ಬಜೆಟ್ ಹೀಗೂ ಉಂಟೇ!!

103.6K Views 2 Feb 2026

ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.
ನವದೆಹಲಿ: ಕೇಂದ್ರ ಸರಕಾರ 53 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಇದನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದು ಜನಪರ ಬಜೆಟ್ ಅಲ್ಲ ಎಂದು ಟೀಕಿಸಿದೆ. ಇನ್ನು ಸ್ವಲ್ಪ ಸಮಯದಲ್ಲಿ ರಾಜ್ಯ ಸರಕಾರ ಬಜೆಟ್ ಮಂಡಿಸಲಿದೆ. ಆವಾಗ ಬಿಜೆಪಿ ನಾಯಕರು ಟೀಕಿಸಲಿದ್ದಾರೆ.
ಪ್ರತೀ ಸಾರಿ ಬಜೆಟ್ ಮಂಡಿಸಿದಾಗ ವಿಪಕ್ಷಗಳು ಟೀಕಿಸುತ್ತವೆ. ಇದು ಎಷ್ಟು ಸರಿ? ಅಭಿವೃದ್ಧಿ ಆಡಳಿತ ನಮ್ಮ ದೇಶದ ಧ್ಯೇಯವಾಗಿದೆ. ಆದರೆ ವಿರೋಧಪಕ್ಷದ ಸ್ಥಾನದಲ್ಲಿರುವ ರಾಜಕೀಯ ನಾಯಕರು ಆಡಳಿತ ಪಕ್ಷದ ಬಜೆಟ್ ಬಗ್ಗೆ ಸರಿಯಾಗಿ ವಿಮರ್ಶಿಸದೆ ಏಕಾಏಕಿ ಟೀಕಿಸುತ್ತಾರೆ. ಇದೇ ಸಂದರ್ಭ ಕೆಲವು ಚಾಲ್ತಿಯಲ್ಲಿ ಇಲ್ಲದ ಮಾಜಿ ರಾಜಕಾರಣಿಗಳು ಬಜೆಟನ್ನು ಬೇಕಾಬಿಟ್ಟಿ ಹೊಗಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.
ಇವರಿಗೆಲ್ಲಾ ಈ ಅರ್ಥವ್ಯವಸ್ಥೆಯ ಜ್ಞಾನವೇ ಇರುವುದಿಲ್ಲ. ಒಂದು ಬಜೆಟ್‍ನ್ನು ಮಂಡಿಸಬೇಕಾದರೆ ಎಷ್ಟು ಯೋಜನಾ ವರದಿಗಳನ್ನು ಸಿದ್ಧಪಡಿಸಿ ಮಂಡಿಸಬೇಕಾಗುತ್ತದೆ. ಅಭಿವೃದ್ದಿಯನ್ನು ಮೂಲ ಧ್ಯೇಯವಾಗಿರಿಸಿಕೊಂಡು ಬಜೆಟ್‍ನ್ನು ಮಂಡಿಸುತ್ತಾರೆ. ಆದರೆ ಬಜೆಟ್ ಮಂಡನೆಯಾದ ಕ್ಷಣವೇ ಅದು ಹೇಗಿದೆ ಎಂಬುದನ್ನು ಕೂಡಾ ನೋಡದೇ ಏಕಾಏಕಿ ಟೀಕಿಸುತ್ತಾರೆ.
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಇದು ರಾಷ್ಟ್ರೀಯ ರಾಜಕೀಯ ಪಕ್ಷಗಳು. ಇವುಗಳಿಗೆ ತಮ್ಮದೇ ಆದ ರಾಜಕೀಯ ಜವಾಬ್ದಾರಿಗಳಿರುತ್ತವೆ. ಇಷ್ಟು ಇದ್ದರೂ ಇದರ ಕೆಲವು ಪ್ರಚಾರ ಪ್ರಿಯ ನಾಯಕರು ಬಜೆಟ್‍ನ್ನು ಟೀಕಿಸುವುದು ಎಷ್ಟು ಸರಿ? ಬಜೆಟ್ ಎಂದರೆ ಹೀಗೂ ಉಂಟೇ ಎಂಬ ವಿಷಯ ಜನಚರ್ಚೆಗೆ ಗ್ರಾಸವಾಗಿದೆ.

Read More News

Scroll to Top