ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐ ಸಿ ವೈ ಎಂ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ ಕಾರ್ಯಕ್ರಮ

110.2K Views 1w ago

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐ ಸಿ ವೈ ಎಂ ಘಟಕದ ಸದಸ್ಯರಿಂದ ಪಾವ್ಸಾಂತ್ ಉಡ್ಕಣಾಂ (ಮಳೆಯಲ್ಲಿ ಆಟ) ಎಂಬ ವಾರ್ಡ್ ಮಟ್ಟದ ಆಟೋಟ ಸ್ಪರ್ಧೆಗಳನ್ನು ಚರ್ಚ್ ನ ತೆರೆದ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಪಂದ್ಯಾಟದ ಮೊದಲು ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಂದನೀಯ ಫಾ. ರೋಶ್ವಿನ್ ಲೋಪೆಜ್ ಮಾತನಾಡಿ ಯುವ ಶಕ್ತಿಯ ಸದುಪಯೋಗ ಅಗತ್ಯ. ಇಂತಹ ಕ್ರೀಡೆಗಳಿಂದ ವಾರ್ಡುಗಳ ಸದಸ್ಯರ ಪ್ರತಿಭೆಗಳು ಹೊರ ಹೊಮ್ಮುತ್ತವೆ. ಸಂಘಟನೆ, ಏಕತೆ, ಒಗ್ಗಟ್ಟು ಹಾಗೂ ಸೇವಾ ಮನೋಭಾವನೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಿಜೇತ ವಾರ್ಡುಗಳ ಸದಸ್ಯರ ತಂಡಗಳಿಗೆ ಟ್ರೋಫಿಯನ್ನು ವಿತರಿಸಿ ಐ ಸಿ ವೈ ಎಂ ಸದಸ್ಯರ ಕಾರ್ಯ ವೈಖರಿಯನ್ನು ಕೊಂಡಾಡಿ ಮುಂದೆಯೂ ಚರ್ಚ್ ನ ಏಳಿಗೆಗಾಗಿ ಶ್ರಮಿಸ ಬೇಕೆಂದರು.
ಸ್ಪರ್ಧೆಯಲ್ಲಿ ಸೆಲಿನ್ ಡಿ ಸೋಜಾ ನೇತೃತ್ವದ ಸಂತ ಸೆಬಾಸ್ಟಿಯನ್ ತಂಡ ಪ್ರಥಮ, ಶೀಲಾ ಡಿ ಸೋಜಾ ನೇತೃತ್ವದ ತಂಡ ದ್ವಿತೀಯ ಹಾಗೂ ರೋಷನ್ ಮೊಂತೇರೊ ನೇತೃತ್ವದ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ , ಕಾರ್ಯದರ್ಶಿ ಹಾಗೂ ಐ ಸಿ ವೈ ಎಂ ಘಟಕದ ಸಚೇತಕ ರೋಷನ್ ಮೊಂತೇರೊ , ಐ ಸಿ ವೈ ಎಂ ಘಟಕದ ಅಧ್ಯಕ್ಷ ಡ್ಯಾರನ್ ಅರಾನ್ಹಾ ಮುಂತಾದವರು ಉಪಸ್ಥಿತರಿದ್ದರು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top