ಯುವ ಸಮಾಜ ಸೇವಕ ಸೂರಜ್ ಸಾಗರ್ ಕುಂಪಲ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆ

108.9K Views 18 Mar 2024

ಮಂಗಳೂರು: ಯುವ ಸಮಾಜ ಸೇವಕ, ಉತ್ಸಾಹಿ ತರುಣ ಸೂರಜ್ ಸಾಗರ್ ಕುಂಪಲ ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೂರಜ್ ಸಾಗರ್ ಕುಂಪಲ ಅವರ ಸಮಾಜ ಸೇವೆಯನ್ನು ಪರಿಗಣಿಸಿ ರಲ್ಲಿ 2020 ರಲ್ಲಿ Mp mla’s ನ್ಯೂಸ್ ಸೌಹಾರ್ದ ಸಂಗಮವು ಮಂಗಳೂರು ಪುರಭವನದಲ್ಲಿ ನಡೆದಾಗ ಸೌಹಾರ್ದ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.


ಮಂಗಳೂರು ಕೆನರಾ ಕಾಲೇಜಿನಲ್ಲಿ ಬಿ.ಎ. ಪದವೀಧರ ಶಿಕ್ಷಣ ಪಡೆದಿರುವ ಸೂರಜ್ ಸಾಗರ್ ಕುಂಪಲ ಅವರು ಬಾಲ್ಯದಿಂದಲೇ ಸಮಾಜ ಸೇವೆಯತ್ತ ಒಲವು ಹರಿಸಿದವರು. ಆಸರೆ ಬಳಗ ಕುಂಪಲ ಎಂಬ ಸಮಾಜಮುಖಿ ಯುವಕ ಸಂಘಟನೆಯ ಸಂಸ್ಥಾಪಕರಾಗಿ ಅವರು 3೦ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ರಿಪೇರಿ, ಆರೋಗ್ಯ, ಆಹಾರ ಕಿಟ್ ವಿತರಣೆ ಮಾಡಿದ್ದಾರೆ.


ಬಡ ಬಾಲಕಿಯೊಬ್ಬಳಿಗೆ ಅನಾರೋಗ್ಯ ಕಾಣಿಸಿಕೊಂಡು, ಆಕೆಯ ಚಿಕಿತ್ಸೆಗೆ 8 ಲಕ್ಷ ರೂಪಾಯಿ ಬೇಕೆಂದಾಗ ದಾನಿಗಳಿಂದ ಹಣ ಸಂಗ್ರಹಿಸಿ ಆಕೆಯ ಚಿಕಿತ್ಸೆಗೆ ಸಕಾಲಿಕ ನೆರವು ಒದಗಿಸಿ ಮಾನವೀಯತೆ ಮೆರೆದಿದ್ದರು.
ಜಿ.ಪಂ.ನ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರ ವಿಭಾಗದಲ್ಲಿ ಸಮನ್ವಯ ಅಧಿಕಾರಿಯಾಗಿ ಗುತ್ತಿಗೆಯಧಾರದಲ್ಲಿ ಹಲವು ವರ್ಷಗಳ ಕಾಲ ಕಾರ‍್ಯ ನಿರ್ವಹಿಸಿದ್ದ ಅವರು ಆ ಸಂದರ್ಭ ಅನೇಕ ಮಂದಿ ವಿಕಲಚೇತನರಿಗೆ ಉಚಿತ ಗಾಲಿ ಕುರ್ಚಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ನೀಡಿ ಸಹಾಯ ಒದಗಿಸಿದ್ದರು.

ವಯೋವೃದ್ಧರಿಗಾಗಿ ಸೂರಜ್ ಸಾಗರ್ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ವಾತ್ಸಲ್ಯ ಛಾಯಾ ಟ್ರಸ್ಟ್ ವೃದ್ದಾಶ್ರಮವನ್ನು ಅತೀ ಶೀಘ್ರದಲ್ಲಿಯೇ ಆರಂಭಿಸಲಿದ್ದಾರೆ


ಅವರು ವಿಸ್ತಾರ ಸಮಾಜ ಸೇವೆಗಾಗಿ ರಾಜಕೀಯ ಪಕ್ಷ ಸೇರುವ ನಿರ್ಧಾರ ಮಾಡಿ ಬಿಜೆಪಿ ಪಕ್ಷ ಸೇರಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ. ಸೂರಜ್ ಸಾಗರ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗಿ ಪ್ರಜ್ವಲಿಸಲಿ ಎಂದು Mpmla:s ನ್ಯೂಸ್ ಶುಭ ಹಾರೈಸುತ್ತದೆ.

Read More News

Scroll to Top