
ಕಿಚ್ಚ ಸುದೀಪ್‌ಗೆ ಪ್ರಶ್ನೆಗಳ ಸುರಿಮಳೆ! ವರ್ಷಕ್ಕೆ 2 ಸಿನಿಮಾ ಎಲ್ಲಿ ಅಂತ ಪ್ರಶ್ನಿಸಿದ ಫ್ಯಾನ್ಸ್
ಕಿಚ್ಚ ಸುದೀಪ್ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಅಂತ ಬ್ಯುಸಿ ನಡುವೆ ಒಂದೊಂದು ಸಿನಿಮಾ ಮಾಡಿಕೊಡ್ತಿದ್ದಾರೆ. ಇದರಿಂದ ಬೇಸರಗೊಂಡ ಅಭಿಮಾನಿಗಳು ವಿಕ್ರಾಂತ್ ರೋಣ ಆದ್ಮೇಲೆ ಸಿನಿಮಾನೇ ಮಾಡಿಲ್ಲ ಅಂತಲೂ ಪ್ರಶ್ನೆ ಮಾಡಿದ್ದರು. ಅಭಿಮಾನಿಗಳ ಈ ಒಂದು ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದರು. ಒಂದರ ಮೇಲೆ ಒಂದು ಅನ್ನುವ ಹಾಗೆ ವರ್ಷಕ್ಕೆ ಎರಡು ಇಲ್ವೇ ಮೂರು ಸಿನಿಮಾ ಮಾಡ್ತೀನಿ ಅಂತಲೇ ತಿಳಿಸಿದ್ದರು. ಹಾಗಾಗಿಯೇ ಮ್ಯಾಕ್ಸ್ ಸಿನಿಮಾ ಮೊದಲು ಅನೌನ್ಸ್ ಆಗಿತ್ತು ನೋಡಿ. ಕಿಚ್ಚ ಸುದೀಪ್ 10 ನಿಮಿಷದ ಟ್ವಿಟರ್ ಸೆಷನ್ ಮಾಡಿದ್ದಾರೆ. ಇದರಲ್ಲಿ ಅನೇಕ ಅಭಿಮಾನಿಗಳು ಹತ್ತಾರು ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆ ಸುದೀಪ್ ಸಿನಿಮಾಗೆ ಸಂಬಂಧಿಸಿದ್ದೇ ಆಗಿದೆ. ಆ ಪ್ರಶ್ನೆಯ ವಿವರ ಹೀಗಿದೆ. ಸುದೀಪ್ ಈ ಹಿಂದೆ ವರ್ಷಕ್ಕೆ ಎರಡು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಆ ಒಂದು ಹೇಳಿಕೆಯನ್ನ ಪ್ರಶ್ನೆಯಾಗಿಸಿರೋ ಅಭಿಮಾನಿ “ವರ್ಷಕ್ಕೆ ಎರಡು ಸಿನಿಮಾ” ಅಂತಲೇ ಹೇಳಿದ್ದೀರಿ. ಆದರೆ ಎಲ್ಲಿ ಎರಡು ಸಿನಿಮಾ ಅಣ್ಣ ಅಂತಲೇ ಅಭಿಮಾನಿ ಕೇಳಿದ್ದದಾರೆ. ಕಿಚ್ಚ ಸುದೀಪ್ ತಮ್ಮ ಅಭಿಮಾನಿ ಸ್ನೇಹಿತರು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅದು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಟ್ವಿಟರ್ ಸೆಷಲ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರೋ ಕಿಚ್ಚ ಸುದೀಪ್, ಇಂಗ್ಲೀಷ್‌ನಲ್ಲಿಯೇ ಹೀಗೆ ಉತ್ತರಿಸಿದ್ದಾರೆ. ಅದು ಹೀಗಿದೆ ಓದಿ. ಸತತ ಪ್ರಯತ್ನ ಮಾಡುತ್ತಿದ್ದೇನೆ. ಅಭಿಮಾನಿಗಳ ಈ ಪ್ರಶ್ನೆಯನ್ನ ನಮ್ಮ ಟೀಮ್ ಕೂಡ ನೋಡಿದೆ ಅಂತ ಭಾವಿಸುತ್ತೇನೆ. ಒಂದು ವೇಳೆ ವರ್ಷಕ್ಕೆ ಎರಡು ಸಿನಿಮಾ ಮಾಡದೇ ಹೋದ್ರೆ, ನನ್ನ ಈ ಅಭಿಮಾನಿ ಸ್ನೇಹಿತರು ಕೊಂದೇ ಬಿಡ್ತಾರೆ ಅಂತಲೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಹೀಗೆ ತಮ್ಮ ಅಭಿಮಾನಿಗಳಿಂದ ಹಲವಾರು ಪ್ರಶ್ನೆಗಳನ್ನ ಎದುರಿಸಿದ್ದಾರೆ. ಅದಕ್ಕೆ ಸೂಕ್ತ ಅನಿಸೋ ಉತ್ತರವನ್ನೂ ಕೊಟ್ಟಿದ್ದಾರೆ ಅಂತಲೂ ಹೇಳಬಹುದು.
ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೂಡುಬಿದಿರೆ: ಸ್ಥೂಲಕಾಯತೆಯು ಹೆಚ್ಚುವರಿ ದೇಹದ ಕೊಬ್ಬಿನಿಂದ ಗುರುತಿಸಲ್ಪಟ್ಟ ದೀರ್ಘಕಾಲದ ಸ್ಥಿತಿಯಾಗಿದೆ. ಇದು ಕೇವಲ ಸೌಂದರ್ಯ ಖಾಯಿಲೆಯಲ್ಲ. ಇದರಿಂದಾಗಿ ಆರೋಗ್ಯ ಸಂಬAಧಿತ ಅಪಾಯಗಳಾದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬAಧಿತ ಖಾಯಿಲೆಗಳು, ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯದ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ ತಿಳಿಸಿದರು. ನಿರಾಮಯ ಆಸ್ಪತ್ರೆಯ ತಂಡದಿAದ ಮೂಡಬಿದಿರೆಯ ಸಹಕಾರಿ ಸೇವಾ ಸಂಘ ಸಹಯೋಗದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಸ್ಥೂಲಕಾಯ ಚಿಕಿತ್ಸೆಯು ಹಿತಮಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಯನ್ನು ಒಳಗೊಂಡಿರುತ್ತದೆ. ಸ್ಥೂಲಕಾಯತೆಯ ಪ್ರಮುಖ ಕಾರಣವನ್ನು ಪರೀಕ್ಷಿಸಿ ಆಯುರ್ವೇದ ಚಿಕಿತ್ಸಾ ವಿಧಾನವಾದ ಪಂಚಕರ್ಮ ಹಾಗೂ ಇನ್ನಿತರ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.ದೇವಸ್ಥಾನದ ಪ್ರದಾನ ಅರ್ಚಕರಾದ ಪದ್ಮನಾಭ ಭಟ್, ದೇವಸ್ಥಾನದ ಟ್ರಸ್ಟಿ ಉಮೇಶ್ ಪೈ , ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ, ತಜ್ಞ ವೈದ್ಯರಾದ ಡಾ. ರಾಧಿಕ, ಡಾ.ವೀಣಾ ಇದ್ದರು.ಸ್ನಾತಕೋತ್ತರ ವೈದ್ಯರು ಹಾಗೂ ಕಿರಿಯ ವೈದ್ಯರು ಶಿಬಿರ ನಡೆಸಿಕೊಟ್ಟರು.
ಡಾ.ಸುಧಾಕರ್ ಶೆಟ್ಟಿ (ಮಕ್ಕಳ ತಜ್ಞರು, ಪುಣೆ -ಮೂಡುಬಿದಿರೆ)ಯವರ ಬಗ್ಗೆ ಸಂಕ್ಷಿಪ್ತ ಪರಿಚಯ.
ಮಂಗಳೂರು :ಡಾ. ಸುಧಾಕರ್ ಶೆಟ್ಟಿ ಪುಣೆ -ಮೂಡಬಿದ್ರಿ ಅವರು ಕಳೆದ 36 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ಪುಣೆಯಲ್ಲಿ ತನ್ನದೇ ಮಾಲೀಕತ್ವದ ಬೇಬಿ ಫ್ರೆಂಡ್ ಎoಬ ಸುಸಜ್ಜಿತವಾದ ಮಕ್ಕಳ ಕ್ಲಿನಿಕ್ ನ್ನು ಹೊಂದಿದ್ದಾರೆ. ಇದರ ಜೊತೆಗೆ, ಪುಣೆ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಫೋರ್ಸ್ ಹಾಸ್ಪಿಟಲ್, ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾ ಪೀಠ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಕ್ಕಳ ಆರೈಕೆ ಮತ್ತು ಕೋವಿಡ್ ಪಿಡುಗು ಸಂದರ್ಭದಲ್ಲಿ 1,500 ಕ್ಕೂ ಹೆಚ್ಚು ಕನ್ನಡಿಗರಿಗೆ ತನ್ನ ವೈದ್ಯಕೀಯ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವುದರೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಅವರು ಮೂಡಬಿದ್ರೆಯಲ್ಲಿ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಆರಂಭಿಸಿ ವಿಸ್ತಾರ ವೈದ್ಯಕೀಯ ಸಮಾಜ ಸೇವೆ ಮೂಲಕ ಮನೆ ಮಾತಾಗಿದ್ದಾರೆ. ಪ್ರಶಸ್ತಿಗಳು : 1.ಡಾ.ಸುಧಾಕರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ ಮೂರು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ದೊರಕಿದೆ. 2. ಪುಣೆ ಕಂಟೋನೋಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ. 3. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022. 4. ಚಾರ್ ಸಹಿಬಜಾದೆ ಅವಾರ್ಡ್
ಮಂಗಳೂರಿನ ಪ್ರಖ್ಯಾತ 30 ಮಾರ್ಕಿನ ಬೀಡಿ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈ. ಲಿ. ನ ಸ್ಥಾಪಕರಾದ ಬಿ. ಮಂಜುನಾಥ್ ಪೈ ಯವರ 111 ನೇ ಜನ್ಮ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಆಚರಣೆ
ಮಂಗಳೂರು: ಮಂಗಳೂರಿನ ಪ್ರಖ್ಯಾತ 30 ಮಾರ್ಕಿನ ಬೀಡಿ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈ ಲಿಮಿಟೆಡ್ ಇದರ ಸ್ಥಾಪಕರಾದ ಬಿ. ಮಂಜುನಾಥ ಪೈಯವರ 111 ನೇ ಜನ್ಮ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಎಸ್. ಪೈ ಯವರು ಸ್ವಾಗತಿಸಿ ಪ್ರಸ್ತಾವನೆಗೈದರು.ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಭ್ರಾಯ ಎಂ. ಪೈ ಯವರು ಮಾತನಾಡಿ ಸಂಸ್ಥೆಗೆ ಸ್ಥಾಪಕರು ನೀಡಿದ ಕೊಡುಗೆ, ಅವರ ದೂರ ದೃಷ್ಟಿ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿಯನ್ನು ವಿವರಿಸಿದರು.ಲೆಕ್ಕ ಪರಿಶೋಧಕರಾದ ಸಿಎ ಶಿವಾನಂದ ಪೈಯವರು ಸಂಸ್ಥೆಯ ಬಗ್ಗೆ ಸವಿಸ್ತಾರವಾದ ವಿವರಗಳನ್ನು ನೀಡಿದರು. ಸಂಸ್ಥಾಪಕರು ಹಾಕಿ ಕೊಟ್ಟ ಮೌಲ್ಯಗಳನ್ನು ಅನುಚಾನವಾಗಿ ಸಂಸ್ಥೆಯು ಅನುಸರಿಸುತ್ತಾ ಬಂದಿದ್ದು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಸಾಂಸ್ಥಿಕ ಸಮಾಜಿಕ ಕಳಕಳಿಗಳನ್ನು ತನ್ನ ಆರಂಭದ ದಿನಗಳಿಂದಲೂ ಅನುಸರಿಸುತ್ತಾ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ನಾಗೇಂದ್ರ ಡಿ. ಪೈ ಯವರು ಸಂಸ್ಥೆಯ ಹೊಸ ಉತ್ಪನ್ನವಾದ ಮೂವತ್ತು ಮಾರ್ಕಿನ “ಕಡಕ್ ಪ್ಯಾಲಿ” ಚಹಾ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಹೊಸ ಉತ್ಪನ್ನದ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿ ಎಚ್. ರಮೇಶ್ ಶೆಣೈಯವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಗೆ 55 ವರ್ಷಗಳ ಸೇವೆ ಸಲ್ಲಿಸಿರುವ ಸುರೇಶ್ ಶೆಣೈಯವರನ್ನು ಆಡಳಿತ ಮಂಡಳಿಯು ಅಭಿನಂದಿಸಿ ಪುರಸ್ಕರಿಸಿತು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವೆಂಕಟೇಶ್ ಎಂ. ಪೈ, ಉಪಸ್ಥಿತರಿದ್ದರು. ಸಂಸ್ಥೆಯ ಇನ್ನೊರ್ವ ಕಾರ್ಯಕಾರಿ ನಿರ್ದೇಶಕರಾದ ಆನಂದ್ ಜಿ. ಪೈ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದವಿತ್ತರು.
ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ-ಸ್ಪೀಕರ್ ಯು.ಟಿ.ಖಾದರ್
ಅಹವಾಲುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಸೂಚಿಸುತ್ತೇನೆ-ಪತ್ರಕರ್ತರ ಗ್ರಾಮ ವಾಸ್ತವ್ಯ ಸಮಾರೋಪದಲ್ಲಿ ಸ್ಪೀಕರ್ ಭರವಸೆ ಕೊಲ್ಲಮೊಗ್ರ: ತಮ್ಮ ಒತ್ತಡದ ಕೆಲಸದ ಮಧ್ಯೆಯೂ ಗ್ರಾಮ ವಾಸ್ಯವ್ಯ ಮಾಡಿ ಆ ಊರಿನ ಸಮಸ್ಯೆಗಳನ್ನು ಅರಿತು ಪರಿಹಾರಕ್ಕಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಮಾಡಿದ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ದ.ಕ.ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ಹರಿಹರ, ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲ್ಲಿ ಜನರು ಮಂಡಿಸಿದ ಎಲ್ಲಾಅಹವಾಲುಗಳನ್ನು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಪರಿಹರಿಸುತ್ತಾರೆ. ಜಿಲ್ಲೆ ಹಾಗು ರಾಜ್ಯ ಮಟ್ಟದಲ್ಲಿ ಇದರ ಪರಿಹಾರಕ್ಕೆ ಪೂರ್ಣ ಸಹಾಕರ ನೀಡುತ್ತೇನೆ. ಆದ್ಯತೆಯ ಮೇರೆಗೆ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸುತ್ತೇನೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆಅಗತ್ಯ ಇದ್ದಲ್ಲಿ ಕೇಂದ್ರಕ್ಕೂ ಪತ್ರ ಬರೆಯುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂದಿನ ತಲೆಮಾರಿನ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ನೆಟ್ ವರ್ಕ್ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕ ಅತೀ ಅಗತ್ಯ. ಈ ಭಾಗದಲ್ಲಿ ಅದರ ಯಶಸ್ವಿ ಅನುಷ್ಠಾನಕ್ಕೆ ಸಂಂಧಪಟ್ಟವರಿಗೆ ಸೂಚಿಸುತ್ತೇನೆ ಎಂದರು.ನಿಮ್ಮ ಸಮಸ್ಯೆ ಪರಿಹಾರಕ್ಕೆ ಸ್ಪೀಕರ್ ಕಚೇರಿ ಬಾಗಿಲು ಸದಾ ತೆರೆಸಿರುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಕೊಲ್ಲಮೊಗ್ರ ಹರಿಹರ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಇಲ್ಲಿನ ವಿದ್ಯಾರ್ಥಿಗಳಿಗೆ ವಿಧಾನಸಭಾ ಕಲಾಪಗಳ ವೀಕ್ಷಣೆಗೆ ಅವಕಾಶ ಮಾಡಿ ಕೊಡುತ್ತೇನೆ, ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದಲ್ಲಿ ಅವರನ್ನು ಕರೆ ತರಬೇಕು ಎಂದು ಅವರು ಹೇಳಿದರು.ಗ್ರಾಮ ವಾಸ್ತವ್ಯದ ನೆನಪಿಗಾಗಿ ಸ್ಪೀಕರ್ ಯು.ಟಿ.ಖಾದರ್ ತೆಂಗಿನ ಗಿಡವನ್ನು ನೆಟ್ಟರು.ಸಮಾರೋಪ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ‘ಗ್ರಾಮಗಳ ಅಭಿವೃದ್ಧಿ ಆದರೆ ಮಾತ್ರ ಭಾರತ ಬೆಳಗಲು ಸಾಧ್ಯ. ಪತ್ರಕರ್ತರ ಗ್ರಾಮ ವಾಸ್ತವ್ಯ ಕೊಲ್ಲಮೊಗ್ರ, ಹರಿಹರ , ಕಲ್ಮಕಾರು, ಬಾಳುಗೋಡು ಗ್ರಾಮಗಳ ಅಭಿವೃದ್ಧಿಯ ಬಾಗಿಲು ತೆರೆಯಲು ಸ್ಪೂರ್ತಿ ನೀಡಲಿ. ತನ್ನ ಕಡೆಯಿಂದಲೂ ಈ ಗ್ರಾಮಗಳ ಅಭಿವೃದ್ಧಿಗೆ ನೆರವು ನೀಡುತ್ತೇನೆ ಎಂದು ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಚ ನಿತ್ಯಾನಂದ ಮುಂಡೋಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಸಿ.ಜಯರಾಮಮುಖ್ಯ ಅತಿಥಿಗಳಾಗಿದ್ದರು.ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವತ್ ಯಾಲದಾಳ,ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವೇದಿಕೆಯಲ್ಲಿ ಉಪಸ್ಥಿದ್ದರು.ಡಾ.ಸೋಮಶೇಖರ ಕಟ್ಟೆಮನೆ ಅವಳಿ ಗ್ರಾಮಗಳ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿ, ಲೋಕೇಶ್ ಬಿ.ಎನ್.ವಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಯಶಸ್ವಿ ಜೈಸ್ಟಾಲ್ ವಿಶ್ವದಾಖಲೆಯ ಚೊಚ್ಚಲ ದ್ವಿಶತಕ
ವಿಶಾಖಪಟ್ಟಣ :ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಯುವ ಆರಂಭಿಕ ಬ್ಯಾಟ್ಸಮನ್ ಯಶಸ್ವಿ ಜೈಸ್ಟಾಲ್ ಅವರು 209 ರನ್ನುಗಳನ್ನು ಬಾರಿಸಿ ಅಂಡರ್ಸನ್ ಎಸೆತಕ್ಕೆ ಔಟಾಗಿದ್ದಾರೆ. ಇದು ಅವರ ಚೊಚ್ಚಲ ಹಾಗೂ ವಿಶ್ವ ದಾಖಲೆಯ ದ್ವಿಶತಕವಾಗಿದೆ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ?
ನಿರೀಕ್ಷಿರಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ?
ಮೂಲ್ಕಿ ಸುಂದರರಾಮ ಶೆಟ್ಟಿ ನಗರದ ರೂವಾರಿ ಹಿರಿಯ ರಾಜಕೀಯ ನೇತಾರ ಡಾ. ಅಗರಿ ನವೀನ್ ಭಂಡಾರಿ
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮನೆತನದವರು. ಕೆಪಿಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಕಾಂಗ್ರೆಸ್‌ನಲ್ಲಿ ಸುದೀರ್ಘ ಅವಧಿಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶ್ರೇಷ್ಠ ಸಂಘಟನಾ ಚತುರ, ಯಶಸ್ವಿ ನಾಯಕ, ಅದ್ವಿತೀಯ ಸಂಘಟಕ, ಸಮಾಜಸೇವಕರಾಗಿರುವ ಅವರು ತನ್ನ ಸಂಘಟನಾ ಸಾಮರ್ಥ್ಯದಿಂದಲೇ ಜನಮನ ಗೆದ್ದ ಸಮರ್ಥ ನೇತಾರರಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ತನಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಹಲವಾರು ಮಹತ್ತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 2008ರಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮತ್ತು 20013ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರಗಳಿಂದ ಇವರಿಗೆ ಅರ್ಹವಾಗಿ ಕಾಂಗ್ರೆಸ್ ಪಕ್ಷ ಎಂಎಲ್‌ಎ ಟಿಕೇಟ್ ನೀಡುವುದರಲ್ಲಿತ್ತು. ಆದರೆ, ಕೊನೆಕ್ಷಣದಲ್ಲಿ ಕಾರಣಾಂತರದಿಂದ ಟಿಕೇಟ್ ಕೈ ತಪ್ಪಿತ್ತು. ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಅಗರಿ ನವೀನ್ ಭಂಡಾರಿ, ಮತ್ತವರ ಕುಟುಂಬ ತೋರಿಸಿರುವ ಪಕ್ಷ ನಿಷ್ಠೆ ಹಾಗೂ ಡಾ.ಅಗರಿ ನವೀನ್ ಭಂಡಾರಿಯವರ ಸಾಮರ್ಥ್ಯ, ರಾಜಕೀಯ ತಂತ್ರಗಾರಿಕೆ , ಸಂಘಟನಾ ಶಕ್ತಿ ಮೊದಲಾದ ಗುಣ ವಿಶೇಷತೆಗಳನ್ನು ಗುರುತಿಸಿಕೊಂಡಿರುವ ಪಕ್ಷದ ಹೈಕಮಾಂಡ್ ಇವರಿಗೆ ಉತ್ತಮ ಹಾಗೂ ಜವಾಬ್ದಾರಿಯುತ ಸೂಕ್ತ ಹುದ್ದೆ ನೀಡಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ.ಇದು ಜನಾಶಯವೂ ಆಗಿದೆ. ಡಾ. ಅಗರಿ ನವೀನ್ ಭಂಡಾರಿಯವರ ಅಜ್ಜ ಕೂಡಾ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರು. ಬೆಳ್ಳಿಪ್ಪಾಡಿ ಯಜಮಾನ ದಿ. ಸಂಕಪ್ಪ ರೈ ಮತ್ತು ದಿ. ತಾರಿಪಡ್ಪು ಮಂಜಕ್ಕೆ ಹೆಂಗ್ಸು ದಂಪತಿಗಳ ಮೊಮ್ಮಗ, ಅಗರಿ ಲಕ್ಕಪ್ಪ ಭಂಡಾರಿ ಮತ್ತು ಲೀಲಾವತಿ ಭಂಡಾರಿ ಅವರ ಸುಪುತ್ರರಾಗಿ 1952, ಜ. 17ರಂದು ಜನಿಸಿದ ಡಾ.ಅಗರಿ ನವೀನ್ ಭಂಡಾರಿಯವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಚಿಕ್ಕ ಮುಡ್ನೂರು ಹಾಗೂ ಪುತ್ತೂರಿನಲ್ಲಿ ಮುಗಿಸಿರುವ ಇವರು ಕಾನೂನು ಪದವೀಧರರು. ಎಂ.ಎ, ಎಲ್‌ಎಲ್‌ಬಿ, ಪಿಜಿಡಿಐಆರ್‌ಪಿಎಂ ಪದವಿ ಹೊಂದಿರುವ ಇವರು ರಾಜ್ಯಶಾಸ್ತ್ರವನ್ನು ಮುಖ್ಯ ವಿಷಯವಾಗಿಸಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ.ಸ್ನಾತಕೋತ್ತರ ಪದವಿಯನ್ನು ಪಡೆದವರು. ಭಾರತೀಯ ವಿದ್ಯಾಭವನದಲ್ಲಿ ಕೈಗಾರಿಕಾ ಸಂಬಂಧಗಳು ಮತ್ತು ಸಿಬ್ಬಂದಿ ನಿರ್ವಹಣೆಯಲ್ಲಿ ಉನ್ನತ ವ್ಯಾಸಂಗವನ್ನು ಓದಿದ್ದಾರೆ. 1982ರಲ್ಲಿ ಆಪ್ಟೆಕ್ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಸಾಫ್ಟ್ವೇರ್ ಸೈಯನ್ಸ್ ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಹಿಂದಿ ಪ್ರಬೋಧ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‌ನ ಸಕ್ರಿಯ ಸದಸ್ಯರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಹಕಾರಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಲ್ ಎ. ಜಗಜೀವನ್ ಭಂಡಾರಿ, ಎ. ಮೋಹನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ದಿ. ಜೀವನ್ ಭಂಡಾರಿ (ಕಾಂಗ್ರೆಸ್ ನಾಯಕ), ಭಗವನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ಶೋಭಾ ಸಿ. ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ (ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ) ಅವರು ಡಾ. ಅಗರಿ ನವೀನ್ ಭಂಡಾರಿಯವರ ಒಡಹುಟ್ಟಿದವರು. ಕೃಷಿ ಹಿನ್ನಲೆಯ ಕುಟುಂಬದವರಾಗಿದ್ದು, ರಾಜಕೀಯವಾಗಿಯೂ ಹೆಸರು, ಜನಪ್ರಿಯತೆ, ಉನ್ನತ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಇವರದು. ಮಾನವತಾವಾದಿಯಾಗಿ, ಸೌಮ್ಯ ಸ್ವಭಾವದವರಾಗಿದ್ದು ಎಲ್ಲರೊಂದಿಗೂ ಸ್ನೇಹ ಪರತೆಯಿಂದಿದ್ದವರು. ಆದ್ದರಿಂದಲೇ ಇವರೆಂದರೆ ಎಲ್ಲರಿಗೂ ತುಂಬಾ ಪ್ರೀತಿ, ಅಚ್ಚುಮೆಚ್ಚು. ಡಾ. ಅಗರಿ ನವೀನ್ ಭಂಡಾರಿಯವರ ತಂದೆ ಅಗರಿ ಲಕ್ಕಪ್ಪ ಭಂಡಾರಿಯವರು ಸರ್ವತಂತ್ರ ಸ್ವತಂತ್ರವಾಗಿ ಹೋರಾಡಿದ ಕಾಂಗ್ರೆಸ್ ಕಾರ್ಯಕರ್ತರೆಂದರೆ ಹೆಚ್ಚು ಸಮಂಜಸ. 2002ರಲ್ಲಿ ದಿವಂಗತರಾದ ಹಿರಿಯ ಸಹೋದರ ಎ. ಜೀವನ್ ಭಂಡಾರಿಯವರು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ, ಪುತ್ತೂರಿನ ಬಂಟರ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೂ ಜನ ಶ್ಲಾಘನೆಗೆ ಪಾತ್ರರಾಗಿದ್ದರು. 1976ರಲ್ಲಿ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಡಾ. ಅಗರಿ ನವೀನ್ ಭಂಡಾರಿಯವರು 2000ದಲ್ಲಿ ಸ್ವಯಂ ನಿವೃತ್ತಿ ಪಡೆದು ಉದ್ಯಮ ಮತ್ತು ರಾಜಕೀಯವಾಗಿಯೂ ಮುಂದುವರಿದರು. ಮಾನವ ಹಕ್ಕುಗಳು ಮತ್ತು ಕಾನೂನು ಘಟಕದ ಉಪಾಧ್ಯಕ್ಷರು ಆಗಿದ್ದ ಇವರು ಡಾ. ಪರಮೇಶ್ವರ್, ದಿನೇಶ್ ಗೂಂಡೂರಾವ್ ಮತ್ತು ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಹಾಗೂ ಆ ಸಂದರ್ಭದಲ್ಲಿ ಪಕ್ಷದ ಹುಬ್ಬಳ್ಳಿ-ಧಾರವಾಡದ ಉಸ್ತುವಾರಿಯನ್ನು ವಹಿಸಿದ್ದರು. ಸಮರ್ಥ ನೇತಾರ: ಡಾ. ಅಗರಿ ನವೀನ್ ಭಂಡಾರಿಯವರು ಬೆಂಗಳೂರಿನ ಬೊಮ್ಮನಹಳ್ಳಿಯ ನಗರ ಸಭೆ ವ್ಯಾಪ್ತಿಯಲ್ಲಿ ಮೂಲ್ಕಿ ಸುಂದರಾಮ ಶೆಟ್ಟಿ ಹೆಸರಲ್ಲಿ ಸುಂದರ ಬಡಾವಣೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸೊಸೈಟಿಯ ಮೂಲಕ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲೊಂದು ಸುಂದರ ಅಯ್ಯಪ್ಪ ದೇವಸ್ಥಾನವನ್ನು ನಿರ್ಮಿಸಲು ಮುತುವರ್ಜಿ ವಹಿಸಿ ಯಶಸ್ಸು ಕಂಡಿದ್ದಾರೆ. ಈ ಬಡಾವಣೆಯಲ್ಲಿ ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅದಕ್ಕೆ ಅತ್ಯಾಧುನಿಕತೆಯ ರೂಪ ನೀಡುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ,ಡಾ. ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರಾಮ ಶೆಟ್ಟಿ ನಗರದ ರೂವಾರಿಯಾಗಿದ್ದಾರೆ. ಬೆಂಗಳೂರು ಎಂಎಸ್‌ಆರ್‌ಎಸ್ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ಎಂಎಸ್‌ಆರ್‌ಎಸ್ ನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟಿ ಮತ್ತು ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಲಿ.ನ ಮಾಜಿ ಅಧ್ಯಕ್ಷರಾಗಿ, ಎಂಎಸ್‌ಆರ್‌ಎಸ್ ನಗರ ವೆಲ್ತ್ ಅಸೋಸಿಯೇಶನ್‌ನ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಹಕಾರಿ ಸಂಘಗಳಲ್ಲಿ ಇವರು ತೋರಿದ್ದ ಉತ್ತಮ ಸೇವೆ, ಕಾರ್ಯವೈಖರಿ ಮತ್ತು ಕರ್ತವ್ಯ ನಿಷ್ಠೆಯನ್ನು ಗಮನಿಸಿ ಭಾರತ ಸರಕಾರವು ಅವರನ್ನು (2011-2016ರಲ್ಲಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಆರ್‌ಬಿಐ ನಿರ್ದೇಶಕರಾಗಿ ನೇಮಿಸಿತ್ತು. ಸಾಧನೆಗೆ ಅರ್ಹವಾಗಿ ದೊರೆತ ಪ್ರಶಸ್ತಿಗಳು :ಡಾ. ಅಗರಿ ನವೀನ್ ಭಂಡಾರಿ ಅವರ ನಿಸ್ವಾರ್ಥ ಸಮಾಜ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ದೊರಕಿವೆ. 2002ರಲ್ಲಿ ಇಂದಿರಾ ಗಾಂಧಿ ಸದ್ಬಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಶ್ರೇಷ್ಠ ಅಧ್ಯಕ್ಷ ಮತ್ತು ಶ್ರೇಷ್ಠ ನಿರ್ದೇಶಕ, 2006ರಲ್ಲಿ ಇಂಟರ್ ನ್ಯಾಷನಲ್ ಅವಾರ್ಡ್ ಫಾರ್ ಮೆರಿಟೋರಿಯಸ್ ಸರ್ವೀಸ್ ಫಾರ್ ಇಂಟರ್‌ನ್ಯಾಷನಲ್ ಕೋ-ಅಪರೇಟಿವ್ ಹೌಸಿಂಗ್, ಭಾರತೀಯ ಲಲಿತಾ ಕಲಾ ಸಂಸ್ಥೆಯಿಂದ ಕರ್ನಾಟಕ ಪದ್ಮಶ್ರೀ, 2006ರಲ್ಲಿ ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿಯಿಂದ ಎಕ್ಸೆಲೆನ್ಸಿ ಅವಾರ್ಡ್, 2009ರಲ್ಲಿ ಸಮಾಜಸೇವಾ ರತ್ನ ಅವಾರ್ಡ್, 2011ರಲ್ಲಿ ಡಾ. ಟಿಪ್ಪು ಸುಲ್ತಾನ್ ಸ್ಟೇಟ್ ಅವಾರ್ಡ್, 2002ರಲ್ಲಿ ಡಾ. ರಾಜಕುಮಾರ್ ಅವಾರ್ಡ್, 2016ರಲ್ಲಿ ಡಾ.ಡಿ.ಜಿ. ಶೆಟ್ಟಿ ಎಜ್ಯುಕೇಶನಲ್ ಸೊಸೈಟಿಯಿಂದ ಗೌರವ ಪ್ರಶಸ್ತಿ, ಸಮಾಜ ಸೇವೆಗಾಗಿ 2018 ರಲ್ಲಿ ಗೌರವ ಡಾಕ್ಟರೇಟ್, 2018ರಲ್ಲಿ ಕೆಂಪೇಗೌಡ ಪ್ರಶಸ್ತಿ ಇವರ ಸಾಧನೆಗೆ, ಶ್ಲಾಘನೀಯ ಸಮಾಜ ಸೇವೆಗಾಗಿ ಅರ್ಹವಾಗಿ ದೊರೆತ ಪ್ರಶಸ್ತಿಗಳು. ಕುಟುಂಬ ಸದಸ್ಯರ ಬಗ್ಗೆ: ನವೀನ್ ಭಂಡಾರಿಯವರ ಪತ್ನಿ ಸರೋಜ ಎನ್. ಭಂಡಾರಿ ಅವರು ಕಾರ್ಕಳದ ಇನ್ನಾದವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸ್ವಯಂ ನಿವೃತ್ತಿ ಪಡೆದ ಇವರು ಅಕ್ಟೋಬರ್ 1, 2022 ರಂದು ಸ್ವರ್ಗಸ್ಥರಾಗಿದ್ದಾರೆ. ಬಿ.ಇ. ಮತ್ತು ಎಂಬಿಎ ಮಾಡಿರುವ ಮಗಳು ಅನುಷ್ಕಾ ಭಂಡಾರಿ ನ್ಯೂರೋ ಸರ್ಜನ್‌ರಾಗಿರುವ ಅಳಿಯ ಡಾ. ವೀಕ್ಷಿತ್ ಶೆಟ್ಟಿಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನ್ಯೂರೋ ಅಂಕಾಲೋಜಿಯಲ್ಲಿ ಸೈಂಟ್ ಜಾರ್ಜ್ ಆಸ್ಪತ್ರೆ ಲಂಡನ್‌ನಿಂದ ಫೆಲೋಶಿಪ್ ಪಡೆದಿರುವ ಡಾ. ವೀಕ್ಷಿತ್ ಶೆಟ್ಟಿ ಎಡಿನ್ ಬರ್ಗ್ ನಲ್ಲಿ ಎಫ್‌ಆರ್‌ಸಿಎಸ್, ಯುನೈಟೆಡ್ ಕಿಂಗ್ ಡಮ್‌ನಲ್ಲಿ ಡಿಎನ್‌ಬಿ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ನ್ಯೂರೋ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಸ್ವಾರ್ಥ ಜನನಾಯಕ: ಡಾ.ಅಗರಿ ನವೀನ್ ಭಂಡಾರಿಯವರು ನಿಸ್ವಾರ್ಥ ಜನಸೇವಕ, ಜನನಾಯಕರಾಗಿದ್ದು, ಪೂರ್ಣಕಾಲಿಕ ರಾಜಕಾರಣಿಯಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ, ಬೆಳವಣಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಗಳು ಮತ್ತು ಶ್ಲಾಘನೀಯ ಸೇವಾರ್ಹತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಅವರಿಗೆ ಕಾಂಗ್ರೆಸ್ ಪಕ್ಷವು ಉನ್ನತ ಅಧಿಕಾರ ಪದವಿ ನೀಡಿ ವಿಸ್ತಾರ ಜನಸೇವೆಗೆ ಅವಕಾಶ ನೀಡಲಿ ಎಂದು Mp mla’sನ್ಯೂಸ್ ಶುಭ ಹಾರೈಸುತ್ತದೆ.
ಹೊಟ್ಟೆಗೆ ಜ್ವರ ಹೇಗೆ ಬರುತ್ತದೆ. ಇದಕ್ಕೆ ಚಿಕಿತ್ಸೆ ಯಾವ ರೀತಿ
ಹೊಟ್ಟೆಗೆ ಜ್ವರ ಹೇಗೆ ಬರುತ್ತದೆ. ಇದಕ್ಕೆ ಚಿಕಿತ್ಸೆ ಯಾವ ರೀತಿ ಎಂಬುವುದರ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಆಫ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಡಾ.ಅನುರಾಗ್ ಜೆ. ಶೆಟ್ಟಿಯವರ ವಿಶೇಷ ವೈದ್ಯಕೀಯ ಲೇಖನ. ಗ್ಯಾಸ್ಟ್ರೋಎಂಟರೈಟಿಸ್ ಎಂಬುದನ್ನು ಸರಳವಾಗಿ ಹೊಟ್ಟೆಯ/ಕರುಳಿನ ಜ್ವರ ಎಂಬುದಾಗಿಯೂ ಹೇಳಬಹುದು; ಇದು ಕರುಳಿನಲ್ಲಿ ಉಂಟಾಗುವ ವೈರಾಣು ಸೋಂಕಿನಿಂದ ಕಾಣಿಸಿಕೊಳ್ಳುತ್ತದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ನೀರು, ಆಹಾರದಿಂದ ಇದು ಹರಡುತ್ತದೆ. ಮಳೆಗಾಲದಲ್ಲಿ ಕೊಳಕು ನೀರು ಕುಡಿಯುವ ನೀರಿನ ಜತೆಗೆ ಸೇರಿಕೊಳ್ಳುವುದರಿಂದಾಗಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಇದರ ಉಪದ್ರವ ಹೆಚ್ಚು. ಸಾಮಾನ್ಯವಾಗಿ ಸರಿಯಾದ ಆರೈಕೆ ಒದಗಿಸಿದರೆ ಇದು ತಾನಾಗಿಯೇ ವಾಸಿಯಾಗುತ್ತದೆ. ಈ ಕಾಯಿಲೆಯ ಬಹಳ ಸಾಮಾನ್ಯವಾದ ಲಕ್ಷಣ ಎಂದರೆ ರಕ್ತಮಿಶ್ರಿತವಲ್ಲದ, ಆದರೆ ನೀರಾದ ಮಲವಿಸರ್ಜನೆಯ ಜತೆಗೆ ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇವುಗಳ ಜತೆಗೆ ಹೊಟ್ಟೆ ನೋವು ಮತ್ತು ಕರುಳು ಹಿಡಿದುಕೊಳ್ಳುವುದೂ ಇರಬಹುದು. ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಆಗೀಗೊಮ್ಮೆ ತಲೆನೋವು ಮತ್ತು ಮೈಕೈ ನೋವು ಕೂಡ ಇರಬಹುದಾಗಿದೆ. ರೋಗಿಗಳು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ; ಆದರೆ ಕೆಲವೊಮ್ಮೆ ಲಕ್ಷಣಗಳು ಒಂದು ವಾರದವರೆಗೂ ಇರಬಹುದು. ಆದರೆ ಸಣ್ಣ ಮಕ್ಕಳು ಮತ್ತು ವಯೋವೃದ್ಧರಲ್ಲಿ ಹಾಗೂ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರುವವರಲ್ಲಿ ಈ ಹೊಟ್ಟೆಯ ಜ್ವರವು ಅಪಾಯಕಾರಿಯಾಗಿದ್ದು, ರೋಗ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ತತ್‌ಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು. ಲಕ್ಷಣಗಳು ತೀವ್ರವಾಗಿದ್ದು, ಸೂಕ್ತವಾದ ಆರೈಕೆಯನ್ನು ಪಡೆಯದೆ ಇದ್ದಲ್ಲಿ ಅದರಿಂದ ಮೂತ್ರಪಿಂಡ ವೈಫಲ್ಯ, ರಕ್ತದೊತ್ತಡ ಕಡಿಮೆಯಾಗುವಂತಹ ಪ್ರಾಣಾಪಾಯಕಾರಿ ಸಮಸ್ಯೆಗಳು ತಲೆದೋರಬಹುದಾಗಿದೆ. ಮಲದಲ್ಲಿ ರಕ್ತ, ವಾಂತಿಯಾಗುವುದು, ನಿರ್ಜಲೀಕರಣದ ಲಕ್ಷಣಗಳು (ಬಾಯಾರಿಕೆ ಹೆಚ್ಚುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಗಾಢ ಬಣ್ಣದ ಮೂತ್ರ) ಇತ್ಯಾದಿ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಲಕ್ಷಣಗಳು ಒಂದೆರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದಲ್ಲಿ ತತ್‌ಕ್ಷಣ ವೈದ್ಯಕೀಯ ಆರೈಕೆಗೆ ಒಳಗಾಗಬೇಕು. ಈ ಅನಾರೋಗ್ಯದ ಸಮಯದಲ್ಲಿ ಆರೈಕೆಯ ಪ್ರಧಾನ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕುಸಿಯದಂತೆ ಕಾಪಾಡಿಕೊಳ್ಳುವುದು ಮತ್ತು ಜೀರ್ಣಗೊಳ್ಳಲು ಸುಲಭವಾದ ಲಘು -ಮೃದು ಆಹಾರ ಸೇವನೆ, ಚಹಾ, ಚಹಾದಂತಹ ಹಾಲು ಬೆರೆಸದ ಪಾನೀಯಗಳು, ಹಾಲು ಮತ್ತು ಮೊಸರು, ಸೋಡಾ ಪಾನೀಯಗಳ ಸೇವನೆ ಬೇಡ. ಶಕ್ತಿಯ ತತ್‌ಕ್ಷಣದ ಮೂಲವಾಗಬಲ್ಲ ಹಣ್ಣಿನ ರಸಗಳು, ಪ್ರೊಬಯೋಟಿಕ್ಸ್ ಮೂಲವಾಗಿರುವ ಮಜ್ಜಿಗೆಯನ್ನು ಸೇವಿಸಬಹುದು. ಚೇತರಿಸಿಕೊಳ್ಳುವ ತನಕ ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ದೇಹ ದಣಿಯುವಂತಹ, ದೇಹ ದಂಡಿಸುವ ಕೆಲಸಗಳಲ್ಲಿ ತೊಡಗಬೇಡಿ. ರೋಗ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಏನೇ ಇದ್ದರೂ ರೋಗ ಬಾರದಂತೆ ತಡೆಯುವುದೇ ಅತ್ಯಂತ ಸೂಕ್ತ. ಹಾಗಾಗಿ ಊಟ-ಉಪಾಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಆಹಾರವನ್ನು ಸರಿಯಾಗಿ ಬೇಯಿಸಿ, ಕುದಿಸಿ ಸೇವಿಸುವಂತಹ ವೈಯಕ್ತಿಕ ನೈರ್ಮಲ್ಯ ಕ್ರಮಗಳನ್ನು ಪಾಲಿಸುವುದು ಉತ್ತಮ.









