‘ನವ ಸಂಪನ್ಮೂಲ ವೃತ್ತಿಪರರ ಸದೃಢತೆಗೆ ಯತ್ನ’ -ಎನ್‌ಐಪಿಎಂ ಅಧ್ಯಕ್ಷ ಪಿ.ಆರ್. ಬಸವರಾಜು

111.7K Views 13 Sep 2025

ಮಂಗಳೂರು: ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (ಎನ್‌ಐಪಿಎಂ)ನ ನೂತನ ರಾಷ್ಟ್ರೀಯ ಅಧ್ಯಕ್ಷ ಪಿ.ಆರ್.ಬಸವರಾಜು ಮತ್ತು ಹೆಚ್ಚುವರಿ ಕಾರ್ಯದರ್ಶಿ ರಾಬರ್ಟ್ ಕುಟಿನ್ಹಾ ಅವರು ಎನ್‌ಐಪಿಎಂನ ಮಂಗಳೂರು ಘಟಕಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿದ ಪಿ.ಆರ್.ಬಸವರಾಜು ಮಾತನಾಡಿ ‘ ದೇಶದಲ್ಲಿರುವ ಎಲ್ಲ ಎನ್‌ಐಪಿಎಂ ಘಟಕಗಳನ್ನು
ಕ್ರಿಯಾಶೀಲವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಾನವ ಸಂಪನ್ಮೂಲ ವೃತ್ತಿಪರರನ್ನು ಸದೃಢಗೊಳಿಸಲು ವಿಶೇಷ ತರಬೇತಿ ನೀಡಲಾಗುವುದು ಎಂದರು.
ಹೆಚ್ಚುವರಿ ಕಾರ್ಯದರ್ಶಿ ರಾಬರ್ಟ್ ಕುಟಿನ್ಹಾ ಮಾತನಾಡಿ ‘ ನಾಯಕತ್ವವನ್ನು ಉತ್ತೇಜಿಸುವಲ್ಲಿ ಮಾನವ ಸಂಪನ್ಮೂಲ ವೃತ್ತಿಪರರ ಪಾತ್ರ ಮಹತ್ವ ’ಪಡೆದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ನಿವೃತ್ತ ಪ್ರಾಂಶುಪಾಲೆ ಜೆಸಿಂತಾ ಡಿಸೋಜಾ ಅವರು ರಾಷ್ಟ್ರೀಯ ಘಟಕದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರಿಗೆ ಶುಭ ಹಾರೈಸಿದರು
ಮಂಗಳೂರು ಘಟಕದ ಹಿರಿಯ ಸದಸ್ಯ ಪಿ.ಸುರೇಶ್, ಪಿ.ಪಿ.ಶೆಟ್ಟಿ, ರೋನಾಲ್ಡ್ ಮಸ್ಕರೇನಸ್, ಜತೆ ಕಾರ್ಯದರ್ಶಿ ನಿತಿನ್ ಕೋಶಾಧಿಕಾರಿ
ಭರತ್, ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೀಶ.ಕೆ., ದಿವ್ಯಶ್ರೀ, ರೋಶನ್ ಕ್ಯಾಸ್ಟಲಿನೊ, ಮಹಾಬಲ ಆಳ್ವ ಮತ್ತು ಮನೋಜ್.ಕೆ. ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಪ್ರಭೋದ್ ಕೆ.ಎಸ್.ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್.ಕೆ. ವಂದಿಸಿದರು.ಉಪಾಧ್ಯಕ್ಷೆ ಡಾ.ಸವಿತಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

Scroll to Top