ಇಡೀ ಮಂಗಳೂರಿಗೆ ಬರುವ ಡೆಂಗ್ಯೂ, ಮಲೇರಿಯಾದ ಅಡಗುತಾಣ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್. ಈ ಬಗ್ಗೆ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ಜೆಪ್ಪು ವಾರ್ಡ್ ಕಾರ್ಪೊರೇಟರ್ ಭರತ್ ಕುಮಾರ್ ಎಸ್. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.

95.2K Views 22 Jun 2024

ಪ್ರತ್ಯಕ್ಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು: ರಾಜ್ಯದಲ್ಲೇ ಡೆಂಗ್ಯೂ, ಮಲೇರಿಯಾದಿಂದ ಭೀತಿ ಹುಟ್ಟಿಸುತ್ತಿರುವ ಮಂಗಳೂರಲ್ಲಿ ಇದರ ಅಡಗುತಾಣ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್‌ನಲ್ಲಿದೆಂದು Mp mla’s ನ್ಯೂಸ್‌ಗೆ ಪ್ರತ್ಯಕ್ಷವಾಗಿ ದೊರೆತ ಸಾರ್ವಜನಿಕ ಮಾಹಿತಿಯಾಗಿದೆ.
ಹೌದು, ಕಳೆದ ವರ್ಷ ಉಮೇಶ್ ರವರು ಡೆಂಗ್ಯೂವಿನಿಂದ ಮೃತರಾಗಿದ್ದು,ಇವರು ಜೆಪ್ಪು ಕುಡ್ಪಾಡಿ ನಿವಾಸಿ.
ಆರೋಗ್ಯ ಇಲಾಖೆಯ ಕಾರ‍್ಯಕರ್ತರು ದಿನವೂ ಜೆಪ್ಪು ಕುಡ್ಪಾಡಿ, ಜೆಪ್ಪು ಪರಿಸರಕ್ಕೆ ಬಂದು ಮಲೇರಿಯಾ,ಡೆಂಗ್ಯುವಿದೆ, ಜಾಗರೂಕರಾಗಿರೆಂದು ಮನೆ ಮನೆಗೆ ಭೇಟಿಯಿತ್ತು ಇಲ್ಲಿನ ಜನರ ರಕ್ತಪರೀಕ್ಷೆ ಮಾಡಿಸಿ ಹೋಗುತ್ತಾರೆಯೇ ವಿನಾಃ ಇಲ್ಲಿರುವ ಕೊಳಚೆ ಚರಂಡಿ, ಬಾಯಿ ತೆರೆದ ಡ್ರೈನೇಜ್ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುತ್ತಿಲ್ಲ.


ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ಪರಿಸರಗಳಲ್ಲಿ ಅಪಾಯಕಾರಿ ಡೆಂಗ್ಯೂ ಸೊಳ್ಳೆಗಳಿದ್ದು ಇಲ್ಲಿಂದಲೇ ಡೆಂಗ್ಯೂ ಎಲ್ಲೆಡೆ ಹರಡುತ್ತವೆಂಬ ಸ್ಪಷ್ಟ ಸಂಗತಿ ಬಹಿರಂಗಗೊಂಡಿದೆ.
ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ರಸ್ತೆಗಳು ಮಳೆ ಬಂದರೆ ಚರಂಡಿಮಯವಾಗುತ್ತದೆ. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಗೊಳ್ಳುತ್ತವೆ.
ಈ ರಸ್ತೆಗಳು ನಾದುರಸ್ತಿಯಲ್ಲಿದೆ. ಜನಾರ್ಧನ ಮಂದಿರದ ಬಳಿ ರಸ್ತೆ ಕಾಂಕ್ರೀಟೀಕರಣಗೊಂಡಿಲ್ಲ. ಚರಂಡಿ ದುರ್ನಾತ ಬೀರುತ್ತಿದ್ದು, ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್ ಎಸ್. ಅವರು ಇವುಗಳೆಲ್ಲವೂ ಬರುವ ವರ್ಷದೊಳಗೆ ಸರಿಯಾಗುತ್ತದೆಂದು Mp mla’s ನ್ಯೂಸ್ ಗೆ ತಿಳಿಸಿದ್ದಾರೆ.

ಅಲ್ಲಿ ತನಕ ಇಲ್ಲಿನ ಜನರೇನು ಮಾಡಬೇಕು? ಡೆಂಗೂ ಮಲೇರಿಯಾದಿಂದ ಸಾಯಬೇಕಾ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇಲ್ಲಿರುವ ರಸ್ತೆಗಳ ಅವ್ಯವಸ್ಥೆ ಬಗ್ಗೆ MPMLA’s ನ್ಯೂಸ್ ಬೆಳಕು ಚೆಲ್ಲಿದಾಗ ಜಯಾನಂದ ಅಂಚನ್ ಮೇಯರ್ ಆಗಿದ್ದರು. ಆಗ ಅವರು ಇದನ್ನು ನಿರ್ಲಕ್ಷಿಸಿದ್ದರು. ಅವರ
ನಂತರ ಸುಧೀರ್ ಶೆಟ್ಟಿ ಮೇಯರ್‌ರಾದರು. ಸುಧೀರ್ ಶೆಟ್ಟಿಯವರು ಈ ಬಗ್ಗೆ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಕೆಲವು ವರ್ಷಗಳ ಹಿಂದೆ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಅವರು ಇಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಕಾರ್ಪೊರೇಟರ್ ಮಾಡಿಯೆಂದು ಇಲ್ಲಿ ಮತ ಯಾಚಿಸಿದ್ದರು.
ಅದರಂತೆ,ಬಿಜೆಪಿ ಇಲ್ಲಿ ಗೆದ್ದಿದೆ. ಆದರೆ, ದಿನದಿಂದ ದಿನಕ್ಕೆ ಬಿಗಾಡಾಯಿಸುತ್ತಿರುವ ಡೆಂಗ್ಯೂ ಮಲೇರಿಯಾದ ಸಮಸ್ಯೆಗೆ ಅಡಗುತಾಣವಾಗುತ್ತಿರುವ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ಸಮಸ್ಯೆಗೆ ಯಾರೂ ಕೂಡಾ ಸೂಕ್ತ ಕ್ರಮ ಕೈಗೊಂಡಿಲ್ಲ.
ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸುವಲ್ಲಿ ಶ್ರಮಿಸಿದ್ದಾರೆ. ಜನರ ನಾಡಿ ಮಿಡಿತ ಚೆನ್ನಾಗಿ ಅರಿತಿರುವ ಉತ್ತಮ ಶಾಸಕರೆಂದು ಜನಮನ್ನಣೆ ಗಳಿಸಿರುವ ಅವರು ಇಲ್ಲೊಮ್ಮೆ ಗಮನಹರಿಸಿ ಇಲ್ಲಿನ ನಾದುರಸ್ತಿಯಲ್ಲಿರುವ ರಸ್ತೆಗಳನ್ನು ದುರ್ನಾತ ಬೀರುತ್ತಿರುವ ಚರಂಡಿ ಅವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ಸಕಾಲಿಕ ಕ್ರಮ ಜರುಗಿಸಬೇಕಾಗಿದೆ.
ಚಿತ್ರಗಳು : ಕೃತ್ತಿಕಾಬ್ರಹ್ಮ

Read More News

Scroll to Top