ಭಾರತ ಅಕಾಡೆಮಿ ಮಂಗಳೂರಿಗೆ ಎಜುಕೇಶನ್ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ನಂಬರ್ 1 ಸ್ಥಾನ

114.2K Views 8 Jan 2025

ಈ ಪ್ರದೇಶದ ಮೊದಲ ಕೇಂಬಿಡ್ಜ್ ಸಂಯೋಜಿತ ಶಾಲೆಯಾದ ಭಾರತ್ ಅಕಾಡೆಮಿ, ಮಂಗಳೂರು, ಕಲಿಕೆ ಮತ್ತು ಶಿಕ್ಷಣದಲ್ಲಿ ರಾಷ್ಟ್ರದ ಪ್ರಮುಖ ನಿಯತಕಾಲಿಕವಾದ ಎಜುಕೇಶನ್ ಟುಡೆ ನಡೆಸಿದ ಸಮೀಕ್ಷೆಯಲ್ಲಿ “ಸಮಗ್ರ ಶಿಕ್ಷಣಕ್ಕಾಗಿ ಅಂತರರಾಷ್ಟ್ರೀಯ ಪ್ಯಾರಾಮೀಟರ್ ಶ್ರೇಯಾಂಕ” ವಿಭಾಗದಲ್ಲಿ ಭಾರತದಲ್ಲಿ ನಂ. 1 ಸ್ಥಾನ ಪಡೆದಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು 10ನೇ ಡಿಸೆಂಬರ್ 2024 ರಂದು ಹೋಟೆಲ್ ತಾಜ್ ಬೆಂಗಳೂರು ಇಲ್ಲಿ ನೆರವೇರಿತು. ಭಾರತ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ವಿಂಧ್ಯಾ. ಆನಂದ್ ಪೈ ಅವರು ನಿರ್ದೇಶಕರಾದ ಶ್ರೀ ಪ್ರಶಾಂತ್ ಮಲ್ಯ ಮತ್ತು ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ನಾಯಕ್ ಅವರೊಂದಿಗೆ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದರು.
ಈ ಮನ್ನಣೆಯು ಸಮಗ್ರ ಶಿಕ್ಷಣದ ದೃಢವಾದ ಬದ್ಧತೆಗೆ ಮತ್ತು ಭಾರತ್ ಅಕಾಡೆಮಿಯನ್ನು “ದಿ ಸ್ಕೂಲ್ ವಿತ್ ಎ ಡಿಫರೆನ್ಸ್” ಆಗಿ ರೂಪಿಸುವ ನಮ್ಮ ಧೈಯಕ್ಕೆ ಮತ್ತಷ್ಟು ಸಾಕ್ಷಿಯಾಗಿದೆ ಎಂದು ಭಾರತ್ ಅಕಾಡೆಮಿ, ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top