ಬೆಂಗಳೂರು -ವೆಂಕಟ್ ಭಾರದ್ವಾಜ್ ನಿರ್ದೇಶನದ, ಸುಂದರ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಸುಂದರ ರಾಜ್ ಅವರ 250ನೇ ಸಿನೆಮಾ ‘ಚಾರ್ಜ್ ಶೀಟ್ 03-08’ ಸಿನಿಮಾ ಆ.14ರಂದು ತೆರೆಗೆ ಬರಲಿದೆ. ಕ್ರೈಂ-ಥ್ರಿಲ್ಲರ್ ಕುತೂಹಲ ಕೆರಳಿಸುವ ಸಿನೆಮಾ ಇದಾಗಿದೆ, ತಂದೆ -ಮಗಳ ನಡುವಿನ ಬಾಂಧವ್ಯದ ಸುತ್ತ ನಡೆಯುವ ಕಥಾಹಂದರ ಸಿನಿಮಾದಲ್ಲಿದೆ. 2003 ರಿಂದ 2008ರ ಸಮಯದಲ್ಲಿ ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನಿರ್ವಹಿಸಿದ ವಿಶೇಷ ಪ್ರಕರಣಗಳೇ ಚಿತ್ರದ ಕಥೆಗೆ ಪ್ರೇರಣೆ ಆಗಿದೆ.



ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಣ್ ಮತ್ತು ದಿನೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಮೀರ್ ಕುಲಕರ್ಣಿ.ಸಂಗೀತ, ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ ಹಾಗೂ ಶಮೀಕ್ ವಿ. ಭಾರದ್ವಾಜ್ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಹರ್ಷ್ ಅರ್ಜುನ್, ಸತ್ಯಶ್ರೀ, ಅಮರ್, ರೂಪೇಶ್, ಡಾ.ಪ್ರಮೋದ್, ಡಾ.ಸುಧಾಕರ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಅವರು ಹಾಡಿರುವ ‘ಋತುಮಾನವು’ ಹಾಡಲ್ಲಿ ತಂದೆ, ಮಗಳ ನಡುವಿನ ಭಾವನಾತ್ಮಕ ಪ್ರೀತಿಯನ್ನು ವಿವರಿಸಲಾಗಿದ್ದು, ಆ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಪರಾಧವನ್ನು ತನಿಖೆ ಮಾಡುವ ಕಥೆಗಳು ಹಲವಿದ್ದರೂ, ಸಮಾಜದ ಹೃದಯವನ್ನು ಸ್ಪರ್ಶಿಸುವ ಕಥೆಗಳು ವಿರಳ. ಅಂತಹ ಅಪರೂಪದ ಪ್ರಯತ್ನವೇ ಚಾರ್ಜ್ಶೀಟ್ 03-08
ಬೆಂಗಳೂರಿನಲ್ಲಿ 2003ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ‘ಚಾರ್ಜ್ ಶೀಟ್ 03/08’. ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಜೀವನಾನುಭವ ಹಾಗೂ ಅವರು ಬರೆದ ಕಾದಂಬರಿಯೇ ಈ ಸಿನಿಮಾದ ಕಥಾಹಂದರ. ಸತ್ಯದ ಹುಡುಕಾಟ, ವ್ಯವಸ್ಥೆಯೊಳಗಿನ ಸಂಘರ್ಷ ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟವನ್ನು ಈ ಸಿನಿಮಾ ಚಿತ್ರಿಸುವುದರ ಜೊತೆಗೆ ಉತ್ತಮ ಸಂದೇಶವನ್ನೂ ನೀಡಲಿದೆ.
ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ನೈಜ ಕಥೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, 2000ದ ದಶಕದ ಆರಂಭದ ಬೆಂಗಳೂರಿನ ವಾತಾವರಣವನ್ನು ಇಲ್ಲಿ ನೈಜವಾಗಿ ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಸುಂದರ್‍ರಾಜ್, ಹರ್ಶ್ ಅರ್ಜುನ್, ಅಮರ್, ಸತೆಯಾ, ರಾಮ್, ಚೇತನ ಖೋಟ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾ.ಸುಧಾಕರ ಶೆಟ್ಟಿಯವರ ಮೊದಲ ಚಿತ್ರ ವೆಂಕಟ್ ಭಾರಧ್ವಜ್ ನಿರ್ದೇಶನದ ಹೇ ಪ್ರಭು, ಎರಡನೆ ಚಿತ್ರ ಚಾರ್ಜ್ ಶೀಟ್, ಮೂರನೇ ಚಿತ್ರ ರಕ್ಕಿ,ನಾಲ್ಕನೇ ಚಿತ್ರ ಡಾ.ಮೋಹನ್ ಎಂಬಿಬಿಯಸ್ .ಇದು ತುಳು ಮತ್ತು ಮರಾಠಿ ಚಿತ್ರವಾಗಿದ್ದು, ಡಾ.ಸುಧಾಕರ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಸಮರ್ಪಿತ ಮತ್ತು ಪ್ರಾಮಾಣಿಕ ವೈದ್ಯರ ಕಥೆಯನ್ನು ಆಧರಿಸಿದೆ.
ಬದುಕು ಬರೆದ – ಸಾಂಗ್ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.







































































































































































































