ಬಂಟ್ವಾಳ: ಜನಪ್ರಿಯ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ ಇವರ ಯಕ್ಷ ತಿರುಗಾಟದ 50 ರ ಸುವರ್ಣ ಸರಪಾಡಿ ಸಂಭ್ರಮ ನಾಳೆ (ಜನವರಿ 11 ರಂದು )ಬಿ. ಸಿ. ರೋಡಿನ ಗೋಲ್ಡ್ ಪಾರ್ಕ್ ಚಿಣ್ಣರ ಕಲೋತ್ಸವ ವೇದಿಕೆಯಲ್ಲಿ ನಡೆಯಲಿದೆ.

ಈ ಪ್ರಯುಕ್ತ ದೊಂದಿ ಬೆಳಕಿನಲ್ಲಿ ಒಂದೂವರೆ ಗಂಟೆಯ ಮಹಾ ಸಂಶಪ್ತಕರು ಯಕ್ಷಗಾನ ಪ್ರದರ್ಶನವಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಈ ಹಿಂದೆ ಮಂಗಳೂರು ಟೌನ್ ಹಾಲ್ ನಲ್ಲಿ .Mp mla’s ನ್ಯೂಸ್ ಸೌಹಾರ್ದ ಸಂಗಮದಲ್ಲಿ ಸರಪಾಡಿ ಅಶೋಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಗಿತ್ತು.

ಯಕ್ಷರಂಗದ ಕಲಾಚಕ್ರವರ್ತಿ, ಮಾತಿನ ಮಲ್ಲ, ನಿಸ್ವಾರ್ಥ ಕಲಾವಿದ, ಸಂಘಟಕ, ಅಭಿನಯ ಚಕ್ರವರ್ತಿ ಸರಪಾಡಿ ಅಶೋಕ ಶೆಟ್ಟಿ ಅವರು ಸಮಸ್ತ ತುಳುನಾಡಿನ ಹೆಮ್ಮೆಯ ಸುಪುತ್ರ. ಅವರಿಗೆ mpmla’s ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಆವರು ಶುಭ ಹಾರೈಸಿದ್ದಾರೆ








































































































































































































