ಡಾ.ಅಗರಿ ನವೀನ್ ಭಂಡಾರಿಯವರಿಂದ‌ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದ ಶಿವಗುಡಿ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ.

111.5K Views 26 Jun 2024

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಡಾ.ಅಗರಿ ನವೀನ್ ಭಂಡಾರಿಯವರು ಬೊಮ್ಮನ ಹಳ್ಳಿಯಲ್ಲಿರುವ ಶ್ರೀ‌ ಆಯ್ಯಪ್ಪ ದೇವಾಲಯದ ಶಿವನ ಗುಡಿ ಸ್ಥಾಪನೆಗೆ 10 ಲಕ್ಷ‌ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ. ಅಗರಿ ನವೀನ್ ಭಂಡಾರಿಯವರ ಪುತ್ರಿ ಅನುಷ್ಕಾ ಶೆಟ್ಟಿ, ಸಹೋದರ ಕರ್ನಲ್ ಜಗಜೀವನ್ ಭಂಡಾರಿ ಉಪಸ್ಥಿತರಿದ್ದರು. ಡಾ. ಅಗರಿ ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿ ಯಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ. ಅಗರಿ ನವೀನ್ ಭಂಡಾರಿ ಮತ್ತವರ ತಂಡದ ಸದಸ್ಯರ ಪರಿಶ್ರಮವಿದೆ. ಇಲ್ಲಿ ಅಯ್ಯಪ್ಪ ದೇವಸ್ಥಾನ ನಿರ್ಮಿಸಲು ಮತ್ತು ಇದರ ಅಭಿವೃದ್ಧಿಗೆ ಇವರ ಕೊಡುಗೆ ಹಿರಿದಾದದು.
ಆಧುನಿಕ ಜೀವನ ಶೈಲಿಯ ಅತ್ಯಾಧುನಿಕತೆಯ ರೂಪವನ್ನು ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆಗೆ ನೀಡಿದ್ದಾರೆ.

Scroll to Top