ಭ್ರಾತೃತ್ವದ ಸಂದೇಶ ಸಾರಿದ ಪೋಪ್ ಪ್ರಾನ್ಸಿಸ್ : ಡಾ.ಸುರೇಶ್ ನೆಗಳಗುಳಿ

103.2K Views 28 Apr 2025

ಮಂಗಳೂರು: ಕೆಥೋಲಿಕ್ ಕ್ರೈಸ್ತರ ಪರಮೋಚ್ಚ ‌ಧರ್ಮಗುರು ಪೋಪ್ ಫ್ರಾನ್ಸಿಸ್ ‌ಅವರಿಗೆ
ಪಿಂಗಾರ ಬಳಗದ ವತಿಯಿಂದ ಗೌರವ ನಮನ ಕಾರ್ಯಕ್ರಮ
ನಗರದ ಬಿಷಪ್ ಹೌಸ್ ಚರ್ಚ್ ಬಿಲ್ಡಿಂಗ್ ನಲ್ಲಿ ನಡೆಯಿತು.
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ.ಸುರೇಶ ನೆಗಳಗುಳಿ ಮಾತನಾಡಿ ” ಮನುಕುಲದ ಸೇವೆಗೆ ಬದುಕು ಮುಡಿಪಾಗಿರಿಸಿದ ಪೋಪ್ ಫ್ರಾನ್ಸಿಸ್ ಅವರು ವಿಶ್ವ ಭ್ರಾತೃತ್ವದ ಸಂದೇಶ ಪಸರಿಸಿದ ಮಹಾನ್ ಚೇತನ” ಎಂದರು.


ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ” ಶಾಂತಿ, ಸಹಬಾಳ್ವೆಯ ಜತೆಗೆ ಪರಿಸರ ಜಾಗೃತಿ ಮೂಡಿಸಿದ ಪೋಪ್ ಫ್ರಾನ್ಸಿಸ್ ತಮ್ಮ ಸೇವೆಯ ಮೂಲಕ ವಿಶ್ವದೆಲ್ಲೆಡೆ ಜನತೆಯ ಪ್ರೀತಿ ಸಂಪಾದಿಸಿದ್ದರು ಎಂದರು.
ಅನುಪಮ ಮಾಸಿಕದ ಮಹಮ್ಮದ್ ಮೊಹಿಸಿನ್, ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ಕೆ.ವಸಂತ ರಾವ್ ನುಡಿ ನಮನ ಸಲ್ಲಿಸಿದರು.
ಉದ್ಯಮಿ‌ ಎಡೋಲ್ಫ ಡಿಸೋಜ, ಗೋಲ್ಡಿನ್ ಡಿಸೋಜ, ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.
ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.
ಪಿಂಗಾರ ಬಳಗದ ಮುಖ್ಯಸ್ಥ‌ ರೇಮಂಡ್ ಡಿಕೂನಾ ಸ್ವಾಗತಿಸಿದರು.
ರಿಯಾನಾ ಡಿಕೂನಾ ಕಾರ್ಯಕ್ರಮ ನಿರೂಪಿಸಿದರು:

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top