ಪತ್ರಕರ್ತ ತನ್ನ ಸ್ವತಂತ್ರ ಅಭಿವ್ಯಕ್ತಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿ ಕೊಳ್ಳುತ್ತಾನೆ- ಬಿ.ಎಂ. ಬಶೀರ್. *ಗಣೇಶ್ ಅಮಿನಗಡರ ಪತ್ರಕರ್ತ ನ ಅನುಭವಗಳು ಕೃತಿ ಬಿಡುಗಡೆ

117.5K Views 1d ago

ಮಂಗಳೂರು, ನ.19: ಪತ್ರಕರ್ತರು ಏನು ಬೇಕಾದರೂ ಬರೆಯಬಹುದು ಎಂಬ ಭ್ರಮೆ ಸಮಾಜದಲ್ಲಿದೆ. ಆದರೆ ವಾಸ್ತವದಲ್ಲಿ ಅವರು ಪತ್ರಿಕೆಯ ಎಂಟು ಕಾಲಂಗಳಲ್ಲಿ ಬಂಧಿ ಯಾಗಿರುತ್ತಾರೆ !.ಪತ್ರಕರ್ತ ತನ್ನ ಸ್ವತಂತ್ರ ಅಭಿವ್ಯಕ್ತಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಬಿ.ಎಂ. ಬಶೀರ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಸಹಯೋಗದೊಂದಿಗೆ ಗುರುವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಅವರು ಪತ್ರಕರ್ತಗಣೇಶ್ ಅಮಿನಗಡರವರ ‘ಪತ್ರಕರ್ತನ ಅನುಭವಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾ ಡಿದರು.
ಪತ್ರಕರ್ತ ತನ್ನ ಬರವಣಿಗೆಯ ವಿಷಯದಲ್ಲಿ ಸ್ವಾತಂತ್ರ ಹೊಂದಿರುವುದು ಕಡಿಮೆ. ತನ್ನ ವೃತ್ತಿಯಿಂದ ನಿವೃತ್ತಿಯ ಬಳಿಕ ಸ್ವತಂತ್ರನಾಗಿ ನಿರಾಳತೆಯ ಅನುಭವವ ದೊಂದಿಗೆ ತನ್ನ ಸೃಜನಶೀಲತೆ ಯನ್ನು ತೋರ್ಪಡಿಸಲು ಹೆಚ್ಚು ಅವಕಾಶವಿದೆ ಎಂದು ಬಿ.ಎಂ. ಬಶೀರ್ ಅಭಿಪ್ರಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಅನೇಕ ಪತ್ರಕರ್ತರು
ತನ್ನ ವೃತ್ತಿಯಿಂದ ಹೊರಬಂದ ಬಳಿಕ ತಮ್ಮ ಹವ್ಯಾಸಗಳಾದ ಕವನ, ನಾಟಕ, ವಿಮರ್ಶೆ ಮೊದಲಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದನ್ನು ಗಮನಿಸಬಹುದು.ಗಣೇಶ ಅಮಿನಗಡ ರವರು ಕೂಡಾ ಹಲವು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವನ್ನು ತಮ್ಮ ಕೃತಿಯ ಮೂಲಕ ನಿಷ್ಟುರವಾಗಿ ಬರೆದಿದ್ದು, ಈ ಪುಸ್ತಕ ಪತ್ರಕರ್ತರಾದ ನಮ್ಮದೇ ಅನುಭವ ಎನ್ನುವಂತೆ ಕಾಡುತ್ತದೆ ಎಂದರು.
ಮುದ್ರಣ ಮಾಧ್ಯಮದಿಂದ ಹೊರಬಂದು ಇವರು ಡಿಜಿಟಲ್ ಮಾಧ್ಯಮವನ್ನು ತನ್ನ ಬರವಣಿಗೆಯ ವೇದಿಕೆಯಾಗಿಸಿಕೊಂಡು ಇದೀಗ ಕೃತಿಯ ರೂಪ ನೀಡಿದ್ದಾರೆ. ವೃತ್ತಿಯ ಅವಧಿಯಲ್ಲಿ ಬರೆಯಲು ಸಾಧ್ಯವಾಗದ್ದನ್ನು ನಿವೃತ್ತಿಯ ಬಳಿಕ ಬರೆಯುತ್ತಿದ್ದಾರೆ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಣೇಶ್ ಅಮಿನಗಡ, ಪತ್ರಕರ್ತನಾಗಿ ನನ್ನ ಅನುಭವಗಳನ್ನು ಫೇಸ್‌ಬುಕ್ ಮೂಲಕ ಬರೆಯಲು ಆರಂಭಿಸಿ ಅದೀಗ ಪುಸ್ತಕ ರೂಪದಲ್ಲಿ ಬಂದಿದೆ ಎಂದರು.
ಪತ್ರಕರ್ತರಾಗಿ ಬದುಕು ರೂಪಿಸಿಕೊಂಡ ಬಗೆಯನ್ನು ಇಲ್ಲಿ ದಾಖಲಿಸಿರುವೆ. ಜರ್ನಲಿಸ್ಟ್ ನಾಟ್ ರಿಟೈರ್ ನಾಟ್ ಟಾಯರ್ಡ್.ಸ್ಥಿತ್ಯಂತರ ಕಾಲದಲ್ಲಿ ಪತ್ರಿಕೋದ್ಯಮವಿದೆ. ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ ಉಳಿದೀತೆ ಎನ್ನುವ ಚರ್ಚೆಗಳು ಜೋರಾಗಿವೆ ಎಂದರು.
ವೇದಿಕೆಯಲ್ಲಿ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕ ಕಲ್ಲೂರು ನಾಗೇಶ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸಂತೋಷ್ ಮೊಂತೆರೊ ಅವರು ಅತಿಥಿಗಳನ್ನು ಪರಿಚಯಿಸಿದರು, ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

Read More News

ಇಂದು (ನವೆಂಬರ್ 22)ರಂದು ಕನ್ನಡ ಸಾಹಿತ್ಯ ಪರಿಷತ್ತು ದರ್ಬೆ ಪುತ್ತೂರು ಕಚೇರಿಯಲ್ಲಿ ಮಿತ್ರoಪಾಡಿ ಜಯರಾಮ ರೈ ಅಬುದಾಭಿ ನಿರ್ಮಾಣದ ನಾರಾಯಣ ಕುಂಬ್ರ ಸಾಹಿತ್ಯದ ಮಣ್ಣ ಘಮದ ಗ್ರಾಮ ಸಾಹಿತ್ಯ ಸಂಭ್ರಮ ಎಂಬ ಯಕ್ಷಗಾನ ಶೈಲಿಯ ಧ್ವನಿ ಸುರುಳಿ ಬಿಡುಗಡೆ

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

Scroll to Top