ಮಂಗಳೂರು, ನ.12;ಕೋವಿಡ್ -19 ಕಾರಣದಿಂದ ಇಬ್ಬರು ಪೋಷಕರನ್ನು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯ ಮಂತ್ರಿ ಬಾಲ ಸೇವಾ ಯೋಜನೆಯ ಮೂಲಕ ಪ್ರತಿ ತಿಂಗಳು ತಲಾ₹3500.00ಮಗು ಮತ್ತು ಮಗುವಿನ ಕಾನೂನು ಬದ್ದ ಪೋಷಕರ ಜಂಟಿ ಖಾತೆಗೆ ಜಮೆ ಮಾಡಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯಡಿ 11 ಮಕ್ಕಳು ಇದುವರೆಗೆ ಈ ಸೌಲಭ್ಯ ಪಡೆಯಲು ದಾಖಲಾಗಿದ್ದಾರೆ .ಪಿ.ಎಂ ಕೇರ್ ಚಿಲ್ಡ್ರನ್ ಯೋಜನೆಯ ಮೂಲಕವೂ ಕೋವಿಡ್ ಸಂತ್ರಸ್ತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ಮಕ್ಕಳ ರಕ್ಷಣಾ ಘಟಕದ ದ.ಕ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ತಿಳಿಸಿದ್ದಾರೆ.
ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಗುರುವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಮತ್ತು ಮಕ್ಕಳ ರಕ್ಷಣೆ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಾ,ಹತ್ತು ವರ್ಷದೊಳಗಿನ ಮಕ್ಕಳ ಪಾಲನೆಗೆ ವಿಸ್ತ್ರತ ಕುಟುಂಬದ ಸದಸ್ಯರು ಇಲ್ಲದಿದ್ದಲ್ಲಿ ಅಂತಹ ಮಕ್ಕಳನ್ನು ರಕ್ಷಣೆ ಮತ್ತು ಪಾಲನೆಗಾಗಿ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗೆ ದಾಖಲಿಸಲಾ ಗುವುದು.ರಾಜ್ಯ ಸರ್ಕಾರಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ಯಾವ ತರಗತಿಗೆ ಪ್ರವೇಶಕ್ಕೆ ಅವಕಾಶವಿದೆಯೋ ಆ ತರಗತಿ ಯಿಂದ ಅನ್ವಯವಾಗುವಂತೆ ಪ್ರವೇಶ ಪರೀಕ್ಷೆಗಳಿಲ್ಲದೇ ನೇರವಾಗಿ ಪ್ರವೇಶಾವಕಾಶ ಕಲ್ಪಿಸಿ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ನೀಡಲಾಗುವುದು.ಎಸ್.ಎಸ್.ಎಲ್.ಸಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ವಿತರಣೆ.ಹೆಣ್ಣು ಮಕ್ಕಳಿಗೆ 21 ವರ್ಷ ತುಂಬಿದ ನಂತರ ವಿವಾಹ, ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಉದ್ದೇಶ ನೆಕ್ರಾಜೆ
ತಲಾ₹ 1.00 ಲಕ್ಷ ಆರ್ಥಿಕ ಧನಸಹಾಯ ಈ ಯೋಜನೆಯ ಮೂಲಕ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ 18 ವರ್ಷ ಮೀರಿದ ಅರ್ಹ ಮಕ್ಕಳಿಗೆ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ಪುನರ್ವಸತಿಗಾಗಿ ಮಾಸಿಕ 5000 ರೂ. ಆರ್ಥಿಕ ಸೌಲಭ್ಯ ಒದಗಿಸುವ ಉಪಕಾರ ಯೋಜನೆಯಡಿ ದ.ಜಿಲ್ಲೆಯಲ್ಲಿ 29 ಫಲಾನುಭವಿಗಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಂಪತಿ ಅಥವಾ ಏಕ ಪೋಷಕರು ಮಕ್ಕಳನ್ನು ದತ್ತು ಸ್ವೀಕರಿಸಲು ಅವಕಾಶ ಇರುವಂತೆಯೇ ಮಲತಂದೆ ಅಥವಾ ಮಲತಾಯಿ ಕೂಡಾ ತಮ್ಮ ಹಿಂದಿನ ವಿವಾಹದಿಂದ ಜನಿಸಿದ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವುದು ಕಡ್ಡಾಯ ಎಂದು ರಶ್ಮಿ ಅಶೋಕ್ ನೆಕ್ರಾಜೆ ತಿಳಿಸಿದ್ದಾರೆ.
ಮಗುವಿನ ಹಿತದೃಷ್ಟಿ ಯಿಂದ ಕಾನೂನಿನಲ್ಲಿ ಗುರುತಿಸಲ್ಪಟ್ಟ ಸಂಬಂಧಿಕರು ಅಂದರೆ ತಂದೆ ಅಥವಾ ತಾಯಿಯ ಸಹೋದರ, ಸಹೋದರಿ ಅಥವಾ ತಾತ ಅಜ್ಜಿ ದತ್ತು ಪಡೆಯಬಹು ದಾಗಿದೆ. ಇಂತಹ ದತ್ತು ಸ್ವೀಕಾರಕ್ಕೆ ಜೈವಿಕ ಪೋಷಕರ ಅಗತ್ಯ ಒಪ್ಪಿಗೆ, ಸಂಬಂಧದ ಪುರಾವೆ ಹಾಗೂ ಇತರ ಅಗತ್ಯ ದಾಖಲೆಗಳ್ನು ಸಲ್ಲಿಸಿ ನಿಗದಿತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ದತ್ತು ನಿಯಮಾವಳಿ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ಅವರಿಂದ ದತ್ತು ಆದೇಶ ಪಡೆಯುವ ಮೂಲಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ವಿವರ ನೀಡಿದರು.
- ಪೋಷಕತ್ವ ಯೋಜನೆಯಲ್ಲಿ ಮೂಲಕ ಜಿಲ್ಲೆಯಲ್ಲಿ 15ಮಕ್ಕಳ ಸೇರ್ಪಡೆ ಯಾಗಿ ದ್ದಾರೆ.ಈ ಯೋಜನೆಯಡಿ ಕುಟುಂಬಗಳಿಗೆ ಮರು ಸೇರ್ಪಡೆಗೊಳ್ಳಲು ಸಾಧ್ಯವಾಗದ ಮಕ್ಕಳನ್ನು (7ರಿಂದ 18 ವರ್ಷದೊಳಗಿನ) ಪೋಷಕತ್ವ ಯೋಜನೆಯ ಮೂಲಕ ಪೋಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಜೈವಿಕ ಪೋಷಕರಲ್ಲದ ಕುಟುಂಬಗಳಲ್ಲಿ ಈ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯಲು ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.ಪೋಷಕತ್ವ ಹಾಗೂ ದತ್ತು ಯೋಜನೆ ಎರಡೂ ವಿಭಿನ್ನ ಪ್ರಕ್ರಿಯೆ ಗಳಾಗಿದ್ದು, ಪೋಷಕತ್ವದಡಿ ಮಗುವನ್ನು ಪಡೆದ ಕುಟುಂಬಗಳು ಮಗುವಿನ ಆರೈಕೆ, ಆರೋಗ್ಯ ಮತ್ತು ಶಿಕ್ಷಣ ಜವಾಬ್ಧಾರಿ ವಹಿಸಿಕೊಳ್ಳಬೇಕು. ಮಕ್ಕಳ ರಕ್ಷಣಾ ಘಟಕವು ನಿರಂತರ ಮೇಲ್ವಿಚಾರಣೆ ನಡೆಸುತ್ತದೆ. ನಂತರ ಆ ಕುಟುಂಬವು ಮಗುವನ್ನು ಕಾನೂನುಬದ್ಧವಾಗಿ ದತ್ತು ಸ್ವೀಕರಿಸಲೂ ಅವಕಾಶವಿರುತ್ತದೆ ಎಂದು ಅವರು ಹೇಳಿದರು.
- ಪ್ರಾಯೋಜಕತ್ವ ಕಾರ್ಯಕ್ರಮ
ಪೋಷಕರಿಲ್ಲದ ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಡಿ ನಡೆಯುವ ಕಾರ್ಯಕ್ರಮವಾಗಿದ್ದು, ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಮಕ್ಕಳು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಅವರಿಗೆ ಕೌಟುಂಬಿಕ ವ್ಯವಸ್ಥೆಯ ಮಮತೆ, ಪ್ರೀತಿಯ ವಾತಾವರಣ ಕಲ್ಪಿಸುವುದಾಗಿದೆ. ಈ ಯೋಜನೆಯಡಿ ಫಲಾನುಭವಿ ಮಗುವಿಗೆ ಮಾಸಿಕ 4000 ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 503 ಮಕ್ಕಳ ಪ್ರಾಯೋಜಕತ್ವ ಕಾರ್ಯಕ್ರಮಕ್ಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 2025ರಲ್ಲಿ 1035 ಹಾಗೂ 2024ರಲ್ಲಿ 176 ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು ಎಂದು ರಶ್ಮಿ ಅಶೋಕ್ ನೆಕ್ರಾಜೆ ತಿಳಿಸಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪ್ರೆಸ್ಕ್ಲಬ್ ಅಧ್ಯಕ್ಷ ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತ ರಿದ್ದರು. ಹರೀಶ್ ಮೋಟುಕಾನ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.























































































































































































