ಶಿಕ್ಷಕ ರಕ್ಷಕ ಸಂಘದ ಸಭೆ

109K Views 17 Jul 2025

ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇದರ ಶಿಕ್ಷಕ ರಕ್ಷಕ ಸಂಘದ ಸಭೆಯು ದಿನಾಂಕ 16/7/2025ರಂದು ಜರಗಿತು.ಶಾಲಾ ಸಂಚಾಲಕರಾದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕ ಶ್ರೀ ಎಲ್ ಜೆ ಫೆರ್ನಾಂಡಿಸ್ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ಮಾತಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ ವಂದನೀಯ ಎಡ್ವಿನ್ ಸಂತೋಷ್ ಮೋನಿಸ್ ರವರು ಸಹಕಾರಕ್ಕಾಗಿ ಹೆತ್ತವರನ್ನು ಅಭಿನಂದಿಸಿದರು.ಶಾಲಾ ಮುಖ್ಯಶಿಕ್ಷಕಿ
ಶ್ರೀಮತಿ ಮಾರ್ಸೆಲಿನ್ ಪಿರೇರ ಸ್ವಾಗತಿಸಿದರು.ಸುಮಲತಾ ವರದಿ ಓದಿದರು.ಶಿಕ್ಷಕಿ ಶ್ರಿಮತಿ ಮೀನಾ ಮೋನಿಸ್ ನಿರ್ವಹಿಸಿದರು.ಸುಪ್ರೀತ ವಂದಿಸಿದರು.ಶ್ರೀ ದಿನೇಶ್ ಗೌಡ,ಪಂಚಾಯತ್ ಸದಸ್ಯ ಶ್ರೀ ಜಿನ್ನು ಮತ್ತು ಶ್ರೀಮತಿ ಗಾಯತ್ರಿ ಉಪಸ್ಥಿತರಿದ್ದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top