ಮಂಗಳೂರು,ಜು.29;ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆಯ ಮೂಲಕ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದಂತಾಗುತ್ತದೆ ಎಂದು ಉಪ ಸಾರಿಗೆ ಆಯುಕ್ತರು,ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆಅಧಿಕಾರಿ (ಪ್ರಭಾರ) ಮುರಗೇಂದ್ರ ಬಸವರಾಜ ಶಿರೋಳಕರ ತಿಳಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ಮತ್ತು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ(ರಿ)ದ ವತಿಯಿಂದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡ ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆ ಮತ್ತು ಬಸ್ ಪಾಸ್ ವಿತರಣೆ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಾ, ಸಾರಿಗೆ ವ್ಯವಸ್ಥೆ ದೇಶದ ಜೀವನಾಡಿಗಳಿದ್ದಂತೆ
ಮಂಗಳೂರು ಶತಮಾಗಳಿಂದಲೂ ಖಾಸಗಿ ಸಾರಿಗೆ ಸೇವೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಜಿಲ್ಲೆಯಲ್ಲಿ ಸುಮಾರು ಒಟ್ಟು 900 ಅಧಿಕ ಖಾಸಗಿ ಬಸ್ಸುಗಳು ಸಾರಿಗೆ ಸೌಲಭ್ಯ ವನ್ನು ಒದಗಿಸುತ್ತಿದೆ ಎಂದರು.
ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನಜ್ಮಾ ಫಾರೂಕಿ ಮಾತನಾಡುತ್ತಾ,30 ವರ್ಷ ಗಳಿಂದಲೂ ಅಧಿಕ ವರ್ಷ ಚಾಲಕರಾಗಿ ಅಪಘಾತ ನಡೆಸದೆ ಇರುವುದು ಮಹತ್ವದ ಸಾಧನೆ.ಈ ಸಾಧನೆ ಇತರರಿಗೆ ಪ್ರೇರಣೆ ಯಾಗಬೇಕು.ಅಪಘಾತ ಸಂದರ್ಭದಲ್ಲಿ ಜನರಿಗೆ ತುರ್ತು ಸಹಾಯ ನೀಡಲು ಜಾರಿಯಾಗಿರುವ ಪ್ರಧಾನ ಮಂತ್ರಿ ರಾಹತ್ ಯೋಜನೆಯ ಬಗ್ಗೆ ಜನರಿಗೆ ಇನ್ನಷ್ಟು ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಿ ಮಾತನಾಡುತ್ತಾ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಮಾದರಿಯಾಗಿ ಸಾರಿಗೆ ಸೌಲಭ್ಯವನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಳೆದ 110 ವರ್ಷಗಳಿಂದಲೂ ನೀಡುತ್ತಾ ಬಂದಿದೆ. ಕೊರೋನಾ ಕಾಲದ ಸಂಕಷ್ಟದ ಸಂದರ್ಭದಲ್ಲೂ ಸಾಕಷ್ಟು ಕಷ್ಟ -ನಷ್ಟಗಳ ನಡುವೆ ಜನರಿಗೆ ಸೇವೆ ನೀಡುತ್ತಾ ಬಂದಿದೆ.ಇಂತಹ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ಬಸ್ಸುಗಳ ನಡುವೆ ಆರೋಗ್ಯ ಕರ ಸ್ಪರ್ಧೆ ಇದ್ದರೆ ಉತ್ತಮ.ಅನಾರೋಗ್ಯಕರ ಸ್ಪರ್ಧೆ ಬೇಡ ಎಂದರು.
ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಾದ ಎಂ.ಪಿ.ಅಶೋಕ,ಶಶಿಕುಮಾರ್,
ಅಲೆಕ್ಸ್ ಕ್ರಾಸ್ತಾ,ಪ್ರವೀಣ್ ಕುಮಾರ ಇವರನ್ನು ಸಮಾರಂಭದಲ್ಲಿ ಅತಿಥಿಗಳು ಮತ್ತು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ರಾಜ್ಯ ಸಮಿತಿ ಸದಸ್ಯರಾದ ಶ್ರೀನಿವಾಸ ನಾಯಕ್ ಇಂದಾಜೆ
ಅಪಘಾತ ರಹಿತ ಚಾಲಕರನ್ನು ಗೌರವಿಸಿ ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಲ್ಫ್ರೆಡ್ ಡಿ’ಸೋಜ,ಕಾರ್ಯದರ್ಶಿ
ಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್ ಜಾರ ಮತ್ತು ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ,ಜೀವನ್ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ (ರಿ)ದ ಉಪಾಧ್ಯಕ್ಷ ರಾಮಚಂದ್ರ ನಾಯಕ್ ,ಪ್ರಧಾನ ಕಾರ್ಯದರ್ಶಿರಾಮಚಂದ್ರ ಪಿಲಾರು
ಕೋಶಾಧಿಕಾರಿ ದಿಲ್ ರಾಜ್ ಫೆರ್ನಾಂಢೀಸ್ ಮೊದಲಾದವರು ಉಪಸ್ಥಿತರಿದ್ದರು.

























































































































































































