ಸುಬ್ರಮಣ್ಯ, ಸುಬ್ರಮಣ್ಯ ದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಸುಬ್ರಮಣ್ಯ ಪ್ರೆಸ್ ಕ್ಲಬ್ ನ ಲೋಗೋ ವನ್ನು ಕೇಂದ್ರ ಸರಕಾರದ ಬ್ರಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರ ಸ್ವಾಮಿ ಬಿಡುಗಡೆ ಗೊಳಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಸುಬ್ರಮಣ್ಯ ಪತ್ರಕರ್ತರು ಒಳ್ಳೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ಅಗತ್ಯವಿರುವ ಸಹಕಾರ ನೀಡುವುದಾಗಿ ಹೇಳಿದರು. ವಿಧಾನ ಪರಿಷತ್ ಶಾಸಕ ಬೋಜೆ ಗೌಡ ಅವರ ವಿಧಾನ ಪರಿಷತ್ ನಿಧಿ ಯಿಂದ 3 ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆ ನೀಡಿದರು.
ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಗೌಡ, ವಿಧಾನ ಪರಿಷತ್ ಶಾಸಕ ಭೋಜೆ ಗೌಡ, ಜೆಡಿಎಸ್ ಮುಖಂಡರಾದ ಎಂ ಬಿ ಸದಾಶಿವ, ಅಕ್ಷಿತ್ ಸುವರ್ಣ, ಜಾಕೆ ಮಾಧವ ಗೌಡ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ,ಸುಬ್ರಮಣ್ಯ ಪ್ರೆಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸುಬ್ರಮಣ್ಯ, ವಿಶ್ವನಾಥ್ ಉಪಸ್ಥಿತರಿದ್ದರು.























































































































































































