತೆಯನ್ನು ಮನಗಂಡು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಅಧ್ಯಕ್ಷರಾದ ಕಿಶೋರ್ ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಗಾಣದ ಪಡ್ಪು ಇಲ್ಲಿ ಗೌರವಿಸಲಾಯಿತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ವಲಯ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಕೋಶಾಧಿಕಾರಿ ವರುಣ್ ಕಲ್ಲಡ್ಕ, ಮಾಜಿ ಅಧ್ಯಕ್ಷರುಗಳಾದ ಸತೀಶ್ ಬಿ . ಸಿ .ರೋಡ್, ಸುಕುಮಾರ್ ಬಂಟ್ವಾಳ, ಹರೀಶ್ ಮಾಣಿ, ಹರೀಶ್ ಕುಂದರ್, ಸದಸ್ಯರುಗಳಾದ ಮಹೇಶ್ ಶೆಟ್ಟಿ, ರಾಜರತ್ನ, ಹರೀಶ್ ನಾಟಿ, ರವಿ ಪ್ರಕಾಶ್, ವಿಕ್ರಮ್, ಭಾಸ್ಕರ್, ವಿಕೇಶ್, ಮೋಹನದಾಸ, ಪುರೋಹಿತರಾದ ತಿಲಕ್ ಶಾಂತಿ ಭಾಗಿಯಾಗಿದ್ದರು.

Read More News

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

Scroll to Top