ಇಂಜಿನೀಯರ್ ನಾಗೇಂದ್ರ ಅವರಿಗೆ ವರ್ಷದ ಸಾಧಕ,(Achiever of the year) ಪ್ರಶಸ್ತಿ ಪ್ರಧಾನ

117.2K Views 26 Apr 2025

ಮಂಗಳೂರಿನ ಕೆನರಾ ಕ್ಲಬ್ ಸಭಾಂಗಣದಲ್ಲಿ,ರೋಟರಿ ಇಂಟರ್ ನ್ಯಾಶನಲ್,ಮಂಗಳೂರು ಸೆಂಟ್ರಲ್ ಕ್ಲಬ್ ಆಯೋಜಿಸಿದ್ದ, ಸಮಾರಂಭ ಕಾರ್ಯಕ್ರಮದಲ್ಲಿ ಇಂಜೀನೀಯರ ನಾಗೇಂದ್ರ ಅವರಿಗೆ ವರ್ಷದ ಸಾಧಕ (Achiever of the year )ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಇವರು ಕಳೆದ ವರ್ಷ ಪಡೆದ ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಜಿಲ್ಲಾ ಪ್ರಶಸ್ತಿ ಕಲಾರತ್ನ ಪ್ರಶಸ್ತಿ ಹಾಗೂ ರೋಟರಿ ಸೇವಾಕಾರ್ಯಗಳನ್ನು ಗುರುತಿಸಿ ವರ್ಷದ ಸಾಧಕ (Achiever of the year ) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಈ ಸಂಧರ್ಭ ದಲ್ಲಿ ಮಾಜಿ ಗೌರ್ನರ್ ಡಾ| ದೇವದಾಸ್ ರೈ, ಅಧ್ಯಕ್ಷರಾದ ಬ್ರಾಯ್ನ್ ಪಿಂಟೋ, ಸೂರಜ್ ಇಂಟರ್ನ್ಯಾಶನಲ್ ಸ್ಕೂಲ್ ನ ಮಾಲಕರಾದ ಮಂಜುನಾಥ್ ರೇವಣ್ಕರ್,ಅಥೇನಾ ಹಾಸ್ಪಿಟಲ್ ನ ಮಾಲಕರಾದ ಆರ್ ಎಸ್ ಶೆಟ್ಟಿಯಾನ್,ಅಸಿಸ್ಟೆಂಟ್ ಗೌರ್ನರ್ ಕೃಷ್ಣ ಹೆಗ್ಡೆ,ರಾಜ್ ಗೋಪಾಲ್ ರೈ,ರೋನಾಲ್ಡ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಮಾಧ್ಯಮ ಕ್ಷೇತ್ರ ಕ್ಕಾಗಿ ಭಾಸ್ಕರ್ ರೈ ಕಟ್ಟಾ, ಮಿಸಸ್ ಇಂಟರ್ ನ್ಯಾಷನಲ್ ರನ್ನರ್ ಅಪ್ ಆದ ಡಾ / ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ,ಗೋಲ್ಡ್ ಮೆಡಲ್ ಪಡೆದ ಡಾ/ಶ್ರೇಯಾ ರೇವಣ್ ಕರ್, 10ನೇ ರಾಂಕ್ ಪಡೆದ ಡಾ / ಸುಜನ್ ರಾಜ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top