ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕ

94.9K Views 26 Jun 2025

ಮಂಗಳೂರು: ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ದೇರೆಬೈಲ್‌ ಘಟಕವು 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಜೂನ್‌ 28 ರಂದು ಸಂಜೆ 5 ಗಂಟೆಗೆ ದೇರೆಬೈಲ್‌ ಮೋಸ್ಟ್ ಹೋಲಿ ರೆಡೀಮರ್‌ ಚರ್ಚ್‌ ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಚರ್ಚ್ ನ ಗೋಲ್ಡನ್‌ ಜ್ಯೂಬಿಲಿ ಹಾಲ್‌ ನಲ್ಲಿ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮ ನಡೆಯಲಿದೆ.
ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಡಾ. ಜೋಸೆಫ್ ಮಾರ್ಟಿಸ್‌ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಘಟಕದ ಅಧ್ಯಕ್ಷ ನೆಲ್ಸನ್‌ ಕ್ಯಾಸ್ಟೆಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ವಿಗಾರ್‌ವಾರ್‌ ವಂದನೀಯ ಫಾ. ಜೇಮ್ಸ್ ಡಿ’ಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಫೆಡ್ರಿಕ್‌ ಮೊಂತೇರೊ, ಸ್ಥಾಪಕ ಆಧ್ಯಾತ್ಮಿಕ ನಿರ್ದೇಶಕ ಫೆರ್ಮಾಯ್‌ ಚರ್ಚ್ ಧರ್ಮಗುರು ವಂದನೀಯ ಫಾ. ಮಾರ್ಕ್ ಕ್ಯಾಸ್ಟೆಲಿನೊ, ಕ್ಯಾಥೊಲಿಕ್‌ ಸಭಾ ಮಂಗಳೂರು ಪ್ರದೇಶ್‌ ಅಧ್ಯಕ್ಷ ಸಂತೋಷ್‌ ಡಿ’ಸೋಜಾ, ದೇರೆಬೈಲ್‌ ಚರ್ಚ್ ಸಹಾಯಕ ಗುರು ವಂದನೀಯ ಫಾ. ನೆಲ್ಸನ್‌ ಸ್ಟೀವನ್‌ ಪೆರಿಸ್‌ ಅವರು ಉಪಸ್ಥಿತರಿರುವರು.
ಕ್ಯಾಥೊಲಿಕ್‌ ಸಭಾ ಸಿಟಿ ವಲಯದ ಅಧ್ಯಕ್ಷೆ ಹಾಗೂ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ದೇರೆಬೈಲ್‌ ಚರ್ಚ್ ಉಪಾಧ್ಯಕ್ಷೆ ಶೀಲಾ ಡಿ’ಸೋಜಾ, ಕಾರ್ಯದರ್ಶಿ ಡೆನ್ಝಿಲ್‌ ಪಿಂಟೊ, ಸರ್ವ ಅಯೋಗಗಳ ಸಂಯೋಜಕ ಆನಿಲ್‌ ಪತ್ರಾವೊ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕದ ಅದ್ಯಕ್ಷ ನೆಲ್ಸನ್‌ ಕ್ಯಾಸ್ಟೆಲಿನೊ, ಕಾರ್ಯದರ್ಶಿ ಶೈಲಾ ನೊರೊನ್ಹಾ ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಂಚಾಲಕ ವಿಕ್ಟರ್‌ ಕೊರೆಯಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top