ಪತ್ರಿಕಾ ವಿತರಕರಿಗೆ ಸನ್ಮಾನಪತ್ರಿಕೆಗಳು ಪತ್ರಿಕಾಧರ್ಮ ಪಾಲಿಸಲಿ- ಕೆ.ಎನ್. ಗಂಗಾಧರ ಆಳ್ವ

102.6K Views 1 Jul 2026

ಬಂಟ್ವಾಳ ಜು.1
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮವು ಜನಾಭಿಪ್ರಾಯದೊಂದಿಗೆ ಸರಕಾರವು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಸರಕಾರದ ಕಾನೂನು ಯೋಜನೆಗಳನ್ನು ಜನರಿಗೆ ತಲಪಿಸಲು ಪ್ರತಿಕೆಗಳು ಸಹಕಾರಿಯಾಗಿವೆ. ಸತ್ಯವನ್ನು ಜನರಿಗೆ ತಲುಪಿಸಿ ಅನ್ಯಾಯವನ್ನು ಪ್ರಶ್ನಿಸುವ ಮೂಲಕ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಪಾಲಿಸಬೇಕು. ಭ್ರಷ್ಟಚಾರವನ್ನು ತೊಲಗಿಸಲು ಪತ್ರಿಕಾ ಮಾಧ್ಯಮವು ಪ್ರಯತ್ನಿಸಬೇಕು ಎಂದು ಬಂಟ್ವಾಳ ಎಸ್.ವಿ.ಎಸ್. ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಹೇಳಿದರು.
ಅವರು ಕಾಲೇಜಿನ ಕನ್ನಡ ಸಂಘದ ವತಿಯಿಂದ ಏರ್ಪಡಿಸಲಾದ ಪತ್ರಿಕಾ ದಿನಾಚರಣೆಯ ಸಂದರ್ಬದಲ್ಲಿ ಕಳೆದ 40 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಸಿ.ರೋಡಿನ ಮಾಧವರನ್ನು ಸನ್ಮಾನಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಪತ್ರಿಕಾ ದಿನಾಚರಣೆ ಮತ್ತು ಮಂಗಳೂರು ಸಮಾಚಾರ ಪತ್ರಿಕೆಯಿಂದ ಆರಂಭಗೊಂಡು ಕರ್ನಾಟಕದಲ್ಲಿ ಪತ್ರಿಕೋದ್ಯಮದ ಬೆಳವಣಿಗೆ ಬಗ್ಗೆ ಉಪನ್ಯಾಸ ನೀಡಿದರು. ಪತ್ರಿಕಾ ವಿತರಕರು ಮುಂಜಾನೆ ಮನೆ ಬಾಗಿಲಿಗೆ ಪತ್ರಿಕೆಯನ್ನು ಹಾಕುವ ಮೂಲಕ ಮನೆಮನೆಗೆ ಲೋಕದ ಸುದ್ದಿಯನ್ನು ತಲುಪಿಸುತ್ತಾರೆ. ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಕರ್ತರ ಹಾಗೂ ಪತ್ರಿಕಾ ಏಜೆಂಟರ ಪಾತ್ರವೂ ಮಹತ್ತರವಾದುದು ಎಂದು ಅಭಿನಂದಿಸಿದ ಅವರು ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ಉಪನ್ಯಾಸಕರಾದ ವೆಂಕಟೇಶ ನಾಯಕ್,ಮಂಜುನಾಥ ಶೆಣೈ ,ಅಲೆನ್ ಡೊನಾಲ್ಡ್, ವಿಭಾನಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ವಿಭಾ ಪುತ್ರನ್ ಸ್ವಾಗತಿಸಿ, ಉಪನ್ಯಾಸಕಿ ಯಜ್ಞೇಶ್ವರಿ ನಿರೂಪಿಸಿ ವಂದಿಸಿದರು.

Read More News

Scroll to Top