ಮಣಿಪಾಲ ಆರೋಗ್ಯ ಕಾರ್ಡ್ 2026: ನೋಂದಣಿಗೆ ಆ. 31 ಕೊನೆಯ ದಿನ

109.9K Views 28 Aug 2026

ಮಂಗಳೂರು,ಆ.27;ಮಣಿಪಾಲ ಆರೋಗ್ಯ ಕಾರ್ಡ್ 2026,ನೋಂದಣಿಗೆ ಆ. 31 ಕೊನೆಯ ದಿನವಾಗಿರುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಏಜುಕೇಶನ್ (ಮಾಹೆ) ಮಂಗಳೂರು ಕ್ಯಾಂಪಸ್‌ನ ಸಹ-ಕುಲಾಧಿಪತಿಗಳಾದ ಡಾ. ದಿಲೀಪ್ ಜಿ. ನಾಯಕ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಸಾರ್ವಜನಿಕರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ದೃಷ್ಟಿಕೋನದ ಪ್ರಕಾರ ,ಸಮಾಜದ ಪ್ರತಿಯೊಂದು ವರ್ಗಕ್ಕೂ, ವಿಶೇಷವಾಗಿ ಗ್ರಾಮೀಣ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವುದು ಅವರ ಧ್ಯೇಯ. ಮಾಹೆ ಮಣಿಪಾಲದ ಪ್ರಸ್ತುತ ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ 2000ನೇ ಇಸವಿಯಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ಕಳೆದ 26 ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆರಂಭಿಕ ವರ್ಷದಲ್ಲಿ ಕೇವಲ 3,200 ಕುಟುಂಬಗಳನ್ನು ಮಾತ್ರ ಹೊಂದಿದ್ದ ಈ ಯೋಜನೆಯು ಈಗ ಗಣನೀಯವಾಗಿ ವಿಸ್ತರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 2 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಪ್ರಸ್ತುತ ಕರ್ನಾಟಕ ಮತ್ತು ಕೇರಳ ರಾಜ್ಯಗಳಾದ್ಯಂತ ಸುಮಾರು 6.5 ಲಕ್ಷ ಸದಸ್ಯರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ.

ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಮಾಹೆ ಮಂಗಳೂರು ಕ್ಯಾಂಪಸ್ ನ ಸಹ ಕುಲಾಧಿಪತಿ ಡಾ. ದಿಲೀಪ್ ಜಿ. ನಾಯಕ್ (ಎಡದಿಂದ 3ನೇ) ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. (ಬಲ ತುದಿ) ಅವರಿಗೆ ಮಂಗಳೂರಿನಲ್ಲಿ ಬುಧವಾರ, ಆ.27 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಚಿತ್ರದಲ್ಲಿ (ಎಡದಿಂದ) ಮಾರ್ಕೆಟಿಂಗ್ ಸಹ ವ್ಯವಸ್ಥಾಪಕ ಗಣೇಶ್ ಹೆಗ್ಡೆ, ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ, ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ. ಮತ್ತು ಗ್ರೂಪ್ ಮ್ಯಾನೇಜರ್ ರವಿರಾಜ್ ಇದ್ದಾರೆ.


ಕಾರ್ಡ್ ಹೊಂದಿರುವವರು ಕೆಎಂಸಿ ಆಸ್ಪತ್ರೆ ಅತ್ತಾವರ,ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ), ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ,,ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಮಣಿಪಾಲ ಮತ್ತು ಮಂಗಳೂರಿನ ಎರಡು ದಂತ ಮಹಾವಿದ್ಯಾಲಯಗಳಲ್ಲಿ ವೈದ್ಯಕೀಯ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.ನೋಂದಣಿ ಬಳಿಕ 2027ರ ಆಗಸ್ಟ್ 15ರವರೆಗೆ ಮಾನ್ಯವಾಗಿರುತ್ತವೆ ಬಿಲ್ ಮೇಲೆ ಶೇ. 25ರವರೆಗೆ ರಿಯಾಯಿತಿ ಪಡೆಯಬಹುದು ಎಂದರು,ಸದಸ್ಯತ್ವದ ಬಗ್ಗೆ ಮಾಹಿತಿ ಕೆಎಂಸಿ ಅತ್ತಾವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ ಎಂ ಮಾತನಾಡುತ್ತಾ,ವೈಯಕ್ತಿಕ ಸದಸ್ಯತ್ವ ರೂ.350.00 ,ಸಂಗಾತಿ ಮತ್ತು 25ವರ್ಷ ದೊಳಗಿನ ಅವಿವಾಹಿತ ಮಕ್ಕಳ ಕೌಟುಂಬಿಕ ಸದಸ್ಯತ್ವ ಶುಲ್ಕ ರೂ700.00,ಇದಲ್ಲದೆ 25 ವರ್ಷದೊಳಗಿನ ಯಾವುದೇ ಸಂಖ್ಯೆಯ ಅವಿವಾಹಿತ ಮಕ್ಕಳು ಹಾಗೂ ಅತ್ತೆ ಮಾವಂದಿರು ಸೇರಿದಂತೆ ನಾಲ್ಕು ಪೋಷಕರನ್ನು ಒಳಗೊಂಡ ಕೌಟುಂಬಿಕ ಪ್ಲಸ್ ಸದಸ್ಯತ್ವ ರೂ.900.00ಕ್ಕೆ ಲಭ್ಯವಿದೆ ಎಂದರು‌.ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ಮಾತನಾಡುತ್ತಾ,ಕಾರ್ಡ್ ಹೊಂದಿರುವವರು ಶೇ 50 ಸಮಾಲೋಚನಾ ಶುಲ್ಕದ ಮೇಲೆ ರಿಯಾಯಿತಿ, ಲ್ಯಾಬ್ ಪರೀಕ್ಷೆ ಯಲ್ಲಿ ಶೇ.20 ರಿಯಾಯಿತಿ,ಸಿ.ಟಿ,ಎಂಆರ್ಐ,ಅಲ್ಟ್ರಾಸೌಂಡ್, ಎಕ್ಸರೇ,ರೇಡಿಯಾಲಜಿ ಪರೀಕ್ಷೆ ಮೇಲೆ ಶೇ,20 ,ಹೊರರೋಗಿ ಔಷಧಿ ಮೇಲೆ ಶೇ,10 ಮತ್ತು ವಿವಿಧ ವಾರ್ಡ್ ಗಳಲ್ಲಿ ಒಳರೋಗಿ ಬಿಲ್ ಮೇಲೆ ಶೇ.25 ರಿಯಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಅಪರೇಷನ್ಸ್ ವಿಭಾಗದ ಗ್ರೂಪ್ ಮ್ಯಾನೇಜರ್ ರವಿರಾಜ್ ಮಾತನಾಡಿ, 28 ವರ್ಷಗಳಿಂದ ನಾವು ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಆರೋಗ್ಯದ ನೆರವು ನೀಡಲಾಗಿದೆ ಮುಖ್ಯವಾಗಿ ಸಾರ್ವಜನಿಕರು ಕೆಎಂಸಿ ಆಸ್ಪತ್ರೆ ಅತ್ತಾವರ,ದುರ್ಗಾ ಸಂಜೀವಿನಿ ಮಣಪಾಲ ಆಸ್ಪತ್ರೆ ಕಟೀಲು ಹಾಗೂ ಪುದು ಕನ್ನಡ ಜಿಲ್ಲೆ ಮತ್ತು ಉತ್ತರ ಕೇರಳದಾದ್ಯಂತ ಅಧಿಕೃತ ಎಜೆಂಟ್‌ಗಳ ಮೂಲಕ ಸದಸ್ಯತ್ವ ಪಡೆಯಬಹುದು,ಮಾಹಿತಿಗಾಗಿ 7022078002, 0824 2285214 ಸಂಖ್ಯೆಯ ಮೂಲಕ ಕರೆಮಾಡಿ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಗಣೇಶ್ ಹೆಗ್ಡೆ, ಉಪಸ್ಥಿತರಿದ್ದರು.

Read More News

Scroll to Top