ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರ

97.6K Views 10 Jan 2026

ಪುಣೆ: ಬಂಟ್ಸ್ ಅಸೋಸಿಯೇಶನ್ ಪುಣೆ ವತಿಯಿಂದ ಸಮಸ್ತ ಬಂಟ ಬಾಂಧವರಿಗಾಗಿ ಮಲ್ಪಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ. 11ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಕ್ಯಾಂಪಸ್‍ನ ಗುರುನಾನಕ್ ಮೆಡಿಕಲ್ ಫೌಂಡೇಶನ್‍ನ ಗುರುನಾನಕ್ ದರ್ಬಾರ್‍ಹಾಲ್ (ಹಾಲಿವುಡ್ ಗುರುದ್ವಾರ)ನಲ್ಲಿ ಆಯೋಜಿಸಲಾಗಿದೆ.
ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಶಿಬಿರದಲ್ಲಿ ಮಲ್ಪಿಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ ಮಕ್ಕಳ ರೋಗ ತಪಾಸಣೆ, ನೇತ್ರ, ದಂತ ತಪಾಸಣೆ, ಔಷಧ ಮತ್ತು ರೋಗಿಗಳಿಗೆ ಉಚಿತ ಇಸಿಜಿ ಮತ್ತು ಉಚಿತ ಮಧುಮೇಹ ತಪಾಸಣೆ ನಡೆಯಲಿದೆ.
ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಸಂಯೋಜನೆಯಲ್ಲಿ ಶಿಬಿರ ನಡೆಯಲಿದೆ.


ಶಿಬಿರದಲ್ಲಿ ವೈದ್ಯಕೀಯ ಸಲಹೆಗಾರ ಸಮಿತಿಯ ಪ್ರಮುಖರಾದ ಡಾ| ಹಂಸರಾಜ್ ಶೆಟ್ಟಿ ಎಂಬಿಇ, ಡಾ| ಸಂಜಯ್ ಕುಲಕರ್ಣಿ, ಡಾ| ಸುಜಯ್ ಹೆಗ್ಡೆ, ಡಾ| ಜ್ಯೋತಿ ಶೆಟ್ಟಿ, ಡಾ| ಪ್ರವೀಣ್ ಕುಮಾರ್ ಆರ್. ಶೆಟ್ಟಿ, ಡಾ| ವಿವೇಕ್ ಹೆಗ್ಡೆ, ಡಾ| ಸಂಜಯ್ ತೆಕಪಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರಾದ ಡಾ| ಚಿತ್ತರಂಜನ್ ಶೆಟ್ಟಿ, ಡಾ| ಸುಧಾಕರ್ ಶೆಟ್ಟಿ, ಡಾ| ಉರ್ವಿ ಕೊಠಾರಿ, ಡಾ| ರೋಬರ್ಟ್ ಲೋಬೊ, ಡಾ| ವಿಕಾಸ್ ಮೆಂತೋಲಿ, ಡಾ| ಸಮಿತಾ ಮೂಲಾನಿ, ಡಾ| ಸತ್ಯಶೀಲಾ ನಾೈಕ್ ಪಾಲ್ಗೊಂಡು ಸಲಹೆ ನೀಡಲಿದ್ದಾರೆ.
ವಿವಿಧ ವಿಭಾಗಗಳ ವೈದ್ಯರು ಪಾಲ್ಗೊಂಡು ಆರೋಗ್ಯ ತಪಾಸಣೆಗೈದು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ ರೋಹಿತ್ ಶೆಟ್ಟಿ (9960337625), ಡಾ| ಸುಧಾಕರ್ ಶೆಟ್ಟಿ (9657616322), ದಿನೇಶ್ ಶೆಟ್ಟಿ (9823019020) ರೇಷ್ಮಾ ಆರ್. ಶೆಟ್ಟಿ ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸುವಂತೆ ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರಾದ ಡಾ| ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರೇಷ್ಮಾ ಆರ್. ಶೆಟ್ಟಿ ಯುವವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top