ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ

100.1K Views 9 May 2024

ಕೊಂಚಾಡಿ ಶ್ರೀರಾಮಾಶ್ರಮ ವಿದ್ಯಾ ಸಂಸ್ಥೆಯು
ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡ್ ನಿಂದ ನಡೆಸಲ್ಪಡುತ್ತಿರುವ ಸುಮಾರು 108 ವರ್ಷಗಳ ಕಾಲ ಇತಿಹಾಸವುಳ್ಳ ಒಂದು ವಿದ್ಯಾ ಕಾಶಿ ಯಾಗಿದೆ.
“ಅಳಿಸಲಾಗದ ಸಂಪತ್ತೊಂದಿದ್ದರೆ ಅದು ಆಕ್ಷರ ಸಂಪತ್ತು ಮಾತ್ರ “ಎಂಬ ಸತ್ಯವನ್ನು ಅರಿತುಕೊಂಡಿರುವ ಇಲ್ಲಿನ ಆಡಳಿತ ಮಂಡಳಿಯು ಪರಿಸರದ ವಿದ್ಯಾಕಾಂಕ್ಷಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಗುಣಮಟ್ಟದ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡುತ್ತಾ ಬಂದಿರುವುದು ನಿಜಕ್ಕೂ ಕೊಂಚಾಡಿ ಟ್ರಸ್ಟ್ ಗೆ ಶಿಕ್ಷಣದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ.


ಈ ಶೈಕ್ಷಣಿಕ ಸಾಲಿನಲ್ಲಿ ಶ್ರೀರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿದೆ.
ಇಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಹೊರಬಂದಿದ್ದಾರೆ. ಹಿಂದೆ ಪದವಿಪೂರ್ವ ಫಲಿತಾಂಶದ ಸಂದರ್ಭದಲ್ಲಿ ಶ್ರೀ.ರಾಮಾಶ್ರಮ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶವನ್ನು ತಂದು ಕೊಡುವ ಮೂಲಕ ರಾಜ್ಯದ ಕೆಲವೇ ಕೆಲವು ಗುಣಮಟ್ಟದ ಕಾಲೇಜುಗಳ ಸಾಲಿನಲ್ಲಿ ರಾಮಾಶ್ರಮ ಪದವಿ ಪೂರ್ವ ಕಾಲೇಜು ಮಿಂಚಿತ್ತು.
ಇದೀಗ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡ್ ಹಾಗೂ ಶಾಲಾ ಶಿಕ್ಷಕರ ಪರಿಶ್ರಮದಿಂದ ಶೇಕಡಾ ನೂರು ಫಲಿತಾಂಶದ ಸಿಹಿ ಸುದ್ದಿಯನ್ನು ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಯರಾಗಿರುವ ಡಾ. ರಾಜೇಶ್ ಕದ್ರಿ ಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.

Read More News

Scroll to Top