ಆ.3ರಿಂದ ಮೂಳೆ ಮತ್ತು ಕೀಲುಗಳ ಆರೋಗ್ಯ ಜಾಗೃತಿ ಸಪ್ತಾಹ -ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಮಾಹಿತಿ

111.5K Views 3w ago

ಮಂಗಳೂರು: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ (ಕೆಒಎ) ವತಿಯಿಂದ ಸಾರ್ವಜನಿಕರಲ್ಲಿ ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆ.3ರಿಂದ 8ರವರೆಗೆ ರಾಜ್ಯಾದ್ಯಂತ ಬೋನ್ ಮತ್ತು ಜಾಯಿಂಟ್ ವೀಕ್ – 2026 ಆಚರಣೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ನಡೆಯಲಿದೆ
ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು, ಶಾಲೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು
ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ತಿಳಿಸಿದ್ದಾರೆ.
ಆ.3ರಂದು ಶಾಲಾಮಕ್ಕಳಲ್ಲಿ ಬೆನ್ನುಮೂಳೆ ಮತ್ತು ದೇಹದ ಭಂಗಿ ತಪಾಸಣೆ, ಆ.4ರಂದು ಆಸ್ಟಿಯೋಪೊರೋಸಿಸ್ ತಡೆ ಹಾಗೂ ಹಾರ್ಮೋನ್ ಆರೋಗ್ಯದ ಅರಿವು, ಆ.5ರಂದು ಸರಿಯಾದ ಕುಳಿತುಕೊಳ್ಳುವಿಕೆ, ನಿಲ್ಲುವಿಕೆ ಹಾಗೂ ಕೆಲಸದ ಭಂಗಿಯ ಕುರಿತು ಜಾಗೃತಿ, ಆ.6ರಂದು ಅಪಘಾತ ಮತ್ತು ಗಾಯಗಳ ತಡೆ ಕುರಿತು ಸಾರ್ವಜನಿಕ ಶಿಕ್ಷಣ, ಆ.7ರಂದು
ಹಿರಿಯ ನಾಗರಿಕರಲ್ಲಿ ಬೀಳುವಿಕೆ ತಡೆ ಹಾಗೂ ಸುರಕ್ಷಿತ ಜೀವನ ಶೈಲಿ ಜಾಗೃತಿ ಹಾಗೂ ಆ.8ರಂದು ಅಸ್ಥಿ ಚಿಕಿತ್ಸಕರ ಆರೋಗ್ಯ, ಸುರಕ್ಷತೆ ಹಾಗೂ ವೃತ್ತಿಪರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು,ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳು ಸಪ್ತಾಹದ ಅಂಗವಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ವಿನಂತಿಸಿದ್ದಾರೆ.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top