ಮಂಗಳೂರು: ತನ್ನ ನಿಸ್ವಾರ್ಥ ಸಮಾಜ ಸೇವೆಯಿಂದಲ್ಲೇ ಮನೆಮಾತಾಗಿರುವ ಸ್ಟೇಟ್ ಬ್ಯಾಂಕ್ ನ ಹೋಟೆಲ್ ಸ್ವಾಗತ್ ನ ಸಪ್ಲೈಯರ್ ಅರುಣ್ ಶೆಟ್ಟಿ, ಕೋಡಿಬೆಟ್ಟು, ಪೊಳಲಿ ಅವರು ಕಳೆದ 26 ವರ್ಷಗಳಿಂದ ಇಲ್ಲಿ ಉದ್ಯೋಗದಲ್ಲಿದ್ದು, ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾ, ಈಗಾಗಲೇ ನೂರಕ್ಕೂ ಮಿಕ್ಕಿ ಬಡರೋಗಿಗಳಿಗೆ, ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ, ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ, ಅಡ್ಡೂರು ಗೆ ಕಳೆದ 11ವರ್ಷಗಳಿಂದ ಸಹಾಯನಿಧಿಗೆ 2ಲಕ್ಷದ 57ಸಾವಿರ ರೂಪಾಯಿ, ರಾಮಕೃಷ್ಣ ತಪೋಭವನಕ್ಕೆ 1ಲಕ್ಷದ 62ಸಾವಿರ ರೂಪಾಯಿ ಮತ್ತು ವೈಯುಕ್ತಿಕವಾಗಿ 2ಲಕ್ಷದ 30ಸಾವಿರ ರೂಪಾಯಿ ಸೇರಿದಂತೆ ಒಟ್ಟು 6ಲಕ್ಷದ 49ಸಾವಿರ ರೂಪಾಯಿ ಸಹಾಯ ಮಾಡಿದ್ದಾರೆ.ಇದರಲ್ಲಿ ವಿಶೇಷವೇನೆಂದರೆ ಕಳೆದ ವರ್ಷ ಡಿಸೇಂಬರ್ ನಲ್ಲಿ ನವಜ್ಯೋತಿ ಸಂಸ್ಥೆಯ ಸಹಾಯನಿಧಿಯ ದಶಮಾನೋತ್ಸವ ಸಂದರ್ಭದಲ್ಲಿ ಸಂಸ್ಥೆಯ ಸಹಾಯ ನಿಧಿಗೆ ಒಂದು ಲಕ್ಷ ರೂಪಾಯಿ ಮತ್ತು ಪೊಳಲಿ ರಾಮಕೃಷ್ಣ ತಪೋಭವನದ ವಿದ್ಯಾದೇಗುಲಕ್ಕೆ ಒಂದು ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ.




ಹೋಟೆಲ್ ಕೆಲಸವಲ್ಲದೆ ಆತ್ಮಶಕ್ತಿ ವಿವಿದ್ದೋಶ ಸಹಕಾರಿ ಸಂಘ (ರಿ )ದ ಪಿಗ್ಮಿ ಕಲೆಕ್ಟರ್ ಆಗಿಯೂ ದುಡಿಯುತ್ತಿದ್ದಾರೆ. ಇವರ ಸಹೋದರ ಅಸೌಖ್ಯದಲ್ಲಿದ್ದಾಗ ತುಂಬಾ ಮಂದಿ ಸಹಾಯ ಮಾಡಿದ್ದರು. ಅದೇ ಇವರ ಸಮಾಜ ಸೇವೆಗೆ ಸ್ಫೂರ್ತಿಯಾಯಿತು. ಹೋಟೆಲ್ ಸಪ್ಲೈಯರ್ ಒಬ್ಬರು ಸಮಾಜ ಸೇವೆಯಲ್ಲಿ ತೊಡಗಿರುವ ಅಪರೂಪದ ಪ್ರತಿಭೆ ಅರುಣ್ ಶೆಟ್ಟಿ ಯವರನ್ನು ಮೊದಲು ಗುರುತಿಸಿದ್ದು ಡಾ. ಅಶೋಕ್ ಶೆಟ್ಟಿ ಬಿ. ಎನ್. 2020ರಲ್ಲಿ ಮಂಗಳೂರು ಟೌನ್ ಹಾಲ್ ನಲ್ಲಿ ನಡೆದ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ ನೀಡಿ ಅರುಣ್ ಶೆಟ್ಟಿ ಅವರನ್ನು ಗುರುತಿಸಲಾಯಿತು. ಕಂದುಕದ ಮಾಜಿ ಕಾರ್ಪೋರೇಟರ್ ಅಬ್ದುಲ್ ಲತೀಫ್ ಅವರು ಇನಾಯತ್ ಅಲಿ ಅವರ ಗಮನಕ್ಕೆ ತಂದು ಅವರು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿ ಅರುಣ್ ಶೆಟ್ಟಿ ಅವರಿಗೆ ಪ್ರಶಸ್ತಿ ಕೊಡಿಸುವುದರ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ನಿಜಕ್ಕೂ ಇಬ್ಬರು ರಾಜಕಾರಣಿಗಳು ಅರ್ಹ ಆಭ್ಯರ್ಥಿಗೆ ಪ್ರಶಸ್ತಿ ಕೊಡಿಸುವುದರ ಮೂಲಕ ಜನ ಶ್ಲಾಘನೆಗೆ ಪಾತ್ರರಾಗಿದ್ದಾರೆ.


ಅರುಣ್ ಶೆಟ್ಟಿ ಅವರು ಅವಿವಾಹಿತರಾಗಿದ್ದು,ದಿ. ಕಿಟ್ಟಣ್ಣ ಶೆಟ್ಟಿ ಕೋಡಿಬೆಟ್ಟು ಮತ್ತು ಸರೋಜನಿ ಶೆಟ್ಟಿ ದಂಪತಿಗಳ ಸುಪುತ್ರರಾಗಿದ್ದಾರೆ. ಇವರ ಸಹೋದರ ಕಿರಣ್ ಶೆಟ್ಟಿ ಯವರು ಗುರುಪುರ ಸೇವಾ ಸಹಕಾರಿ ಸಂಘದಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಶಸ್ತಿ ತನ್ನ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ವಿಸ್ತಾರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅರುಣ್ ಶೆಟ್ಟಿ ಅವರು Mpmlasnewstv ಗೆ ತಿಳಿಸಿದ್ದಾರೆ






















































































































































































