ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಎಂ.ರತ್ನಕಾಂತಿ ಶೆಟ್ಟಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಮಾಜಿ ಉಸ್ತುವಾರಿ ಸಚಿವ ಬೆಳ್ಳಿಪಾಡಿ ರಮಾನಾಥ ರೈ.

113.5K Views 23 Aug 2026

ಮಂಗಳೂರು: ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್,ನಮ್ಮ ಟಿ.ವಿ.ಯ ಆಡಳಿತ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ ಮತ್ತು ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿಯವರ ಮಾತೃಶ್ರೀ, ಕಾಲೇಜು ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕಿ, ಪ್ರೇಮಕಾಂತಿ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಎಂ.ರತ್ನಕಾಂತಿ ಶೆಟ್ಟಿಯವರು ಇತ್ತೀಚಿಗೆ ನಿಧನರಾಗಿದ್ದು, ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಟಿ. ಎಂ.ಎ. ಪೈ ಕನ್ವೆನ್ಷನಲ್ ಸೆಂಟರ್ ನಲ್ಲಿ ಆಗಸ್ಟ್ 21ರಂದು ಅವರ ಉತ್ತರಕ್ರಿಯೆ ಪ್ರಯುಕ್ತ ಶ್ರದ್ಧಾಂಜಲಿ ಸಭೆ ನಡೆದಾಗ ಕರ್ನಾಟಕ ಸರಕಾರದ ಅರಣ್ಯ, ಸಾರಿಗೆ, ಬಂದರು ಮತ್ತು ಮೀನುಗಾರಿಕೆ, ಜೀವವಿಜ್ಞಾನ ಮತ್ತು ಪರಿಸರ ಖಾತೆ ಮಾಜಿ ಮಂತ್ರಿ ಮತ್ತು ದ. ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಾ. ಎ ಜೆ ಶೆಟ್ಟಿ, ಡಾ.ಎ. ಸದಾನಂದ ಶೆಟ್ಟಿ,ಐಕಳ ಹರೀಶ್ ಶೆಟ್ಟಿ,. ಗಣೇಶ್ ರಾವ್, ಡಾ. ಶಾಂತರಾಮ ಶೆಟ್ಟಿ, ಗಣೇಶ್ ರಾವ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್. ಕೆ. ಮೊದಲಾದ ಗಣ್ಯರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ :ತಿಲಕ್ ಮಂಚಿ

Read More News

Scroll to Top