ಡ್ರಗ್ಸ್, ಗಾಂಜಾ ಮೊದಲಾದ ಅಪಾಯಕಾರಿ, ಮಾರಕ ಮಾದಕ ವಸ್ತುಗಳ ವ್ಯಸನ, ದುಶ್ಚಟಗಳ ವಿರುದ್ಧ ಮೂಡಬಿದ್ರೆಯಲ್ಲಿ ಕಾನೂನು ಘಟಕ, ಪೊಲೀಸ್ ಠಾಣೆ, ಟೀಮ್ ಬೆದ್ರದ ಸಹಯೋಗದಲ್ಲಿ ಇಡೀ ರಾಜ್ಯದ ಗಮನ ಸೆಳೆದ, ಶಭಾಷ್ ಗಿರಿ ಪಡೆದ, 45 ಪೊಲೀಸ್ ರ ಪಥ ಸಂಚಲನದೊಂದಿಗೆ ಚುರುಕುಗೊಂಡ ಸ್ವಾತಂತ್ರ್ಯ ದಿನ ದಂದು ನಡೆದ ಜನ ಶ್ಲಾಘನೆಯ ಜನಪರ ಕಾರ್ಯಕ್ರಮ -“ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ ‘ ಸ್ಟಿಕ್ಕರ್ ಅಭಿಯಾನ.ಯುವಜನರೇ ಎಚ್ಚರ!ಮುಟ್ಟಬೇಡಿ ಡ್ರಗ್ಸ್, ಗಾಂಜಾ. ನಿಮ್ಮ ಅಮೂಲ್ಯ ಭವಿಷ್ಯ ನಿಮ್ಮ ಕೈಯಾರೆ ಅಪಾಯಕ್ಕೆ ಕೈಯೊಡ್ಡಿ ಬದುಕಿ ಬಾಳಬೇಕಾದ ಜೀವವನ್ನು ಜೀವಂತ ಸಾಯಿಸಬೇಡಿ

118.1K Views 17 Aug 2026

ಡ್ರಗ್ಸ್, ಗಾಂಜಾಗಳಂತಹ ಅಪಾಯಕಾರಿ ಹಾಗೂ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡೊಕೊಡುವ ಉದ್ದೇಶದಿಂದ ಮೂಡುಬಿದಿರೆಯ ಕಾನೂನು ಘಟಕ,ಮೂಡುಬಿದಿರೆ ಪೊಲೀಸ್ ಠಾಣೆ ಹಾಗೂ ಟೀಮ್ ಬೆದ್ರ ಹಮ್ಮಿಕೊಂಡ ‘ ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ’ ಎಂಬ ಸ್ಟಿಕ್ಕರ್ ಅಭಿಯಾನವು ರಾಜ್ಯದಾದ್ಯಂತ ಗಮನಸೆಳೆದಿದೆ.
ಮೂಡುಬಿದಿರೆಯ 45 ಮಂದಿ ಪೊಲೀಸರು ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.ಅಲ್ಲದೆ ಬೆದ್ರದ ಹಲವೆಡೆ ಸ್ಟಿಕ್ಕರ್ ಅಭಿಯಾನ ನಡೆಸುವ ಮೂಲಕ ಬೆದ್ರದಲ್ಲಿಂದು ವಿನೂತನ ಕಾರ್ಯಕ್ರಮವೊಂದು ನಡೆದಂತಾಗಿದೆ.


ಈ ಅಭಿಯಾನದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ರಾಜೇಂದ್ರ, ಲೀಗಲ್ ಸೆಲ್ ನ ಪ್ರಮುಖರಾದ ಪದ್ಮಪ್ರಸಾದ್ ಜೈನ್, ಮರ್ವಿನ್ ಜಾನ್ಸನ್ ಲೋಬೋ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೆಳುವಾಯಿ ಸೀತಾರಾಮ ಆಚಾರ್ಯ, ಪ್ರಮುಖರಾದ ಸುಚರಿತ ಶೆಟ್ಟಿ, ಪುರಂದರ ದೇವಾಡಿಗ ,ಜೆ.ಜೆ.ಪಿಂಟೊ,ಪ್ರವೀಣ್ ಕುಮಾರ್ ಜೈನ್, ಆಲ್ವಿನ್ ಡಿಸೋಜ, ರಾಜೇಶ್ ಕಡಲಕೆರೆ,ಅನೀಶ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
80 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಈ ಅಭಿಯಾನದ ಸ್ಟಿಕ್ಕರ್ ನಲ್ಲಿ ನೇರವಾಗಿ ಯಾರಿಗೆಲ್ಲಾ ದೂರು ನೀಡಬಹುದೆನ್ನುವ ಮಾಹಿತಿಯನ್ನು ನೀಡಲಾಗಿದೆ.
ನವಮಿ ಸರ್ಕಲ್ ಪಕ್ಕದಲ್ಲಿರುವ ವೇದಿಕೆಯಲ್ಲಿರುವ ಸ್ಟಿಕ್ಕರ್ ನೊಂದಿಗೆ ವಿದ್ಯಾರ್ಥಿಗಳಿಗೆ ಸೆಲ್ಫಿ ತೆಗೆಯಲು ನಾಳೆ ಅವಕಾಶ ನೀಡಲಾಗಿದೆ.

Read More News

Scroll to Top