ಬೆಂಗಳೂರು: ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಚಾರಕರಾಗಿ ಬಿ.ರಮಾನಾಥ ರೈ ರವರ ನೇತೃತ್ವದ ತಂಡ ರಚನೆಯಾಗಿದೆ. ಸದಸ್ಯರನ್ನಾಗಿ ಮಂಗಳೂರಿನ ಮಾಜಿ ಮೇಯರ್ ಗಳಾದ ಕೆ.ಅಶ್ರಫ್, ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ರಮಾನಂದ ಬೋಳಾರ ರವರುಗಳನ್ನು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ನೇಮಿಸಲಾಗಿದೆ.
























































































































































































