ಅಧಿಕಾರವಿರಲಿ, ಇಲ್ಲದಿರಲಿ ನಳಿನ್‌ಕುಮಾರ್ ಕಟೀಲು ಅವರು ನಿಜವಾದ ಜನನಾಯಕ.

109.4K Views 16 Jun 2024

ಜನಾಭಿಪ್ರಾಯ ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು: ಅಧಿಕಾರವಿರಲಿ. ಇಲ್ಲದಿರಲಿ, ನಳಿನ್‌ಕುಮಾರ್ ಕಟೀಲು ಅವರೇ ನಿಜವಾದ ಜನನಾಯಕ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.


ಮೊನ್ನೆ ಬೋಳಿಯಾರ್ ಪ್ರಕರಣದಲ್ಲಿ ಆಸ್ಪತ್ರೆಗೆ ಸೇರಿದ ಬಿಜೆಪಿ ಕಾರ‍್ಯಕರ್ತರನ್ನು ಕಟೀಲು ಅವರು ಭೇಟಿಯಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಅವರೊಬ್ಬ ನಿಜವಾದ ಜನನಾಯಕ ಎಂಬುವುದನ್ನು ಜನ ಎಲ್ಲೆಡೆ ಅವರನ್ನು ಶ್ಲಾಘಿಸುವಂತೆ ಮಾಡಿದೆ.
ಮೂರು ಬಾರಿ ದಕ್ಷಿಣ ಕನ್ನಡದ ಎಂಪಿಯಾಗಿ 2 ಲಕ್ಷಕ್ಕೂ ಅಧಿಕ ಕೋಟಿ ರೂಪಾಯಿ ಅನುದಾನವನ್ನು ತಂದಿದ್ದ ನಿಷ್ಕಳಂಕ ನಾಯಕ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಲ್ಲೇ ಕಟ್ಟಿ ಬಲಿಷ್ಠವಾಗಿಸಿದ್ದರು.


ಕಟೀಲು ಅವರ ವರ್ಚಸ್ಸನ್ನು ಸಹಿಸಲಾಗದೆ ಹೊಟ್ಟೆ ಉರಿ ನಂಜು ಮತ್ಸರದಿಂದ ಅಪಪ್ರಚಾರ ನಡೆಸಿದ ಕೈಲಾಗದ ಮಂದಿ ಕಟೀಲು ಅವರಿಗೆ ನಾಲ್ಕನೇ ಬಾರಿಗೆ ಎಂಪಿ ಟಿಕೇಟು ಸಿಗದಿದ್ದಾಗ ಸಂತೋಷದಿಂದ ಹಿಗ್ಗಿ ಹೋಗಿದ್ದರು.
ಇದರ ಜೊತೆಗೆ, ಯಡಿಯೂರಪ್ಪನವರು ಕಟೀಲ್‌ ಅವರಿಗೆ ಟಿಕೇಟ್ ಸಿಗದಂತೆ ಮಾಡಿ ಕಟೀಲ್‌ರವರ ಬೆಳವಣಿಗೆಯನ್ನು ಚಿವುಟಲು ನೋಡಿದ್ದರು.


ಆದರೆ, ಕಟೀಲು ಅವರು ಎಲ್ಲವನ್ನು ಸಹಿಸಿಕೊಂಡರು. ಯಾರ ಮೇಲೂ ಕೋಪಗೊಳ್ಳದೆ ಜಾಣ ನಡೆ ಅನುಸರಿಸಿದರು.
ಪ್ರಸ್ತುತ,ಕಟೀಲು ಅವರು ಮಾಜಿ ಸಂಸದ.ಆದರೆ,ಅವರ ಬಳಿ ಬರುವ ಜನ ಸಾಗರ ಕಡಿಮೆಯಾಗಲಿಲ್ಲ.ಕಟೀಲು ಅವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದು,ಕಟೀಲು ಅವರು ಅಧಿಕಾರವಿರಲಿ, ಇಲ್ಲದಿರಲಿ ನಿಜವಾದ ಜನನಾಯಕ ಎಂಬ ಜನಾಭಿಪ್ರಾಯಗಳು Mp mla’s ನ್ಯೂಸ್‌ಗೆ ವ್ಯಕ್ತವಾಗಿವೆ.

ಚಿತ್ರಗಳು :ಸತೀಶ್ ಕಾಪಿಕಾಡ್

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top