ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

8K Views 1h ago

ಮಂಗಳೂರು/ಅಬುಧಾಬಿ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ, ವಿಶ್ವ ತುಳು ಆಯನೋದ ಅಂತರಾಷ್ಟ್ರೀಯ ಗೌರವಾಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸರ್ಕಾರಿ ನಾಮನಿರ್ದೇಶಿತ ಸದಸ್ಯ ಸರ್ವೋತ್ತಮ ಶೆಟ್ಟಿ ಅವರ ಬದುಕು, ಸಾಧನೆ, ಹೋರಾಟದ ಕಥೆ ರಾಷ್ಟ್ರ-ಅಂತರಾಷ್ಟ್ರೀಯ ಜನ ಮಾನಸದಲ್ಲಿ ಬಹು ದೊಡ್ಡ ಸುದ್ದಿಯಾಗಿದೆ.ಅವರು ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಮಹಾನ್ ಸಾಧಕ, ಅಜಾತ ಶತ್ರು, ಬಹುಮುಖ ಪ್ರತಿಭೆ .ಸಮಾಜಕ್ಕೆ ನಿಸ್ವಾರ್ಥವಾಗಿ ತನ್ನನ್ನು ಸಕ್ರಿಯವಾಗಿಸಿದ ತುಳುನಾಡಿನ ಅಮೂಲ್ಯ ಬಂಟ ರತ್ನವಾಗಿದ್ದಾರೆ. ಸರ್ವೋತ್ತಮ ಶೆಟ್ಟಿ*- -1980ರ ದಶಕದಲ್ಲಿ ಉದ್ಯೋಗ ಅರಸಿ ಅಬುಧಾಬಿಗೆ ತೆರಳಿದ ಕರಾವಳಿ ಮೂಲದ ಈ ಯುವಕ, ಇಂದು UAE ಯಲ್ಲಿ ಕನ್ನಡಿಗರಿಗೆ ಅನಿವಾರ್ಯ ನಾಯಕರಾಗಿದ್ದಾರೆ. ಅವರೇ ನಮ್ಮ ಎಲ್ಲರ ಪ್ರೀತಿಯ ಕರುಣಾಮಯಿ, ವಿಶ್ವ ಸಮಾಜ ಬಂಧು,, ಜಗತ್ತಿನಲ್ಲಿ ವಿಶೇಷ ಮತ್ತು ಮಹತ್ಸಾಧನೆ ಮಾಡಿದ ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿ.
“ಸಂಘಟನಾ ಚತುರ: ಸರ್ವೋತ್ತಮ ಶೆಟ್ಟಿ ಅವರು ಅಬುಧಾಬಿ ಕರ್ನಾಟಕ ಸಂಘವನ್ನು ಕಟ್ಟಿ ಬೆಳೆಸಿ, ಸಾವಿರಾರು ಕನ್ನಡಿಗರನ್ನು ಒಂದುಗೂಡಿಸಿದ ಅದ್ವಿತೀಯ ಸಂಫಟನಾ ರೂವಾರಿಯಾಗಿದ್ದಾರೆ.

  • ಭಾಷಾ ಪ್ರೇಮಿ: ತುಳು ಭಾಷೆಯ ಉಳಿವಿಗಾಗಿ 2018ರಲ್ಲಿ ದುಬೈನಲ್ಲಿ ವಿಶ್ವ ತುಳು ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಮುಲ್ಕಿ, ಬದಿಯಡ್ಕ, ಆಡ್ಯಾರ್ ನಲ್ಲಿ ನಡೆದ ಸಮ್ಮೇಳನಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
  • ಸರ್ಕಾರಿ ಮಾನ್ಯತೆ: ಇದೇ ಕಾರಣಕ್ಕೆ ಹಲವು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಆದೇಶದ ಮೇರೆಗೆ ಅವರನ್ನು ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಿಸಿತ್ತು. ಇದೀಗ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸರಕಾರಿ ನಾಮ ನಿರ್ದೇಶತ ಸದಸ್ಯರಾಗಿದ್ದಾರೆ
  • ಸಮಾಜ ಸೇವಕ: ರಕ್ತದಾನ ಶಿಬಿರ, ಆರೋಗ್ಯ ಜಾಗೃತಿ, ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವು – ಹೀಗೆ ನೂರಾರು ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದ್ದಾರೆ.
  • ಕಲಾವಿದ: ಚಾರಿತ್ರಿಕ, ಕೌಟುಂಬಿಕ ನಾಟಕಗಳಲ್ಲಿ ಅಭಿನಯ, ತಮ್ಮ ಗಟ್ಟಿ ಧ್ವನಿಯಿಂದ ಕಾರ್ಯಕ್ರಮ ನಿರೂಪಣೆ – ಅವರೊಬ್ಬ ಬಹುಮುಖ ಪ್ರತಿಭೆ.

ಸಂದರ್ಶನದಲ್ಲಿ ಏನು ಹೇಳಿದರು?

“ನಾನು ಬೆಳೆದು ಬಂದ ರೀತಿ, ಕಾಲೇಜು ದಿನಗಳಿಂದಲೇ ಕಲೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿದೇಶದಲ್ಲಿ ಕನ್ನಡ ಉಳಿಸುವ ಸವಾಲು”ಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ಸ್ಫೂರ್ತಿ ಇಬ್ಬರು ಮಹಾನಾಯಕರ ಯಾರು ಎಂದು ಅವರು ಹೇಳಿದ್ದಾರೆ:

  1. ವಿಶ್ವ ನಾಯಕ ನೆಲ್ಸನ್ ಮಂಡೇಲಾ – ವರ್ಣಭೇದ ನೀತಿ ವಿರುದ್ಧ ಹೋರಾಡಿದ ಛಲಕ್ಕಾಗಿ ತನಗೆ ಸ್ಫೂರ್ತಿಯಾಗಿದ್ದಾರೆ ಎಂದ ಸರ್ವೋತ್ತಮ ಶೆಟ್ಟಿ.
  2. ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿ – UAE ಕನ್ನಡಿಗರ ಪೋಷಕರು, ಹೆಮ್ಮೆಯ ತುಳುವ.ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರ ಜೀವನಾನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿ ಕೊಂಡಿದ್ದರು

ಸರ್ವೋತ್ತಮ ಶೆಟ್ಟಿಯವರ ಸಾಧನೀಯ ಹೆಜ್ಜೆಗಳು. Leader ship & SERVICE (ನಾಯಕತ್ವ ಮತ್ತು ಸೇವೆ):*

  • 1998 ರಿಂದ ಅಬುಧಾಬಿ ಇಂಡಿಯನ್ ಸ್ಕೂಲ್ ನ Board of Director
  • UAE,ಬಂಟ್ಸ್ ಸಂಘಟನೆಯ Patron ಆಗಿ 48 ವರ್ಷಗಳ ಸುದೀರ್ಘ ಸೇವೆ
  • 1981 ರಿಂದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಅವಿರತ ಸೇವೆ
  • ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, UAE ನ ಅಧ್ಯಕ್ಷ,
  • ಇಂಡಿಯನ್ ಬಿಸಿನೆಸ್ & ಪ್ರೊಫೆಷನಲ್ ಗ್ರೂಪ್, ಅಬುಧಾಬಿಯ ಕಾರ್ಯಕಾರಿ ಸಮಿತಿ ಸದಸ್ಯ.
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ NRI ಸದಸ್ಯ

HONORS & RECOGNITIONS (ಗೌರವ ಮತ್ತು ಪ್ರಶಸ್ತಿಗಳು):

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1998 ), ಹೊರನಾಡು ಕನ್ನಡಿಗರಾಗಿ ಗೌರವ.
  • ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ 2008
  • ಮಯೂರ ವಿಶ್ವ ಕನ್ನಡಿಗ ಪ್ರಶಸ್ತಿ 2017
  • Lifetime Achievement Award 2018
  • ಸಮುದಾಯ ಮತ್ತು ಸಾಂಸ್ಕೃತಿಕ ಸೇವೆಗಾಗಿ .15ಕ್ಕೂ ಹೆಚ್ಚು ಜಾಗತಿಕ ಮನ್ನಣೆಗಳು

CULTURAL CONTRIBUTION (ಸಾಂಸ್ಕೃತಿಕ ಕೊಡುಗೆ):

  • 30+ ವರ್ಷಗಳಿಂದ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ತ್ರೋಬಾಲ್ ಪಂದ್ಯಾವಳಿಯ ಪ್ರವರ್ತಕರಾಗಿ ಪ್ರೋತ್ಸಾಹ
  • ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದು ಹೋರಾಟ

FAMILY (ಕುಟುಂಬ): ಪತ್ನಿ ಉಷಾ ಮತ್ತು ಮಕ್ಕಳಾದ ಸಮರ್ಥ್ & ಸಂಯುಕ್ತಾ ಅವರೊಂದಿಗೆ ಸಂತೃಪ್ತ ಜೀವನ.

ಸರ್ವೋತ್ತಮ ಶೆಟ್ಟಿ – ಹುಟ್ಟೂರಿನಿಂದ ಅಬುಧಾಬಿಯ ಸಿಂಹಾಸನದವರೆಗೆ!*

ಹುಟ್ಟೂರು ಮತ್ತು ಬಾಲ್ಯ:

  • ಹುಟ್ಟೂರು: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಪುಟ್ಟ ಹಳ್ಳಿ ಪಾರೀಕ/ಪರೀಕ (Pareeka)
  • ತಂದೆ-ತಾಯಿ: ಮಟ್ಟಾರು ಪರಾರಿ ಸೂರುಪ್ಪ ಶೆಟ್ಟಿ ಮತ್ತು ಪಾರೀಕ ಸರಸ್ವತಿ ಹೆಗಡೆ ದಂಪತಿಯ ಪುತ್ರ
  • ಬಾಲ್ಯ: ಅತ್ಯಂತ ಸರಳ, ಮಧ್ಯಮ ವರ್ಗದ ಬಂಟ ಕುಟುಂಬದಲ್ಲಿ ಬೆಳೆದರು. Down to earth ಜೀವನ ಶೈಲಿ, ಸ್ಪಷ್ಟ ಮಾತುಗಾರಿಕೆ ಅವರ ಬಾಲ್ಯದಿಂದಲೇ ಇದ್ದ ಗುಣ f2fac5bd

ಶಿಕ್ಷಣದ ಹೋರಾಟ – Earn and Learn:

  • ಪ್ರಾಥಮಿಕ ಮತ್ತು ಪಿಯು ಶಿಕ್ಷಣವನ್ನು ಪೆರ್ಡೂರು ಮತ್ತು ಹಿರಿಯಡ್ಕದಲ್ಲಿ ಮುಗಿಸಿದರು
  • ಉದ್ಯೋಗ ಅರಸಿ ಮುಂಬೈಗೆ ತೆರಳಿದರು. ಅಲ್ಲಿ ಹೋಟೆಲ್ ಒಂದರಲ್ಲಿ ದುಡಿದು ಜೀವನ ಸಾಗಿಸಿದರು
  • ನಂತರ Solicitor Office ನಲ್ಲಿ ಕೆಲಸ ಮಾಡಿದರು. ಕೆಲಸ ಮಾಡುತ್ತಲೇ Bombay University ನಿಂದ Government Commercial Diploma ಪಡೆದರು
  • R.A. Podar College of Commerce & Economics, Mumbai ನಲ್ಲಿ B.Com ಪದವಿಯನ್ನು 1978ರಲ್ಲಿ ಪಡೆದರು
  • ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ಮಿಂಚಿದರು – 1977ರಲ್ಲಿ R.A. Podar College ನಿಂದ University of Bombay Senate ಗೆ Student Representative ಆಗಿ ಆಯ್ಕೆಯಾಗಿದ್ದರು
  • ಮುಂಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ “ಕಲಾಜಗತ್ತು” (Kalajagatthu) ಎಂಬ ನಾಟಕ ತಂಡವನ್ನು ಕಟ್ಟಿದ್ದರು
  • “ಹಗ್ಗದ ಕೊನೆ” ಎಂಬ ಪ್ರಸಿದ್ಧ ನಾಟಕದಲ್ಲಿ ಅಭಿನಯಿಸಿ ಕನ್ನಡ ಕಲಾ ಲೋಕದಲ್ಲಿ ಹೆಸರು ಮಾಡಿದ್ದರು. 5c3ff2fa

ಅಬುಧಾಬಿ ಪಯಣ:

  • ಸುಮಾರು 30 ವರ್ಷಗಳ ಹಿಂದೆ ಅಬುಧಾಬಿಗೆ ತೆರಳಿ, ತಮ್ಮದೇ ಆದ Business ಕಟ್ಟಿಕೊಂಡು, ಗಟ್ಟಿ ಆಡಳಿತಗಾರ, ಜಾಣ ಉದ್ಯಮಿ ಎಂದು ಹೆಸರು ಪಡೆದರು
  • INDIA SOCIAL & CULTURAL CENTRE (ISCC) ನ ಮೊದಲ ಕನ್ನಡಿಗ ಅಧ್ಯಕ್ಷರಾಗಿ ಎರಡು ಬಾರಿ (1999-2000 ಮತ್ತು 2002-2003) ಆಯ್ಕೆಯಾದ ಅಪರೂಪದ ಸಾಧನೆ ಮಾಡಿದ್ದಾರೆ
  • ಅಬುಧಾಬಿ ಇಂಡಿಯನ್ ಸ್ಕೂಲ್ ನ Board of Governors ಸದಸ್ಯರಾಗಿ 1997 ರಿಂದ ಸೇವೆ.

ತುಳುನಾಡಿನ ಹೆಮ್ಮೆಯ ಸುಪುತ್ರ ಸರ್ವೋತ್ತಮ ಶೆಟ್ಟಿ ಅವರ ಅತ್ಯುನ್ನತ ಸಾಧನೆಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಿ ಎಂದು Mp MLA’s news ಕೇಂದ್ರ ಸರಕಾರದ ಗಮನಕ್ಕೆ ತರುತ್ತದೆ

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top