ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಸಮಾಜಸೇವಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ಜನಾಭಿಪ್ರಾಯ.

109K Views 2 Mar 2024

ಮಂಗಳೂರು: ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಕಳೆದ 5೦ ವರ್ಷಗಳಿಂದ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಲಯನ್ಸ್ ಕ್ಲಬ್ ರಾಜ್ಯಪಾಲರಾಗಿದ್ದಾಗ 1೦ ಸಾವಿರ ಮಂದಿ ಅಂಧರಿಗೆ ಕನ್ನಡಕ ನೀಡಿ, ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲು ಸಹಕರಿಸಿದ ಅವರಿಗೆ ಅಮೇರಿಕಾ ಸರಕಾರವು ನೈಟ್ ಆಫ್ ದಿ ಬ್ಲೈಂಡ್ ಪ್ರಶಸ್ತಿ ನೀಡಿ ಗೌರವಿಸಿದೆ.


ಬಡವರಿಗೆ 101 ಆರ್‌ಸಿಸಿ ಮನೆಗಳನ್ನು ಕಟ್ಟಿಸಿ ಧರ್ಮಾರ್ಥವಾಗಿ ನೀಡಿದ ಅವರು ಬಡವರಿಗೆ ಮನೆಕಟ್ಟಲು ಎಕ್ರೆಗಟ್ಟಲೆ ಭೂಮಿ ದಾನ ಮಾಡಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೆರವು ಒದಗಿಸಿದ್ದಾರೆ. ಪುನರೂರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಮೊದಲಿಗರೆಂಬ ಹಿರಿಮೆ ಅವರ ಮೇಲಿದೆ. ಮಂಗಳೂರು ವಿಶ್ವ ವಿದ್ಯಾನಿಲಯವು ಅವರ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಬಡರೋಗಿಗಳಿಗೆ ಅಸಹಾಯಕರಿಗೆ, ಅಂಗವಿಕಲರಿಗೆ ದಿನನಿತ್ಯ ಆರ್ಥಿಕ ಸಹಾಯ ಮಾಡುವ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಜನಾಭಿಪ್ರಾಯ ವ್ಯಕ್ತ ವಾಗಿದೆ. ಈ ಬಗ್ಗೆ Mp mla’s ನ್ಯೂಸ್ ಎಂಪಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ನೀಡಿದೆ.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

Scroll to Top