ಉಚಿತ ಆರೋಗ್ಯ ತಪಾಸಣಾ ಶಿಬಿರ

97.4K Views 20 Apr 2025

ಮಂಗಳೂರು,ಎ.20: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ , ಶ್ರೀ ಶಾರದಾ ಪೂಜಾ ಸಮಿತಿ, ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ಹಾಗೂ ಎ ಜೆ ಆಸ್ಪತ್ರೆ ಯ ಜಂಟಿ ಆಶ್ರಯದಲ್ಲಿ ಊರ್ವ ಸ್ಟೋರ್ ನ ಮಾನಸ ಮಂಟಪದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ , ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ಕೆ. ಯಂ .ಹೆಗ್ಡೆ , ಎ ಜೆ ದಂತ ಮಹಾ ವಿದ್ಯಾಲಯದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥೆ ಡಾ .ವಿಜಯ ಹೆಗ್ಡೆ ಹಾಗೂ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ,ಡೆರಿಲ್ ,ಆರ್ ಒ ಟಿ ಮಂಗಳ ಸ್ಫೋರ್ಟ್ಸ್ ಸರ್ಕಲ್ ಊರ್ವ ಸ್ಟೋರ್ ನ ಅಧ್ಯಕ್ಷ. ರಮೇಶ್ ಶೆಟ್ಟಿ ಮಾಜಿ ರೋಟರಿ ಗವರ್ನರ್ ದೇವ ದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್ ಸಲ್ದಾನಾ,ಡೆರಿಲ್ ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ, ಪ್ರಮೀಳಾ ಹೆಗ್ಡೆ, ಗೀತಾ ಬಿ ರೈ ಎ ಜೆ ಆಸ್ಪತ್ರೆ ಯ ವೈದ್ಯರು ಗಳು ಉಪಸ್ಥಿತರಿದ್ದರು. ರೋ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕೆ ಯಂ ಹೆಗ್ಡೆ ರೋಟರಿ ಕ್ಲಬ್ ಹಮ್ಮಿ ಕೊಂಡಿರುವ ಸಾಮಾಜಿಕ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಎ ಜೆ ದಂತ ಮಹಾ ವಿದ್ಯಾಲಯದ ಕ. ಕಮ್ಯುನಿಟಿ ದಂತವೈದ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಶಿಬಿರದ ಮಹತ್ವವನ್ನು ತಿಳಿಸಿದರು.
ರೋ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.
ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣು ತಪಾಸಣೆ , ಅಗತ್ಯ ವಿದ್ದವರಿ ಗೆ ಕನ್ನಡಕ ವಿತರಣೆ, ರಕ್ತ ದೊತ್ತಡ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಯನ್ನು ನೀಡ ಲಾ ಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top