ಗಂಗಾಧರ್ ಗಾಂಧೀಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

108.3K Views 10 Nov 2025

ಅನೇಕ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕನ್ನಡ ಕಾರ್ಯಕ್ರಮ,ಕಾನೂನು ಕಾರ್ಯಕ್ರಮ ಆಯೋಜನೆ,ಸಂಘಟಕ ಮತ್ತು ಗಾಯನ ಕ್ಷೇತ್ರದಲ್ಲಿ ನಿರಂತರ 12 ಗಂಟೆಗಳ ಕಾಲ ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ಗಂಗಾಧರ್ ಗಾಂಧೀಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಇತ್ತೀಚಿಗೆ ಪ್ರಧಾನ ಮಾಡಲಾಯಿತು.
ಕೇರಳದ ನೆಲದಲ್ಲಿ ಕನ್ನಡ ಗ್ರಾಮವನ್ನು ಸೃಷ್ಟಿ ಮಾಡಿ ಕನ್ನಡ ಭಾಷೆ ಕನ್ನಡದ ಅನನ್ಯತೆ ಕನ್ನಡದ ಅಸ್ಮಿತೆ ಕುರಿತು ಕಳೆದ 40 ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಾ ,ಅದೇ ಕಾಸರಗೋದಿನ ಕನ್ನಡ ಗ್ರಾಮದಲ್ಲಿ ತನ್ನ 60 ನೇ ಜನ್ಮದಿನ ಆಚರಿಸಿದ ಶಿವರಾಮ ಕಾಸರಗೋಡು ಅವರ ಕನಸಿನ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಯನ್ನು ಕನ್ನಡಕ್ಕಾಗಿ ಕೆಲಸ ಮಾಡಿದ,ಮಾಡುತ್ತಿರುವ 60 ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡವನ್ನೇ ಉಸಿರಾಗಿ ಬದುಕಿ, ಭವಿಷ್ಯದಲ್ಲಿ ಅನೇಕ ಕನ್ನಡ ಪರ ಕಾರ್ಯಕ್ರಮದ ಕನಸು ಹೊತ್ತಿರುವ , ಆನೇಕ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕಾನೂನು ಮಾಹಿತಿ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಕಡೆಗಳಲ್ಲಿ ಆಯೋಜಿಸಿದ, ಇತ್ತೀಚಿಗೆ ನಿರಂತರ 12 ಗಂಟೆಗಳ ಕಾಲ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ಗಂಗಾಧರ್ ಗಾಂಧೀ ಅವರನ್ನು ಶಾಲು ಹೊದಿಸಿ, ಹಾರ ಹಕ್ಕಿ ಪೇಟ ತೊಡಿಸಿ ಅಭಿನಂದನ ಪಲಕ ನೀಡಿ ಅತ್ಯಂತ ಪ್ರೀತಿ ಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಸಾಮಾಜಿಕ ಚಿಂತಕ ವೆಂಕಟ್ರಮಣ ಹೊಳ್ಳ, ಕಾರ್ಯಕ್ರಮದ ರೂವಾರಿ ಶಿವರಾಮ ಕಾಸರಗೋಡು.,ಶಿಕ್ಷಕಿ, ಕವಯಾತ್ರಿ ರೇಖಾ ಸುದೇಶ್ ರಾವ್, ಪತ್ರಕರ್ತ ಜಗದೀಶ್ ಕೂಡ್ಲು ಮತ್ತಿತರರು ಉಪಸ್ಥಿತರಿದ್ದರು.
ಡಾ. ಕೊಳಚಪ್ಪೆ ಗೋವಿಂದ ಭಟ್.

Read More News

Scroll to Top