‘ವಾದಿರಾಜ ವಾಲಗ ಮಂಡಳಿ ‘ಸಂಪೂರ್ಣವಾಗಿ ಕರಾವಳಿಗರಿಂದಲೇ ನಿರ್ಮಾಣವಾದ ಚಲನ ಚಿತ್ರ-ಡಾ.ಎಂ.ಎನ್. ರಾಜೇಂದ್ರ ಕುಮಾರ್. ‘ವಾದಿರಾಜ ವಾಲಗ ಮಂಡಳಿ ‘ಚಲನಚಿತ್ರದ ಪೋಸ್ಟರ್ ಬಿಡುಗಡೆ

115.3K Views 1w ago

ಮಂಗಳೂರು: ಕರಾವಳಿಗರೇ ಸೇರಿ ಪ್ರಥಮ ಬಾರಿಗೆ ನಿರ್ಮಿಸಿರುವ ಚಲನ ಚಿತ್ರ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ಸಂಪೂರ್ಣಗೊಂಡಿದ್ದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಧರಿಸಿದ್ದೇವೆ ಎಂದುಎಂ.ಎನ್.ಆರ್. ಪ್ರೊಡಕ್ಷನ್ ನ ಮಾಲೀಕರು ಮತ್ತು ಚಲನಚಿತ್ರದ ನಿರ್ಮಾಪಕರಾದ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.


‘ವಾದಿರಾಜ ವಾಲಗ ಮಂಡಳಿ ‘ಚಲನಚಿತ್ರದ ಪೋಸ್ಟರ್ ನ್ನು ಶನಿವಾರ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು
ಈಗಾಗಲೇ ತಮ್ಮ ಬ್ಯಾನರ್ ನಲ್ಲಿ ಯಶಸ್ವಿ ಸಿನೆಮಾ ‘ಗಲಾಟೆ’ ಮತ್ತು ‘ಜೋಗುಳ’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು ಉತ್ತಮ ಅಭಿರುಚಿಯ ಕನ್ನಡ ಸಿನೆಮಾಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಿದೆ. ಇಂದು ನಮ್ಮ ಬಹು ನಿರೀಕ್ಷೆಯ ‘ವಿವಿಎಂ’ ಚಿತ್ರದ ಪೋಸ್ಟರ್ ನ್ನು ಅನಾವರಣ ಗೊಳಿಸುವ ಮೂಲಕ ಚಲನಚಿತ್ರದ ಮೊದಲ ನೋಟದ ಪರಿಚಯ ಮಾಡಿಸಿದ್ದೇವೆ.
ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ‘ವಿವಿಎಮ್’ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು ಉತ್ತಮವಾಗಿ ಮೂಡಿಬಂದಿದ್ದು ಸಂಪೂರ್ಣ ಹಾಸ್ಯದೊಂದಿಗೆ ಕುಟುಂಬ ಸಮೇತ ನೋಡುವ ಮನೋರಂಜನಾತ್ಮಕ ಚಿತ್ರವಾಗಿದೆ ಎಂದರು.
ಗುಂಡುಮಾಮ ಖ್ಯಾತಿಯ ನವೀನ್ ಡಿ ಪಡೀಲ್, ‘ಸು ಪ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷಣ ಮಲ್ಲೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್ ನಾಯಕರಾಗಿ, ತನ್ವಿ ರಾವ್, ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ.
ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರನ್ ಕೈಚಳಕ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಸಂಗೀತ ಸಿನಿ ರಸಿಕರ ಮನತಣಿಸಲಿದೆ. ಸ್ಟಂಟ್ ಶಿವು ಸಾಹಸವಿದೆ. ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ಜಯಪ್ರಕಾಶ್ ತುಂಬೆಯವರುನಿರ್ಮಾಪಕರಾಗಿಕಾರ್ಯಕಾರಿ ಸಹಕರಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮಾನೇಜರ್ ಆಗಿ ದುಡಿದಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.ರವರಾಹ ರೂಪಂ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ.ಹಾಸ್ಯ ಮತ್ತು ಕುತೂಹಲಭರಿತ ಕಥಾಹಂದರ ಹೊಂದಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹುದಾದ ಮನೋರಂಜನಾತ್ಮಕ ಸಿನೆಮಾವಾಗಿ ಮೂಡಿಬರಲಿದೆ. ಕರಾವಳಿಯ ಸಂಭಾಷಣಾ ಶೈಲಿ ಮತ್ತು ಕಥಾಹಂದರ ಇದರ ಧನಾತ್ಮಕ ಅಂಶಗಳಾಗಿವೆ ಎಂದವರು ತಿಳಿಸಿದ್ದಾರೆ.
ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡುತ್ತಾ,ಚಲನಚಿತ್ರದ ನವಿರಾದ ಹಾಸ್ಯ ಮತ್ತು ಗುಣಮಟ್ಟವನ್ನು ನೋಡಿ ಇದನ್ನು ನೆರೆರಾಜ್ಯದ ಕೇರಳಿಗರೂ ಇಷ್ಟ ಪಡುತ್ತಾರೆ ಎಂಬ ವಿಶ್ವಾಸದಿಂದ ಇದನ್ನು ಮಲೆಯಾಳಂ, ತಮಿಳು ಭಾಷೆಗಳ ಡಬ್ಬಿಂಗ್ ನಡೆಯುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದರು.ಸಿನೆಮಾದಲ್ಲಿ ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡಾಗಿದ್ದರೆ ನಾಲ್ಕು ತುಣುಕು ಹಾಡುಗಳಿವೆ. ಬ್ರಹ್ಮಕಲಶ ಹಾಡು ಹಾಡಿದ ಕೆನಡಾ ಮೂಲದ ಅಭಿ ವಿ, ವರಾಹರೂಪಂ ಹಾಡಿದ ಚೆನ್ನೈ ಮೂಲದ ಸಾಯಿವಿಶ್ಲೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು, ಮಣಿಕಾಂತ್ ಕದ್ರಿ ಮುಂತಾದವರು ಹಾಡುಗಳಿಗೆ ದನಿಯಾಗಿದ್ದು ಎಲ್ಲಾ ಹಾಡುಗಳು ಇಂಪಾಗಿ ಮೂಡಿಬಂದಿವೆ. ಸಿನೇಮಾ ತೆರೆಗೆ ಬರಲು ತಯಾರಿದ್ದರೂ ಬೇರೆ ಸಿನೆಮಾಗಳಿಗೆ ಸ್ಪರ್ಧೆ ಆಗದಂತೆ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಶಶಿರಾಜ್ ಕಾವೂರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷಣ ಮಲ್ಲೂರು, ಸಂತೋಷ್ ಶೆಟ್ಟಿ, ವಿವಿಎಮ್ ತಂಡದಲ್ಲಿ ನವೀನ್ ಡಿ. ಪಡೀಲ್, ಮಣಿಕಾಂತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು.

Read More News

ಇಂದು (ನವೆಂಬರ್ 22)ರಂದು ಕನ್ನಡ ಸಾಹಿತ್ಯ ಪರಿಷತ್ತು ದರ್ಬೆ ಪುತ್ತೂರು ಕಚೇರಿಯಲ್ಲಿ ಮಿತ್ರoಪಾಡಿ ಜಯರಾಮ ರೈ ಅಬುದಾಭಿ ನಿರ್ಮಾಣದ ನಾರಾಯಣ ಕುಂಬ್ರ ಸಾಹಿತ್ಯದ ಮಣ್ಣ ಘಮದ ಗ್ರಾಮ ಸಾಹಿತ್ಯ ಸಂಭ್ರಮ ಎಂಬ ಯಕ್ಷಗಾನ ಶೈಲಿಯ ಧ್ವನಿ ಸುರುಳಿ ಬಿಡುಗಡೆ

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

Scroll to Top