‘ಕಾರ್ಗಿಲ್ ದಿವಸ’ದ ಪ್ರಯುಕ್ತ ಯೋಧರಿಗೆ ಯೋಗ ನಮನ

8.2K Views 1h ago

ಮಂಗಳೂರು :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,(ರಿ ), ಕರ್ನಾಟಕ ,ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್(ರಿ )ವತಿಯಿಂದ 26ರ ಜುಲೈ 2026ನೇ ಭಾನುವಾರ  ಬೆಳಿಗ್ಗೆ 4:45 ರಿಂದ 7 ರವರೆಗೆ *ಸಿಂಧೂರ ಪಾರ್ಕ್* ಕೊಟ್ಟರ ಚೌಕಿ ಇಲ್ಲಿ ಕಾರ್ಗಿಲ್ ದಿವಸದ ಪ್ರಯುಕ್ತ ಯೋಧರಿಗೆ *ಯೋಗ ನಮನ* ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಹಳೆಯಂಗಡಿ ಶಾಖೆಯ ಯೋಗ ಬಂಧು ಗಳಿಂದ  ಭಜನೆ ನಡೆಯಿತು.
ದೇಶದ ವೈವಿಧ್ಯತೆಯ ಸಿರಿತನವನ್ನು ಹೊಂದಿರುವ ಏಕಾತ್ಮಕ ಸ್ತೋತ್ರ ವನ್ನು ಹಿರಿಯ ಶಿಕ್ಷಕರುಗಳಾದ ಭಾಸ್ಕರ್ ಮತ್ತು ಉಮೇಶ್ ವಾಚಿಸಿದರು.


ಅಮೃತ ವಚನ ಲತೀಕ ಮುಗ್ರೋಡಿ ಶಾಖೆ, ಪಂಚಾಂಗ ಕಲಾವತಿ ವೀರನಾರಾಯಣ ಶಾಖೆ ವಾಚಿಸಿದರು.
ವಿಶೇಷ ಯೋಗಸನದ  ಮೂಲಕ ಯೋಗ ನಮನ ಮಾಡುವುದನ್ನು ಸಮಿತಿ ಯ ಹಿರಿಯ ಶಿಕ್ಷಕರಾದ ಬಿರಾದಾರ್ ಅವರ ಮಾರ್ಗದರ್ಶನ ದಲ್ಲಿ ಉಪ್ಪಿನಂಗಡಿಯ ಶಿಕ್ಷಕರಾದ ಪ್ರದೀಪ್ ನಡೆಸಿದರು.


ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀದೇವಿ ಅತ್ತಾವರ ಉಮಾಮಹೇಶ್ವರ ಶಾಖೆ ಪ್ರಾರ್ಥನೆ ಮಾಡಿದರು. ಗರೋಡಿ ಶಾಖೆಯ ಜಯಶೀಲ ಅತಿಥಿಗಳನ್ನು ಸ್ವಾಗತ ಮಾಡಿದರು.
ಮಂಗಳೂರು ಸಮಿತಿಯ ಸಂಚಾಲಕರು ಆನಂದ ಕೆ ಪ್ರಾಸ್ತವಿಕ ಮಾತುಗಳನಾಡಿದರು
ಶಾಸಕ ಡಾ. ವೈ. ಭರತ್ ಶೆಟ್ಟಿ
ಇವರು ಮಾಜಿ ವೀರ ಯೋಧರನ್ನು ಸನ್ಮಾನಿಸಿದರು.ಕಾರ್ಗಿಲ್ ವೀರ ಯೋಧರಾದ ಭರತ್ ಕುಮಾರ್, ರವಿಚಂದ್ರ ಬಿ, ಪೂರ್ಣೇಶ್,ಐಸಾಕ್ ಎಮ್ ಜಾನ್,ರಾಜೇಶ್ ನಾಯಕ್ ಡೊನಾಲ್ಡ್ ಜೀವನ್, ನಾಯಕ್ ಲೀಲಾಧರ್ ಕದಂಬೊಡಿ, ನರೇಶ್ ಪೈ ಇವರನ್ನು ಗೌರವಿಸಲಾಯಿತು. ತಮ್ಮ ಭಾಷಣ ದಲ್ಲಿ ವೀರಯೋಧರ ತ್ಯಾಗ ಬಲಿದಾನ ಗಳನ್ನು ಸ್ಮರಿಸಿದ ಶಾಸಕರು ಸಮಿತಿಯ ಸೇವೆಯನ್ನು ಮುಕ್ತ ಕಂಠ ದಿಂದ ಶ್ಲಾಘಸಿದರು. ಯೋಧರ ಪರವಾಗಿ ಯೋಧ ರಾಜೇಶ್ ಮಾತನಾಡಿ,ಯುವ ಪೀಳಿಗೆಗೆ ಸ್ಫೂರ್ತಿಯ ಮಾತುಗಳನ್ನಾಡಿದರು
ಮುಖ್ಯ ಅತಿಥಿಯಾಗಿ ಕಿರಣ್ ಕುಮಾರ,ನಿಕಟ ಪೂರ್ವ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ ಇವರು ಭಾಗವಹಿಸಿದರು.ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಗಿಲ್ ವೀರ ಯೋಧ ಶ್ರೀಯುತ ನಾಯಕ್ ಲೀಲಾಧರ್ ಕದಂಬೋಡಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಯುವಕರು ಸೇನೆ ಸೇರಲು ಪ್ರೇರಣೆ ನೀಡಿದರು.
ಲೀಲಾ ವಂದಿಸಿದರು. ಲೋಕನಾಥ್ ವಂದೇಮಾತರಂ ಹಾಡಿದರು.ಜಯಂತಿ ಬಿಜೈ ಅನ್ನಪೂರ್ಣ ಮಂತ್ರ ಪಠಿಸಿ ದರು.ಶರ್ಮಿಳಾ ಅಡ್ಯಾರ್ ಶಾಖೆ ನಿರೂಪಣೆ ಮಾಡಿದರು.
ದೇಶ ಭಕ್ತಿ ಗೀತೆಯೊಂದಿಗೆ ಹುತಾತ್ಮ ವೀರ ಯೋಧರಿಗೆ ಪುಪ್ಪಾರ್ಚನೆ ಮಾಡಲಾಯಿತು
ಈ ವಿಶೇಷ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು, ಉಪ್ಪಿನಂಗಡಿ,ಅಲಂಕಾರು, ನೆಲ್ಯಾಡಿ ಮಳಲಿ , ಹಳೆಯಂಗಡಿ, ಕದ್ರಿ ಕಂಕನಾಡಿಯ ಒಟ್ಟು 400 ಕ್ಕೂ ಹೆಚ್ಚು ಯೋಗ ಬಂಧುಗಳು, ಪ್ರಮುಖರು ಭಾಗವಹಿಸಿದರು.

Read More News

Scroll to Top