*ಮಂಗಳೂರು:* ಡಾ. ಅಶೋಕ್ ಶೆಟ್ಟಿ ಬಿ.ಎನ್. ಸಾರಥ್ಯದ ಎಂಪಿಎಂಎಲ್ಎ ನ್ಯೂಸ್ ವತಿಯಿಂದ 14ನೇ ಸೌಹಾರ್ದ ಸಂಗಮವು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್ಹಾಲ್)ದಲ್ಲಿ ಇಂದು ಸಂಜೆ ಗಂಟೆ 4ರಿಂದ 9ರ ತನಕ ನಡೆಯಲಿದೆ.



ಇಂದು ಬೆಳಿಗ್ಗೆ 11.15 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು, ಕಾರ್ಯಕ್ರಮದ ವಿವರಗಳನ್ನು ನೀಡಿದರು.
### *ಪ್ರಶಸ್ತಿ ಪ್ರದಾನ*
ಸೌಹಾರ್ದ ಸಂಗಮದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಕೆಳಗಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು:
*ಸಮಾಜ ರತ್ನ ಪ್ರಶಸ್ತಿ:* ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ
*ಜನಸೇವಾ ಪ್ರಶಸ್ತಿ:* ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯು.ಟಿ. ಖಾದರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಾಜಿ ಸಂಸದ ಹಾಗೂ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್
*ಬೆಸ್ಟ್ ಆಫೀಸರ್ಸ್ ಅವಾರ್ಡ್:* ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಸೀನಿಯರ್ ಡಿವಿಜನಲ್ ಕಂಟ್ರೋಲರ್ ರಾಜೇಶ್ ಶೆಟ್ಟ-
*ಬೆಸ್ಟ್ ಡಾಕ್ಟರ್ಸ್ ಅವಾರ್ಡ್:* ಮಂಗಳೂರು ಕೆಎಂಸಿ ಆಸ್ಪತ್ರೆಯ ಅಡಿಷನಲ್ ಪ್ರೊಫೆಸರ್, ಸ್ತ್ರೀರೋಗ, ಹೆರಿಗೆ ತಜ್ಞೆ, ಲಾಪ್ರೋಸ್ಕೋಪಿಕ್ ಸರ್ಜನ್ ಡಾ. ನೀನಾ ಎ. ಮಹಾಲೆ
*ಉದ್ಘಾಟನೆ ಮತ್ತು ಅಧ್ಯಕ್ಷತೆ*
14ನೇ ಸೌಹಾರ್ದ ಸಂಗಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಮಂಗಳೂರಿನ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈ ಅವರು ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ಆಶೀರ್ವಚನ ಮಾಡಲಿದ್ದಾರೆ.






ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಆರ್ಬಿಐ ಉತ್ತರ ವಲಯದ ಮಾಜಿ ನಿರ್ದೇಶಕ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ, ಮಂಗಳೂರಿನ ಮಾಜಿ ಮೇಯರ್ ಮತ್ತು ಕಾರ್ಡೋಲೈಟ್ ಕಂಪೆನಿಯ ಜನರಲ್ ಮ್ಯಾನೇಜರ್ ದಿವಾಕರ್ ಕದ್ರಿ ಮೊದಲಾದ ಗಣ್ಯರು ಸಾಧಕರನ್ನು ಸನ್ಮಾನಿಸಲಿದ್ದಾರೆ.
### *ಭಾಗವಹಿಸಲಿರುವ ಗಣ್ಯರು*
ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ಸ್ಟೇಟ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಅಲಿ, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮತ್ತು ಸ್ಮಾರ್ಟ್ ಸಿಟಿ ಮಂಗಳೂರಿನ ಎಂ.ಡಿ. ಡಾ. ಜಿ. ಸಂತೋಷ್ ಕುಮಾರ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಂಗಳೂರು ದಕ್ಷಿಣ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು, ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ಪತ್ರಿಕೋದ್ಯಮಿ, ಚಲನಚಿತ್ರ ನಿರ್ದೇಶಕ ಪ್ರಕಾಶ್ ಕೆ. ಪಾಂಡೇಶ್ವರ್, ಜೆಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಅಜಿತ್ ಚೌಟ ನೈಜೀರಿಯಾ, ಡೈಜಿ ವರ್ಲ್ಡ್ನ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಎಸ್ಎಲ್ ಶೇಟ್ ಜ್ಯುವೆಲ್ಲರ್ಸ್ & ಡೈಮಂಡ್ ಹೌಸ್ ಮಾಲಕ ಪ್ರಶಾಂತ್ ಶೇಟ್, ಪಿಯೂಸ್ ಎಲ್ ರೋಡ್ರಿಗಸ್, ಗಂಗಾಧರ ಪಂಡಿತ್, ನ್ಯಾಯವಾದಿಗಳಾದ ಎಂ. ಅಶ್ವನಿ ಕುಮಾರ್ ರೈ, ರಾಮ್ಪ್ರಸಾದ್ ಎಸ್., ಅರುಣ್ ಶೆಟ್ಟಿ, ಮಯೂರ್ ಕೀರ್ತಿ, ಕ್ರೀಡಾ ಬರಹಗಾರ ಎಸ್. ಜಗದೀಶ್ ಚಂದ್ರ ಸೂಟರ್ಪೇಟೆ, ವೈದ್ಯರುಗಳಾದ ಡಾ. ಸುಧಾಕರ್ ಶೆಟ್ಟಿ ಪುಣೆ-ಮೂಡಬಿದಿರೆ, ಡಾ. ಸಂತೋಷ್ ಟಿ. ಸೋನ್ಸ್, ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ, ಡಾ. ಹಂಸರಾಜ್ ಆಳ್ವ, ಡಾ. ಸುಧೀರ್ ಹೆಗ್ಡೆ, ಡಾ. ದೀಪಕ್ ಮಡಿ, ಡಾ. ಸದಾನಂದ ಪೂಜಾರಿ, ಡಾ. ಡಿ. ನರಸಿಂಹ ಪೈ, ಡಾ. ಡಿ. ಶಿವಾನಂದ ಪೈ, ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಡಾ. ಜ್ಯೂಲಿಯನ್ ಸಲ್ಡಾನ, ಡಾ. ರಘರಾಮ್ ಶೆಟ್ಟಿ ಗುಳ್ಳಾಡಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಉಪಾಧ್ಯಕ್ಷರಾದ ಆರೀಫ್ ಪಡುಬಿದ್ರಿ, ವಿಲ್ಫ್ರೆಡ್ ಡಿ’ಸೋಜ, ಕೋಶಾಧಿಕಾರಿ ವಿಜಯ ಕೋಟ್ಯಾನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ವಿಜಯ ಕರ್ನಾಟಕ ದೈನಿಕದ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ, ಸಂಯುಕ್ತ ಕರ್ನಾಟಕದ ಚೀಫ್ ನ್ಯೂಸ್ ಬ್ಯುರೋ ರಾಮಕೃಷ್ಣ ಆರ್., ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಟಿವಿ5ನ ರೀಜನಲ್ ಹೆಡ್ ಸುಖಪಾಲ್ ಪೊಳಲಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
### *ಸಾಂಸ್ಕೃತಿಕ ಕಾರ್ಯಕ್ರಮ*
ಚಲನಚಿತ್ರ ಗಾಯಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಪ್ರಭು ಮತ್ತು ಬಳಗದ ಗಾಯಕ, ಗಾಯಕಿಯರ ರಾಗ್ರಂಗ್ ತಂಡದಿಂದ ಸೌಹಾರ್ದ ಸಂಗೀತ ರಸಮಂಜರಿ, ಸಂಜೆ 6ಕ್ಕೆ ನರೇಶ್ ಸಸಿಹಿತ್ಲು ಬಳಗದ ತ್ರಿನೇತ್ರ ಕಲಾವಿದರಿಂದ ಈ ವರ್ಷದ ಸೂಪರ್ಹಿಟ್ ತುಳು ನಾಟಕ *‘ಬ್ರಹ್ಮರಕ್ಕಸೆ’* ಉಚಿತ ಪ್ರದರ್ಶನವಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಪ್ರಾಯೋಜಕತ್ವ ನೀಡಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ವಿನಂತಿಸಿದ್ದಾರೆ.






















































































































































































