ಮಣಿಪಾಲದ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಸಿನೆಮಾದ ಪ್ರಿಮಿಯಾರ್ ಶೋ ಉದ್ಘಾಟನೆ.

109.7K Views 1 Mar 2024

ಮಣಿಪಾಲ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಫಿಲಂ ದ ಪ್ರಿಮಿಯೇರ್ ಶೋ ಉದ್ಘಾಟನೆಯನ್ನು ಇತ್ತೀಚೆಗೆ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ತುಳುಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಅಬೂಬಕ್ಕರ್, ವೀಣಾ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಬಿಲ್ಡರ್ ದಿನೇಶ್ ಪೂಜಾರಿ ಸಂತೆಕಟ್ಟೆ, ರಾಘವೇಂದ್ರ ಜೆ.ಬಿ. ಬ್ರಹ್ಮಾವರ, ಶೇಖರ್ ಹಾವಂಜೆ, ಎಸ್. ನಾರಾಯಣ ಬ್ರಹ್ಮಾವರ, ನಾಯಕ ಶರಣ್ ಶೆಟ್ಟಿ, ಹಾಗೂ ಸ್ಥಳೀಯ ಕಲಾವಿದರಾದ ಚಂದ್ರಹಾಸ್ ಶೆಟ್ಟಿ ಕಪ್ಪೆಟ್ಟು. ಪೂರ್ಣಿಮಾ ಶೆಟ್ಟಿ, ಫ್ರಾಂಕಿ ಡಿಸೋಜಾ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಪ್ರಚಾರ ಸಂಯೋಜಕರಾದ ಜಹೀರ್ ಅಹಮ್ಮದ್ ಬೆಳಪು, ಕೀರ್ತಿರಾಜ್ ಅಂಬಲ್ಪಾಡಿ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದಯಾನಂದ ಕಿದಿಯೂರ್ ನೆರವೇರಿಸಿದರು.

ಸಿನಿಮಾ ವಿಭಿನ್ನ ರೀತಿಯ ಕಥೆಯನ್ನು ಹೊಂದಿದ್ದು: 1961-62 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಈ ಒಂದು ಸತ್ಯ ಕಥೆಯನ್ನು ಆಧರಿಸಿ ಸಿನಿಮಾ ರೀತಿಯಲ್ಲಿ ಚಿತ್ರಿಸಿ ನಿರ್ಮಾಣಗೊಂಡಿದೆ. ನವಿರಾದ ಹಾಸ್ಯ ಸಾಹಸ ದೃಶ್ಯಗಳು, ಇಂಪಾದ ಸಂಗೀತ ಹಾಡುಗಳು ಒಳಗೊಂಡಿದ್ದು ಹಾಗೂ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಮೇಲಾಟ ಈ ಚಿತ್ರದ ಪ್ಲಸ್ ಪಾಯಿಂಟ್. ಮುಖ್ಯ ಕಲಾವಿದರಾಗಿ ನವೀನ ಡಿ.ಪಡೀಲ್, ಭೋಜರಾಜ್ ವಾಮಂಜೂರ್ ಅರವಿಂದ್ ಬೋಳಾರ್, ಉಮೇಶ್ ಮಿಜಾರ್ ಸಾಯಿ ಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರ್, ಚಂದ್ರಹಾಸ ಮಾಣಿ, ರವಿರಾಮ್ ಕುಂಜ, ಗಿರೀಶ್ ಶೆಟ್ಟಿ ಕಟೀಲ್. ವೀಣಾ ಎಸ್. ಶೆಟ್ಟಿ, ಸಂದೀಪ್ ಭಕ್ತ ಹಾಗೆಯೇ ನಾಯಕನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನಿಸಿತಾ ಡಾಯಸ್, ಸ್ಥಳೀಯ ಉಡುಪಿ ಹಾಗೂ ಮಂಗಳೂರಿನ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದಾರೆ . ತುಳು ಸಿನಿಮಾಕ್ಕೆ ಹೊಸ ಮೆರಗು ಕೊಡುವ ರೀತಿಯಲ್ಲಿ ‘ಗಬ್ಬರ್ ಸಿಂಗ್ “ತುಳು ಸಿನಿಮಾ ಮೂಡಿ ಬಂದಿದ್ದು, ಮಸ್ಕತ್, ಕುವೈಟ್, ಬಹರೈನ್, ಕತಾರ್, ದುಬೈ ಯು.ಎಸ್.ಎ., ಸೌತ್‌ ಆಫ್ರಿಕಾ, ಮುಂಬೈ, ಬೆಂಗಳೂರು ಈ ಎಲ್ಲ ಕಡೆಗಳಲ್ಲಿ ಬಿಡುಗಡೆಯಾಗಲಿರುವುದು. ಕರಾವಳಿ ಭಾಗಕ್ಕೆ ಏಪ್ರಿಲ್ 12ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರಾದ ಸತೀಶ್ ಪೂಜಾರಿ ಬಾರ್ಕೂರ್ ಈ ಸಂಧರ್ಭದಲ್ಲಿ ತಮ್ಮ ಮಾತಿನಲ್ಲಿ ತಿಳಿಸಿದರು.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top